ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ನಿರ್ಮಿಸಿರುವ ಕೊಳಗೇರಿಯ ಮನೆಗಳಿಗೆ ಮುನಿರಾಜು ಚಾಲನೆ

| Published : Mar 03 2024, 01:34 AM IST / Updated: Mar 03 2024, 12:15 PM IST

ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ನಿರ್ಮಿಸಿರುವ ಕೊಳಗೇರಿಯ ಮನೆಗಳಿಗೆ ಮುನಿರಾಜು ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಮಂತ್ರಿ ಆವಾಸ್ ಯೋಜನೆಯ ಸರ್ವರಿಗೂ ಸೂರು ಯೋಜನೆಯಡಿ ಕರ್ನಾಟಕ ವಸತಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮಲ್ಲಸಂದ್ರದ ರವೀಂದ್ರನಗರ ಕಾಲೋನಿಯಲ್ಲಿ ಮನೆಗಳ ಹಂಚಿಕೆಗೆ ಶಾಸಕ ಎಸ್.ಮುನಿರಾಜು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ‌

ಪ್ರಧಾನಮಂತ್ರಿ ಆವಾಸ್ ಯೋಜನೆಯ ಸರ್ವರಿಗೂ ಸೂರು ಯೋಜನೆಯಡಿ ಕರ್ನಾಟಕ ವಸತಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮಲ್ಲಸಂದ್ರದ ರವೀಂದ್ರನಗರ ಕಾಲೋನಿಯಲ್ಲಿ ಮನೆಗಳ ಹಂಚಿಕೆಗೆ ಶಾಸಕ ಎಸ್.ಮುನಿರಾಜು ಚಾಲನೆ ನೀಡಿದರು.

2017ರಲ್ಲಿ ಅಂದಿನ ಸರ್ಕಾರದ ವತಿಯಿಂದ 456 ಮನೆಗಳು ಮಂಜೂರು ಮಾಡಲಾಗಿತ್ತು. ಕಮ್ಮಗೊಂಡನಹಳ್ಳಿಯಲ್ಲಿ 300, ಹಾಗೂ ಮಲ್ಲಸಂದ್ರದಲ್ಲಿ 156 ಮನೆಗಳು ಮಂಜೂರು ಮಾಡಲಾಗಿತ್ತು. 

ಅದರಲ್ಲಿ ನಿರ್ಮಾಣಗೊಂಡ 257 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗಿದೆ. ಮಲ್ಲಸಂದ್ರದಲ್ಲಿ ಆರು ಮನೆಗಳಿಗೆ ಚಾಲನೆ ನೀಡಲಾಗಿದೆ. ಫಲಾನುಭವಿಗಳು ತಲಾ ₹1 ಲಕ್ಷ ಕಟ್ಟಿದರೆ ಇನ್ನೂಳಿದ ₹6 ಲಕ್ಷ ಸರ್ಕಾರ ಕೊಡಲಿದೆ ಎಂದರು.

ಕೆ.ಅರ್.ಪುರಂನ ನಾಗೇನಹಳ್ಳಿಯಲ್ಲಿ ಮುಖ್ಯಮಂತ್ರಿಗಳು ಇಂದು ಸಾವಿರಾರು ಮನೆಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಗಾಣಿಗರಹಳ್ಳಿಯಲ್ಲಿ 1 ಸಾವಿರ ಹಾಗೂ ಶೆಟ್ಟಿಹಳ್ಳಿಯಲ್ಲಿ 360 ಮನೆಗಳನ್ನು ರಾಜೀವ್ ಗಾಂಧಿ ವಸತಿಯೋಜನೆಯಡಿ ನಿರ್ಮಾಸಲಾಗುತ್ತಿದೆ. ಯೋಜನೆಯಡಿ ₹50 ಸಾವಿರ ಕಟ್ಟಿದರೆ ಮಿಕ್ಕ ಹಣ ಲೋನ್ ಮೂಲಕ ಕಟ್ಟುವ ಅವಕಾಶ ಕೂಡ ಇದೆ ಎಂದು ತಿಳಿಸಿದರು.

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಲಗ್ಗರೆ ವಿಭಾಗದ ಸಹಾಯಕ ವ್ಯವಸ್ಥಾಪಕ ನಿರ್ದೇಶಕಿ ಉಷಾ ಕಿರಣ್, ಬಿಜೆಪಿ ಮುಖಂಡರಾದ ಟಿ.ಶಿವಕುಮಾರ್, ವಾರ್ಡ್ ಅಧ್ಯಕ್ಷ ಗಂಗರಾಜು, ಗಂಗಾಧರ್, ರಘು, ಮಾರುತಿ, ಕಾಂತರಾಜು, ಪಾರ್ವತಿ, ಗುತ್ತಿಗೆದಾರರಾದ ರಕ್ಷಿತ್, ವರುಣ್ ಇದ್ದರು.