ಪತ್ನಿಯೇ ಸುಫಾರಿ ಕೊಟ್ಟು ಪತಿಯ ಹತ್ಯೆ: 6 ಜನರ ಬಂಧನ

| Published : Jul 26 2025, 12:30 AM IST

ಪತ್ನಿಯೇ ಸುಫಾರಿ ಕೊಟ್ಟು ಪತಿಯ ಹತ್ಯೆ: 6 ಜನರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ತಾಲೂಕಿನ ಕೃಷ್ಪಾಪುರ ಗ್ರಾಮದ ಬಳಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದ ಗ್ರಾಪಂ ಸದಸ್ಯೆ ಪತಿಯ ಶವದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಪತ್ನಿಯೇ ಸುಪಾರಿ ಕೊಟ್ಟು ಗಂಡನನ್ನು ಕೊಲೆ ಮಾಡಿಸಿರುವ ವಿಚಾರ ಪೊಲೀಸ್ ತನಿಖೆಯಿಂದ ಹೊರ ಬಿದ್ದಿದೆ.

ಚನ್ನಪಟ್ಟಣ: ತಾಲೂಕಿನ ಕೃಷ್ಪಾಪುರ ಗ್ರಾಮದ ಬಳಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದ ಗ್ರಾಪಂ ಸದಸ್ಯೆ ಪತಿಯ ಶವದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಪತ್ನಿಯೇ ಸುಪಾರಿ ಕೊಟ್ಟು ಗಂಡನನ್ನು ಕೊಲೆ ಮಾಡಿಸಿರುವ ವಿಚಾರ ಪೊಲೀಸ್ ತನಿಖೆಯಿಂದ ಹೊರ ಬಿದ್ದಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಕಲಾ, ಯೋಗೇಶ, ಶಾಂತರಾಜು, ಸೂರ್ಯಕುಮಾರ್, ಶಿವಲಿಂಗ, ಚಂದನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಜೂನ್ ೨೪ರಂದು ಗ್ರಾಪಂ ಸದಸ್ಯೆ ಚಂದ್ರಕಲಾ ಪತಿ ಲೋಕೇಶ್ ಶವ ಪತ್ತೆಯಾಗಿತ್ತು. ಮೊದಲಿಗೆ ಇದು ಆತ್ಮಹತ್ಯೆ ಎಂಬಂತೆ ಮೇಲ್ನೋಟಕ್ಕೆ ಕಂಡುಬಂದಿತ್ತು. ಆದರೆ, ಇದೀಗ ಪತ್ನಿಯೇ ಸುಫಾರಿ ನೀಡಿ ಗಂಡನನ್ನು ಕೊಲೆ ಮಾಡಿಸಿರುವ ವಿಚಾರ ಬೆಳಕಿಗೆ ಬಂದಿದೆ. ಲೋಕೇಶ್ ಶವದ ಬಳಿ ವಿಷದ ಬಾಟಲಿ ದೊರೆತಿತ್ತು. ಇದು ಆತ್ಮಹತ್ಯೆ ಎನ್ನುವ ರೀತಿಯಲ್ಲಿ ಯೋಜನೆ ರೂಪಿಸಲಾಗಿತ್ತು. ಹೀಗಾಗಿ ಪೊಲೀಸರು ಮೊದಲು ಯುಡಿಆರ್ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಇದೀಗ ಸಂಚು ರೂಪಿಸಿ ವಿಷ ಕುಡಿಸಿ ಕೊಲೆ ಮಾಡಿರುವ ವಿಚಾರ ಹೊರಬಿದ್ದಿದೆ.

೩.೫ ಲಕ್ಷ ಸುಫಾರಿ: ಗ್ರಾಪಂ ಸದಸ್ಯೆ ಚಂದ್ರಕಲಾಗೆ ಬೆಂಗಳೂರಿನ ಯೋಗೀಶ್ ಎಂಬಾತನ ಜತೆ ಸಂಬಂಧವಿದ್ದು, ಈ ಹಿನ್ನೆಲೆಯಲ್ಲಿ ಗಂಡನ ಕೊಲೆಗೆ ಆಕೆ ಯೋಗೀಶ್ ಜತಗೂಡಿ ೩.೫ ಲಕ್ಷಕ್ಕೆ ಸುಫಾರಿ ನೀಡಿದ್ದಳು ಎನ್ನಲಾಗಿದ್ದು, ಇದೀಗ ಈಕೆಯೂ ಸೇರಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಅನುಮಾನ ವ್ಯಕ್ತಪಡಿಸಿದ್ದ ತಂದೆ:

ನನ್ನ ಮಗ ಲೋಕೇಶ್‌ಗೂ ನನ್ನ ಸೊಸೆಗೂ ಜಮೀನು ಮಾರಾಟ ವಿಚಾರವಾಗಿ ಜಗಳ ನಡೆದಿದೆ. ಇದಲ್ಲದೇ ನನ್ನ ಸೊಸೆಗೆ ಬೇರೆಯವರ ಜತೆ ಸಂಬಂಧವಿದ್ದು, ನನ್ನ ಸೊಸೆ ಹಾಗೂ ಇತರರು ಸೇರಿ ನನ್ನ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಲೋಕೇಶ್ ತಂದೆ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದರು.

ಸುದ್ದಿಗೋಷ್ಠಿ ನಡೆಸಿದ್ದ ಚಂದ್ರಕಲಾ:

ಲೋಕೇಶ್ ಶವ ಪತ್ತೆ ಬಳಿಕ ಚನ್ನಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಚಂದ್ರಕಲಾ, ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ವಾದಿಸಿದ್ದಳು. ಪೊಲೀಸರು ನನ್ನ ಸಹೋದರನನ್ನು ವಿಚಾರಣೆ ನೆಪದಲ್ಲಿ ಕರೆಸಿ, ಮೆಡಿಕಲ್ ಸ್ಟೋರ್‌ನಲ್ಲಿ ನನ್ನ ಸಹೋದರನೇ ವಿಷದ ಬಾಟಲು ಖರೀದಿಸಿದ್ದ ಎಂದು ಹೇಳಿಕೆ ನೀಡುವಂತೆ ಬಲವಂತ ಮಾಡಿದ್ದಾರೆ ಎಂದು ಆರೋಪಿಸಿದ್ದಳು.

ಆದರೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರಿಗೆ ಚಂದ್ರಕಲಾ ಮೇಲೆ ಅನುಮಾನವಿತ್ತು. ಲೋಕೇಶ್ ಶವ ದೊರೆತ ಲೋಕೇಷನ್‌ನ ಮೊಬೈಲ್ ಟವರ್ ಜತೆಗೆ ಇವರಿಬ್ಬರ ಕಾಲ್ ಹಿಸ್ಟಿರಿಯನ್ನು ಪೊಲೀಸರು ಪಡೆದಿದ್ದರು. ಪ್ರಕರಣದ ಆಳಕ್ಕೆ ಇಳಿಯುತ್ತಿದ್ದಂತೆ ಪೊಲೀಸರಿಗೆ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂಬುದು ಖಚಿತವಾಗಿದೆ.

ಪೊಟೋ೨೫ಸಿಪಿಟಿ2:

ಪೊಟೋ೨೫ಸಿಪಿಟಿ3:

ಪೊಟೋ೨೫ಸಿಪಿಟಿ4:

ಪೊಟೋ೨೫ಸಿಪಿಟಿ5:

ಪೊಟೋ೨೫ಸಿಪಿಟಿ6:

ಪೊಟೋ೨೫ಸಿಪಿಟಿ7:

ಪೊಟೋ೨೫ಸಿಪಿಟಿ೬: