ಸಾರಾಂಶ
ನರಗುಂದ: ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳಿು ಚಿಕ್ಕ ಮಕ್ಕಳ ಮೇಲೆ ದಾಳಿ ಮಾಡುತ್ತಿವೆ. ಆದ್ದರಿಂದ ಪುರಸಭೆ ಅಧಿಕಾರಿಗಳು ಈ ನಾಯಿಗಳನ್ನು ಸ್ಥಳಾಂತರ ಮಾಡಬೇಕು ಎಂದು ಜಿಲ್ಲಾ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಅಧ್ಯಕ್ಷ ನಂದೀಶ ಮಠದ ಆಗ್ರಹಿಸಿದರು. ಸೋಮವಾರ ಪಟ್ಟಣದ ಪುರಸಭೆ ಅಧಿಕಾರಿಗಳಗೆ ಮನವಿ ನೀಡಿ ಆನಂತರ ಮಾತನಾಡಿ, ನರಗುಂದ ಪಟ್ಟಣದ ವೀರೇಶ ದೊಡ್ಡಕಾಳೆ ಎಂಬುವರ 3 ವರ್ಷದ ಮಗನಾದ ರುದ್ರೇಶ ದೊಡ್ಡಕಾಳೆಯವರು ತಮ್ಮ ಸಂಬಂಧಿಕರ ಕಾರ್ಯಕ್ರಮಕ್ಕೆ ಮುಂಡರಗಿ ಹೋದಾಗ ಮನೆ ಮುಂದೆ ಬೀದಿ ನಾಯಿ ಮಾರಣಾಂತಿಕ ಹಲ್ಲೆ ಮಾಡಿದೆ. ಆದ್ದರಿಂದ ಪುರಸಭೆ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಓಡಾಡುವ ಬೀದಿ ನಾಯಿಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸಲು ಒಂದು ವಾರದಲ್ಲಿ ಮುಂದಾಗಬೇಕು. ಒಂದು ವೇಳೆ ಪುರಸಭೆ ಅಧಿಕಾರಿಗಳು ಈ ಬೀದಿ ನಾಯಿಗಳನ್ನು ಸ್ಥಳಾಂತರ ಮಾಡದಿದ್ದರೆ ಮುಂದಾಗುವ ಅನಾಹುತಕ್ಕೆ ಅಧಿಕಾರಿಗಳಿಗೆ ಹೊಣೆಗಾರರು ಎಂದು ಎಚ್ಚರಿಕೆ ನೀಡಿದರು.
ಪುರಸಭೆ ಮ್ಯಾನೇಜರ್ ಮಲ್ಲಪ್ಪ ಮನವಿ ಸ್ವೀಕರಿಸಿ, ಬೀದಿ ನಾಯಿಗಳ ಸ್ಥಳಾಂತರ ಕುರಿತು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಸುನೀಲ ಬೆಳಗಾವಿ, ಸದಾನಂದ ರಾಯರಡ್ಡಿ, ಅಭಿಷೇಕ ಕರೀಕಟ್ಟಿ, ಶಶಿಕುಮಾರ ಬೋಯಿಟೆ, ಶಿವಾನಂದ ನಾಗನೂರ, ಮಾಂತೇಶ ಪಿರಂಗಿ, ಶ್ರೀಧರ ಹೆಬಸೂರ, ಪ್ರದೀಪ ಹಟ್ಟಿ, ಪುಂಡಲಿಕ ಹವಾಲ್ದಾರ್, ಮುತ್ತು, ವಿನಾಯಕ ಚಿಗೋಳಿ, ಮಂಜುನಾಥ ರಾಮಣ್ಣವರ, ರವಿ ಕೀಲಿಕೈ, ಮಂಜುನಾಥ ಪಲ್ಲೇದ, ಸಂಗು ಚರಂತಿಮಠ, ಸೇರಿದಂತೆ ಮುಂತಾದವರು ಇದ್ದರು.
;Resize=(128,128))
;Resize=(128,128))
;Resize=(128,128))