ಸಾರಾಂಶ
ಪಟ್ಟಣದ ಪುರಸಭೆಯಲ್ಲಿ ಅಧ್ಯಕ್ಷೆ ಜ್ಯೋತಿ ಲಕ್ಷ್ಮೀ ಬಾಬು 2025- 26ನೇ ಸಾಲಿನಲ್ಲಿ 22.90 ಲಕ್ಷ ರು. ಉಳಿತಾಯ ಬಜೆಟ್ ಮಂಡಿಸಿದ್ದಾರೆ.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಆರಂಭ ಶಿಲ್ಕು 5.27 ಕೋಟಿ ಸೇರಿದಂತೆ 13.16 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಒಟ್ಟಾರೆ 18.43 ಕೋಟಿ ಆದಾಯ ಹಾಗೂ 18.21 ಕೋಟಿ ಖರ್ಚು ಅಂದಾಜಿಸಿ ಒಟ್ಟು 22.90 ಲಕ್ಷ ರು. ಉಳಿತಾಯ ಬಜೆಟ್ ಮಂಡಿಸಲಾಗಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಪುರಸಭೆಯಲ್ಲಿ ಅಧ್ಯಕ್ಷೆ ಜ್ಯೋತಿ ಲಕ್ಷ್ಮೀ ಬಾಬು 2025- 26ನೇ ಸಾಲಿನಲ್ಲಿ 22.90 ಲಕ್ಷ ರು. ಉಳಿತಾಯ ಬಜೆಟ್ ಮಂಡಿಸಿದ್ದಾರೆ.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಆರಂಭ ಶಿಲ್ಕು 5.27 ಕೋಟಿ ಸೇರಿದಂತೆ 13.16 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಒಟ್ಟಾರೆ 18.43 ಕೋಟಿ ಆದಾಯ ಹಾಗೂ 18.21 ಕೋಟಿ ಖರ್ಚು ಅಂದಾಜಿಸಿ ಒಟ್ಟು 22.90 ಲಕ್ಷ ರು. ಉಳಿತಾಯ ಬಜೆಟ್ ಮಂಡಿಸಲಾಗಿದೆ.
ನಿರೀಕ್ಷಿತ ಆದಾಯ: ವಾಣಿಜ್ಯ ಮಳಿಗೆಗಳ ಇತರೆ ಕಟ್ಟಡಗಳಿಂದ 9 ಲಕ್ಷ, ಅಭಿವೃದ್ಧಿ ಶುಲ್ಕ 46 ಲಕ್ಷ, ವ್ಯಾಪಾರ, ಪರವಾನಗಿ ಶುಲ್ಕ 13 ಲಕ್ಷ, ಕಟ್ಟಡ ಕಾಯ್ದೆಗಳಿಗೆ ಸಂಬಂಧಪಟ್ಟ ಶುಲ್ಕಗಳು 21 ಲಕ್ಷ, ರಸ್ತೆ ಕಟಿಂಗ್ 5 ಲಕ್ಷ, ವಿದ್ಯುತ್‌ಚ್ಛಕ್ತಿ ಅನುದಾನ 2.20 ಕೋಟಿ, ವಾರದ ಸಂತೆ ನೆಲ ಬಾಡಿಗೆ 18.75 ಲಕ್ಷ, ನೀರಿನ ತೆರಿಗೆ, ಒಳಚರಂಡಿ , ನೀರು ಸರಬರಾಜು ಸಂಪರ್ಕ ಶುಲ್ಕ 44.75 ಲಕ್ಷ, ಎಸ್‌ಎಫ್‌ಸಿ ಅನಿರ್ಬಂಧಿತ ಅನುದಾನ 1 ಕೋಟಿ, ಎಸ್‌ಎಫ್‌ಸಿ ಇತರೆ ಅನುದಾನ 20 ಲಕ್ಷ, ಎಸ್‌ಎಫ್‌ಸಿ ವಿಶೇಷ ಅನುದಾನ 1 ಕೋಟಿ, ಜನನ, ಮರಣ ಪ್ರಮಾಣ ಪತ್ರ ಶುಲ್ಕ 4 ಲಕ್ಷ, ಆಸ್ತಿ ತೆರಿಗೆ 1.13 ಕೋಟಿ, ದಂಡ, ಖಾತಾ ಮತ್ತು ವರ್ಗಾವಣೆ ಶುಲ್ಕ 31 ಲಕ್ಷ, ಶಾಸಕ ಮತ್ತು ಸಂಸದರ ಅನುದಾನ 1 ಕೋಟಿ ಹಾಗೂ ಆರಂಭ ಶಿಲ್ಕು 5.27 ಕೋಟಿ ಸೇರಿದಂತೆ 18.43 ಕೋಟಿ ಆದಾಯ ನಿರೀಕ್ಷಿಸಲಾಗಿದೆ.ನಿರೀಕ್ಷಿತ ವೆಚ್ಚ:
ಕಚೇರಿ ನೌಕರರ ವೇತನ ಅನುದಾನ 3.25 ಕೋಟಿ, ಕಚೇರಿ, ಆಡಳಿತ ವೆಚ್ಚ 10 ಲಕ್ಷ, ಕಾನೂನು, ಲೆಕ್ಕ ಪರಿಶೋಧನಾ ಶುಲ್ಕ, ಮೂರನೇ ಪಾರ್ಟಿ ತಪಾಸಣಾ ಶುಲ್ಕ, ದೂರವಾಣಿ, ವಿದ್ಯುತ್, ಅಂಚೆ ವೆಚ್ಚಗಳು 38.50 ಲಕ್ಷ, ಪೀಠೋಪಕರಣ, ದುರಸ್ತಿ, ಬ್ಯಾಂಕ್ ಶುಲ್ಕ, ಚುನಾವಣಾ ವೆಚ್ಚ ನಾಡ ಹಬ್ಬಕ್ಕಾಗಿ 12.50 ಲಕ್ಷ, ಕ್ಷೇಮಾಭಿವೃದ್ಧಿ ಮತ್ತು ದಿನಗೂಲಿ ನೌಕರರ ವೇತನ 30 ಲಕ್ಷ, ಪುರಸಭೆ ಸದಸ್ಯರ ವೆಚ್ಚ 13 ಲಕ್ಷ, ಹೊರಗುತ್ತಿಗೆ ಕಾರ್ಯಾಚರಣೆ, ಕಂಪ್ಯೂಟರ್ ಆಪರೇಟರ್, ಐಟಿ ಸ್ಟಾಫ್ ವೆಚ್ಚ 18 ಲಕ್ಷ, ಬೀದಿ ದೀಪ ಮತ್ತು ನೀರು ಸ್ಥಾವರಗಳ ವಿದ್ಯುತ್ ಬಿಲ್ 2.20 ಕೋಟಿ. ಹೊರಗುತ್ತಿಗೆ ಬೀದಿ ದೀಪ ನಿರ್ವಹಣೆ 20 ಲಕ್ಷ, ವಾಹನಗಳ ದುರಸ್ತಿ 6 ಲಕ್ಷ, ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಅಂಗವಿಕಲರ ಕಲ್ಯಾಣ ವೆಚ್ಚ 33 ಲಕ್ಷ, ಪೌರ ಕಾರ್ಮಿಕರ ಮನೆ ನಿರ್ಮಾಣಕ್ಕಾಗಿ ಸಹಾಯಧನ 10 ಲಕ್ಷ, ಸಾರ್ವಜನಿಕ ಶೌಚಗೃಹ ನಿರ್ಮಾಣಕ್ಕಾಗಿ 5 ಲಕ್ಷ, ಸ್ಮಶಾನ ಅಭಿವೃದ್ಧಿಗೆ 10 ಲಕ್ಷ, ಉದ್ಯಾನ ಅಭಿವೃದ್ಧಿ ಕಾಮಗಾರಿಗೆ 15 ಲಕ್ಷ ಹಾಗೂ ನೀರು ಸರಬರಾಜು ವಿಭಾಗದ ಸಂಬಂಧಿತ ಯಂತ್ರೋಪಕರಣಗಳು ಮತ್ತು ಪೈಪ್ ಲೈನ್, ಬೋರ್‌ವೆಲ್, ಟ್ಯಾಂಕ್ ನಿರ್ಮಾಣ ಹಾಗೂ ನೀರು ವಿತರಣಾ ವ್ಯವಸ್ಥೆಗೆ 85 ಲಕ್ಷ ಸೇರಿದಂತೆ 18.21 ಕೋಟಿ ವೆಚ್ಚ ನಿರೀಕ್ಷಿಸಲಾಗಿದೆ.