ನಗರ ಸಭೆ ಪೌರಾಯುಕ್ತ ಬಸವರಾಜ್‌ ನೇತೃತ್ವದಲ್ಲಿ ಅಧಿಕಾರಗಳ ತಂಡ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿಕ್ಕಮಗಳೂರು ನಗರದಲ್ಲಿ ನಗರ ಸಭೆಯಿಂದ ಉದ್ದಿಮೆ ಪರವಾನಗಿ ಪಡೆಯದ ಅಂಗಡಿ, ವ್ಯಾಪಾರ ಮಳಿಗೆಗಳಿಗೆ ಶುಕ್ರವಾರ ನಗರಸಭೆ ಅಧಿಕಾರಿಗಳು ಬೀಗ ಹಾಕಿ ಮುಚ್ಚಿಸಿದ್ದಾರೆ.

ನಗರ ಸಭೆ ಪೌರಾಯುಕ್ತ ಬಸವರಾಜ್‌ ನೇತೃತ್ವದಲ್ಲಿ ಅಧಿಕಾರಗಳ ತಂಡ ಶುಕ್ರವಾರ ನಗರದ ಮುಖ್ಯ ರಸ್ತೆಗಳಾದ ಎಂ.ಜಿ ರಸ್ತೆಯ ಸಂಗೀತ ಮೊಬೈಲ್‌ ಅಂಗಡಿ ಸೇರಿದಂತೆ ವ್ಯಾಪಾರಿ ಮಳಿಗೆಗೆ ಬೀಗ ಹಾಕಲಾಯಿತು.

ಐ.ಜಿ ರಸ್ತೆಗಳಲ್ಲಿ ನಗರಸಭೆಯಿಂದ ನಿರ್ಮಾಣ ಮಾಡಿದ ರಸ್ತೆ ಮತ್ತು ಫುಟ್‌ ಪಾತನ್ನು ಒತ್ತುವರಿ ಮಾಡಿ ವ್ಯಾಪಾರದ ಸರಕು- ಸರಂಜಾಮು ಜೋಡಿಸಿ ಕೊಂಡು ಜತೆಗೆ ಬೋರ್ಡ್‌ ಇಟ್ಟು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದನ್ನು ಪರಿಗಣಿಸಿ ತೆರವುಗೊಳಿಸಲಾಯಿತು.


ಈ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿದ ಪೌರಾಯುಕ್ತ ಬಸವರಾಜ್‌, ವರ್ತಕರು ನಗರ ಸಭೆಗೆ ಶುಲ್ಕ ಪಾವತಿಸಿ ಉದ್ದಿಮೆ ಪರವಾನಗಿ ಪಡೆದುಕೊಂಡು ವ್ಯಾಪಾರ ನಡೆಸಬೇಕು. ಕಳೆದ ಐದಾರು ವರ್ಷಗಳಿಂದ ಉದ್ದಿಮೆ ಪರವಾನಗಿ ಪಡೆಯದೆ ಅಂಗಡಿ ನಡೆಸುತ್ತಿರುವ ವರ್ತಕರಿಗೆ ಅನೇಕ ಬಾರಿ ನೋಟಿಸ್ ನೀಡಿ ತಿಳುವಳಿಕೆ ಮೂಡಿಸಿದ್ದರೂ ಶುಲ್ಕ ಪಾವತಿಸಿ ಉದ್ದಿಮೆ ಪರವಾನಗಿ ನವೀಕರಿಸಿಕೊಂಡಿಲ್ಲ. ಈ ಹಿನ್ನಲೆಯಲ್ಲಿ ಎಂ.ಜಿ ರಸ್ತೆ ೪ ಅಂಗಡಿಗಳಿಗೆ ಬೀಗ ಹಾಕಿ ಬಂದ್ ಮಾಡಿಸಿ ದ್ದೇವೆ ಎಂದು ಎಚ್ಚರಿಸಿದರು.ನಗರದ 25 ಅಂಗಡಿಗಳಿಗೆ ಪರವಾನಗಿ ವಿತರಿಸಿ ₹2 ಲಕ್ಷ ಕ್ಕೂಅಧಿಕ ಪರವಾನಗಿ ಶುಲ್ಕ ಪಡೆಯಲಾಗಿದೆ. ನಗರಸಭೆ ಅಧಿಕಾರಿಗಳು ಉದ್ದಿಮೆಗಳಿಗೆ ಬಂದು ಕೇಳುವ ಮೊದಲು ಉದ್ದಿಮೆಗಳ ಪರವಾನಗಿ ಪಡೆಯಬೇಕೆಂದು ಸೂಚಿಸಿದರು.ಮುಂದಿನ 4 ದಿನ ನಗರದ ಎಲ್ಲಾ ಅಂಗಡಿಗಳಿಗೆ ಭೇಟಿ ನೀಡಿ ಶುಲ್ಕ ಪಾವತಿಸಿ ಪರವಾನಗಿ ವಿತರಿಸುವ ಕಾರ್ಯ ಕೈ ಗೊಂಡಿದ್ದು, ವಾರ್ಡ್ ವಾರು ಆರೋಗ್ಯ ನಿರೀಕ್ಷಕರನ್ನು ನೇಮಿಸಲಾಗಿದೆ. ಸಾರ್ವಜನಿಕರು ಅವರ ಬಳಿ ಶುಲ್ಕ ಪಾವತಿಸಿ ರಶೀದಿ ಪಡೆಯಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ಪರಿಸರ ಎಂಜಿನಿಯರ್‌ ವೆಂಕಟೇಶ್, ಆರೋಗ್ಯ ನಿರೀಕ್ಷಕರಾದ ನಾಗಪ್ಪ, ರಂಗಪ್ಪ, ಈಶ್ವರ್, ಮೇಲ್ವಿಚಾರಕರಾದ ಅಣ್ಣಯ್ಯ, ಶ್ರೀನಿವಾಸ, ವಿವೇಕ್, ಮುರಗೇಶ್, ಸತೀಶ್, ರಮೇಶ್ ಉಪಸ್ಥಿತರಿದ್ದರು.

-ಫೋಟೋ

ಚಿಕ್ಕಮಗಳೂರು ನಗರಸಭೆ ಪೌರಾಯುಕ್ತರ ಬಸವರಾಜ್‌ ನೇತ್ವದಲ್ಲಿ ಪರಿಶೀಲನೆ ನಡೆಸಿ ಉದ್ದಿಮೆ ಪರವಾನಗಿ ಪಡೆಯದ ನಾಲ್ಕು ವ್ಯಾಪಾರಿ ಮಳಿಗೆ ಶುಕ್ರವಾರ ಬೀಗ ಹಾಕಿ ಬಂದ್‌ ಮಾಡಿಸಲಾಗಿದೆ.