ಡೆಂಘೀ ತಡೆಗೆ ಪುರಸಭೆ ಔಷಧಿ ಸಿಂಪಡಣೆ

| Published : Jul 10 2024, 12:31 AM IST

ಸಾರಾಂಶ

ಪುರಸಭೆ ವ್ಯಾಪ್ತಿಯಲ್ಲಿನ ಬಡಾವಣೆಯ ವಿವಿದ ಸ್ಥಳಗಳಲ್ಲಿ ಡೆಂಘೀ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳ ಕುರಿತು ಅರಿವು ಮೂಡಿಸುವ ಭಿತ್ತಿ ಪತ್ರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿ ಜನರಲ್ಲಿ ರೋಗ ತಡೆಗಟ್ಟಲು ಜಾಗೃತಿ ಮೂಡಿಸಲಾಯಿತು.

ಕನ್ನಡಪ್ರಭ ವಾರ್ತೆ ಮಸ್ಕಿ

ಪಟ್ಟಣದಲ್ಲಿ ಸೊಳ್ಳೆಗಳಿಂದ ಹೆಚ್ಚುತ್ತಿರುವ ಡೆಂಘೀ, ಮಲೇರಿಯಾ ರೋಗವನ್ನು ತಡೆಗಟ್ಟಲು ಇಲ್ಲಿನ ಪುರಸಭೆ ಆಡಳಿತ ವತಿಯಿಂದ ವಿವಿಧ ವಾರ್ಡ್‌ಗಳಲ್ಲಿ ಮುಂಜಾಗ್ರತ ಕ್ರಮವಾಗಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ಔಷಧಿ ಸಿಂಪಡಣೆ ಹಾಗೂ ಸ್ವಚ್ಛತೆ ಫಾಗಿಂಗ್ ಮಾಡಿ ರೋಗ ನಿಯಂತ್ರಿಸಲು ಮುಂದಾಗಿದೆ.

ಪಟ್ಟಣದ 2ನೇ ವಾರ್ಡ್ ಸೇರಿದಂತೆ ವಿವಿದ ಬಡಾವಣೆಗಳಲ್ಲಿ ಹಾಗೂ ಡೆಂಘೀ ರೋಗ ಕಾಣಿಸಿಕೊಂಡ ಬಡಾವಣೆಗಳಲ್ಲಿ ಪುರಸಭೆ ಸಿಬ್ಬಂದಿ ಸೊಳ್ಳೆಗಳನ್ನು ನಿಯಂತ್ರಿಸಿ ರೋಗ ತಡೆಗಟ್ಟಲು ಔಷಧಿ ಸಿಂಪಡಣೆ ಮಾಡುತ್ತಿದ್ದು ಇದರಿಂದ ಬಡಾವಣೆಯ ಜನರು ಸ್ವಲ್ಪ ಮಟ್ಟಿಗೆ ರೋಗ ಹರಡುವ ಬೀತಿಯಿಂದ ದೂರ ಆಗುವಂತೆ ಮಾಡಿದೆ.

ಈ ವೇಳೆ ಪುರಸಭೆ ಮುಖ್ಯಾಧಿಖಾರಿ ನರಸರಡ್ಡಿ, ಪುರಸಭೆ ಸದಸ್ಯ ರಮೇಶ ಗುಡಿಸಲಿ, ಆರೋಗ್ಯ ಅಧಿಕಾರಿಗಳಾದ ಗದ್ದೆಪ್ಪ, ಸುನೀಲಕುಮಾರ್, ಮರಿಸ್ವಾಮಿ, ಮೌನೇಶ ಸೇರಿದಂತೆ ಇತರರು ಇದ್ದರು.

ಪೋಸ್ಟರ್ ಅಂಟಿಸಿ ಜಾಗೃತಿ: ಪುರಸಭೆ ವ್ಯಾಪ್ತಿಯಲ್ಲಿನ ಬಡಾವಣೆಯ ವಿವಿದ ಸ್ಥಳಗಳಲ್ಲಿ ಡೆಂಘೀ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳ ಕುರಿತು ಅರಿವು ಮೂಡಿಸುವ ಭಿತ್ತಿ ಪತ್ರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿ ಜನರಲ್ಲಿ ರೋಗ ತಡೆಗಟ್ಟಲು ಜಾಗೃತಿ ಮೂಡಿಸಲಾಯಿತು.