ಸಾರಾಂಶ
ಗದಗ: ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಕಾನೂನು ರೀತಿಯಲ್ಲಿಯೇ ಆಗಿದೆ ಎಂದು ಕಾನೂನು, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಚುನಾವಣೆ ಪ್ರಕ್ರಿಯೆಯಲ್ಲಿ ದೋಷ ಹುಡುಕುವ ಅಗತ್ಯವಿಲ್ಲ. ಚುನಾವಣಾ ಅಧಿಕಾರಿ ಈ ಮೇಲ್ ಕೂಡಾ ಪರಿಶೀಲನೆ ನಡೆಸಿದ್ದಾರೆ. ಆದರೆ ಆ ಸಮಯದಲ್ಲಿ (ಚುನಾವಣೆ ನಡೆಯುವ ವೇಳೆಯಲ್ಲಿ) ಯಾವ ಮೇಲ್ ಬಂದಿಲ್ಲ ಅಂತಾ ಅಧಿಕಾರಿಯೇ ಹೇಳಿದ್ದಾರೆ.ಮೂರು ಸದಸ್ಯರ ಅಮಾನತು ಮಾಡುವಲ್ಲಿ ಸಚಿವರ ಪಾತ್ರವಿದೆ ಎನ್ನುವ ಆರೋಪ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಾವಾಗಲಿ, ನಮ್ಮ ಪಾರ್ಟಿ ಆಗಲಿ ಅವರ ಸದಸ್ಯತ್ವ ರದ್ದು ಮಾಡಲು ಹೋಗಿಲ್ಲ. ಅವರು ಮಾಡಿರುವ ಕೃತ್ಯಗಳಿಂದ ಸದಸ್ಯತ್ವ ರದ್ದಾಗಿದೆ.
ಇದರಲ್ಲಿ ನನ್ನ ಪಾತ್ರ ಹೇಗಿರುತ್ತದೆ ಎಂದುತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ ಅವರು, ಅಧ್ಯಕ್ಷರಾಗಿ ಕೃಷ್ಣಾ ಪರಾಪೂರ ಹಾಗೂ ಉಪಾಧ್ಯಕ್ಷೆ ಶಕುಂತಲಾ ಅಕ್ಕಿ18 ಮತಗಳಿಂದ ಆಯ್ಕೆಯಾಗಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಬಿಜೆಪಿಯವರು ಹಾಗೂ ನಾವು ಕೂಡಾ ಚುನಾವಣಾ ರೂಂಗೆ ಹೋಗಿದ್ದೇವೆ 2 ಗಂಟೆಗೆ ಚುನಾವಣಾ ಅಧಿಕಾರಿ ಬಾಗಿಲು ಹಾಕಿಸಿ, ಚುನಾವಣಾ ಪ್ರಕ್ರಿಯೆ ಆರಂಭ ಮಾಡಿದರು.
ಚುನಾವಣಾ ಪ್ರಕ್ರಿಯೆ ನಡೆದಾಗ, ಬಿಜೆಪಿಯವರು 2:30ರ ವೇಳೆಗೆ ಅವರೇ ಬಾಗಿಲು ತೆಗೆದು ಹೋಗಿದ್ದಾರೆ. ಒಂದು ಬಾರಿ ಚುನಾವಣೆ ಆರಂಭವಾದ ಮೇಲೆ ಯಾರು ನಿಲ್ಲಿಸುತ್ತಾರೆ. ಚುನಾವಣೆ ಕಾನೂನು ರೀತಿಯಲ್ಲಿಯೇ ನಡೆದಿದೆ ಎಂದರು.