ಸಾರಾಂಶ
ಪಟ್ಟಣದ ನಾಯಕರ ಬೀದಿಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು, ಕುಡಿಯುವ ನೀರು ಪೋಲಾಗುತ್ತಿದ್ದರೂ ಪುರಸಭೆ ಕಣ್ಮುಚ್ಚಿ ಕುಳಿತಿದೆ.ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂದಿನ ನಾಯಕರ ಬೀದಿಯಲ್ಲಿ ಪೈಪ್ ಒಡೆದು ತಿಂಗಳಾಗುತ್ತಿದೆ ಆದರೂ ನೀರು ಬಿಟ್ಟಾಗಲೆಲ್ಲಾ ನೀರು ರಸ್ತೆಯಲ್ಲಿ ಹರಿಯುತ್ತದೆ ಎಂದು ನಾಗರೀಕರು ದೂರಿದ್ದಾರೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ನಾಯಕರ ಬೀದಿಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು, ಕುಡಿಯುವ ನೀರು ಪೋಲಾಗುತ್ತಿದ್ದರೂ ಪುರಸಭೆ ಕಣ್ಮುಚ್ಚಿ ಕುಳಿತಿದೆ.ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂದಿನ ನಾಯಕರ ಬೀದಿಯಲ್ಲಿ ಪೈಪ್ ಒಡೆದು ತಿಂಗಳಾಗುತ್ತಿದೆ ಆದರೂ ನೀರು ಬಿಟ್ಟಾಗಲೆಲ್ಲಾ ನೀರು ರಸ್ತೆಯಲ್ಲಿ ಹರಿಯುತ್ತದೆ ಎಂದು ನಾಗರೀಕರು ದೂರಿದ್ದಾರೆ.
ಪುರಸಭೆ ನೀರು ಬಿಟ್ಟಾಗ ನಾಯಕರ ಬೀದಿಯ ರಸ್ತೆಯಲ್ಲಿ ನೀರು ಚಿಮ್ಮಿ ಬಂದು ರಸ್ತೆಯಲ್ಲಿ ಹರಿಯುತ್ತದೆ ಆದರೂ ವಾರ್ಡ್ ಸದಸ್ಯರಾಗಲಿ, ಪುರಸಭೆ ಅಧಿಕಾರಿಗಳಾಗಲಿ ಇತ್ತ ಗಮನ ಹರಿಸುತ್ತಿಲ್ಲ. ಬೇಸಿಗೆ ಆರಂಭವಾಗಿದೆ ಕುಡಿಯುವ ಹನಿ ನೀರಿಗೂ ಪರದಾಟವಿದೆ, ಇಂತಹ ಕಾಲದಲ್ಲಿ ಕುಡಿಯುವ ನೀರು ಪೋಲಾಗುತ್ತಿರುವುದನ್ನು ನಿಲ್ಲಿಸಲು ಪುರಸಭೆ ಆಡಳಿತ ಮಂಡಳಿಯಿಂದ ಆಗಿಲ್ಲ ಎಂದು ಜನರು ಆರೋಪಿಸಿದ್ದಾರೆ.ರಸ್ತೆಯಲ್ಲಿ ಕುಡಿಯುವ ನೀರು ಪೋಲಾಗಿ ಹರಿದಾಡುತ್ತಿದೆ. ಬೈಕ್, ಕಾರು, ಆಟೋಗಳು ಸಂಚರಿಸುವ ವೇಳೆ ರಸ್ತೆ ಬದಿಯಲ್ಲಿ ನಡೆದು ಹೋಗುವ ಜನರಿಗೆ ನೀರು ರಾಚುತ್ತಿದೆ.
ಪೋಲು ತಡೆಯಲಿ:ಪುರಸಭೆ ಆಡಳಿತ ಮಂಡಳಿ ಪೈಪ್ ಒಡೆದ ಸ್ಥಳವನ್ನು ದುರಸ್ಥಿ ಪಡಿಸಲು ಒಂದು ತಿಂಗಳು ಬೇಕಾ? ಪುರಸಭೆ ಆಡಳಿತ ಮಂಡಳಿಗೆ ಪೈಪ್ ದುರಸ್ಥಿ ಪಡಿಸಲು ಇರುವ ಅಡ್ಡಿಯಾದರೂ ಏನು ಎಂಬ ಪ್ರಶ್ನೆ ಎದ್ದಿದೆ.