ಸಾಹಿತ್ಯ ಸಮ್ಮೇಳಕ್ಕೆ ಮುನಿಕೃಷ್ಣಪ್ಪ ಅಧ್ಯಕ್ಷ

| Published : Feb 09 2025, 01:16 AM IST

ಸಾರಾಂಶ

ಕನ್ನಡ ಸಮ್ಮೇಳನದಲ್ಲಿ ನಾಡಿನ ಹಲವು ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ವೇದಿಕೆ ಕಾರ‍್ಯಕ್ರಮದಲ್ಲಿ ಶಾಸಕ ಕೆ.ವೈ.ನಂಜೇಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ವಿಚಾರ ಗೋಷ್ಠಿಗಳು, ಕವಿಗೋಷ್ಠಿ ಸೇರಿದಂತೆ ಹಲವು ಮನರಂಜನಾ ಕಾರ‍್ಯಕ್ರಮಗಳು ನಡೆಯಲಿದ್ದು, ಹಲವು ಗಣ್ಯರನ್ನು ಅಭಿನಂದಿಸಲಾಗುವುದು

ಕನ್ನಡಪ್ರಭ ವಾರ್ತೆ ಮಾಲೂರು

ಹಿರಿಯ ಸಾಹಿತಿ, ವಕೀಲ, ಕುವೆಂಪು ಅನುಯಾಯಿ ಕೆ.ಮುನಿಕೃಷ್ಣಪ್ಪ ಅವರನ್ನು ತಾಲೂಕಿನ ಅರಳೇರಿ ಗ್ರಾಮದಲ್ಲಿ ಫೆ.13 ರಂದು ನಡೆಯುವ ಕಸಬಾ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕಸಾಪ ತಾ.ಅಧ್ಯಕ್ಷ ಎಂ.ವಿ.ಹನುಮಂತಯ್ಯ ಹೇಳಿದರು.ಪಟ್ಟಣದ ಕಸಾಪ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಮಾಬಾಯಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಅನಾವರಣ, ಕವಿಗೋಷ್ಠಿ ಹಾಗೂ ಅಭಿನಂಧನಾ ಕಾರ‍್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅನಿಕೇತನ ಸಾಂಸ್ಕೃತಿಕ ವೇಕೆಯ ರಾಜ್ಯಾಧ್ಯಕ್ಷ ಸಾಹಿತಿ ಕೆ.ಮುನಿಕೃಷ್ಣಪ್ಪ ಅವರನ್ನು ಅಭಿನಂದಿಸಿ ಮಾತನಾಡಿದರು.

ವಿಚಾರ ಗೋಷ್ಠಿ, ಕವಿಗೋಷ್ಠಿ

ಕನ್ನಡ ಸಮ್ಮೇಳನದಲ್ಲಿ ನಾಡಿನ ಹಲವು ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ವೇದಿಕೆ ಕಾರ‍್ಯಕ್ರಮದಲ್ಲಿ ಶಾಸಕ ಕೆ.ವೈ.ನಂಜೇಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ವಿಚಾರ ಗೋಷ್ಠಿಗಳು, ಕವಿಗೋಷ್ಠಿ ಸೇರಿದಂತೆ ಹಲವು ಮನರಂಜನಾ ಕಾರ‍್ಯಕ್ರಮಗಳು ನಡೆಯಲಿದ್ದು, ಹಲವು ಗಣ್ಯರನ್ನು ಅಭಿನಂದಿಸಲಾಗುವುದು. ತಾಲೂಕಿನ ಪ್ರತಿಯೊಂದು ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ‍್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು. ಇದೇ ಸಂದರ್ಭದಲ್ಲಿ ನಡೆದ ಕವಿಗೋಷ್ಠಿ ಕಾರ‍್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅನಿಕೇತನ ಸಾಂಸ್ಕೃತಿಕ ವೇಕೆಯ ರಾಜ್ಯಾಧ್ಯಕ್ಷ, ಸಾಹಿತಿ ಕೆ.ಮುನಿಕೃಷ್ಣಪ್ಪ, ವೆಂಕಟೇಶ್, ಪಿ.ಎಂ.ಕೃಷ್ಣಪ್ಪ, ಎನ್.ನಳೀನಾಕ್ಷಿ, ವಿದ್ವಾನ್ ಸಿ.ಆರ್.ನಟರಾಜ್ ಸೇರಿದಂತೆ ಹಲವು ಕವಿಗಳು ಕವನಗಳನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಪಿ.ಎಂ.ಕೃಷ್ಣಪ್ಪ, ಟಿ.ಸುಮಿತ್ರಮ್ಮ, ಕೆ.ಎಂ.ರಾಜಪ್ಪ, ನಾರಿಗಾನಹಳ್ಳಿ ಶ್ರೀನಿವಾಸ್, ಪದ್ಮಮ್ಮ, ಎನ್.ರಾಜೇಶ್, ಕೆ.ಆರ್.ರಂಜೀತ್ ಕುಮಾರ್ ಅವರನ್ನು ಅಭಿನಂದಿಸಲಾಯಿತು.

ಕಾರ‍್ಯಕ್ರಮದಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜ.ಮು.ಚಂದ್ರ, ಹಿರಿಯ ಸಾಹಿತಿ ಮಾಸ್ತಿ ಕೃಷ್ಣಪ್ಪ, ಬಿ.ರಮಾಮಣಿ, ಕರವೇ ತಾ.ಅಧ್ಯಕ್ಷ ನಾರಾಯಣಸ್ವಾಮಿ(ನಾನಿ), ಪ್ರ.ಕಾರ‍್ಯದರ್ಶಿ ದಯಾನಂದ, ಆರ್.ವೆಂಕಟೇಶ್ ಇನ್ನಿತರರು ಹಾಜರಿದ್ದರು.