ಬೈಲಹೊಂಗಲ: ಮದುವೆಯಾಗಿ ಮೂರು ವರ್ಷವಾದರೂ ಮಕ್ಕಳಾಗಿಲ್ಲ ಎಂದು ಜಗಳ ಮಾಡುತ್ತಿದ್ದ ಹೆಂಡತಿಯನ್ನು ಪತಿಯೇ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ನಡೆದಿದೆ. ನೇಗಿನಹಾಳದ ರಾಜೇಶ್ವರಿ ಫಕ್ಕೀರಪ್ಪ ಗಿಲಕ್ಕನವರ (21) ಕೊಲೆಯಾದ ಮಹಿಳೆ. ಫಕ್ಕೀರಪ್ಪ ಬಸಪ್ಪ ಗಿಲಕ್ಕನವರ (28) ಕೊಲೆ ಮಾಡಿದ ಆರೋಪಿ.

ರಾಜೇಶ್ವರಿ ಮತ್ತು ಫಕ್ಕೀರಪ್ಪ 3 ವರ್ಷಗಳ ಹಿಂದೆ ಮದುವೆಯಾಗಿದ್ದು, ಮೂರು ವರ್ಷವಾದರೂ ಇನ್ನೂ ಮಕ್ಕಳಾಗಿರಲಿಲ್ಲ. ಹೀಗಾಗಿ, ಮಕ್ಕಳಾಗಿಲ್ಲವೆಂದು ಪತ್ನಿ ರಾಜೇಶ್ವರಿ ಗಂಡನಿಗೆ ಪದೇಪದೇ ಕಿರಿಕಿರಿ ಮಾಡುತ್ತಿದ್ದಳು. ಪ್ರತಿದಿನ ಈ ಬಗ್ಗೆ ಜಗಳವಾಡುತ್ತಿದ್ದಳು. ಇದರಿಂದ ಸಿಟ್ಟಿಗೆದ್ದಿದ್ದ ಪತಿ ಫಕ್ಕೀರಪ್ಪ ಮನೆಯಲ್ಲಿ ಪತ್ನಿ ರಾಜೇಶ್ವರಿ ನಿದ್ದೆ ಮಾಡುವ ವೇಳೆ ಹಗ್ಗದಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಈ ಬಗ್ಗೆ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಬಸರಗಿ, ಡಿವೈಎಸ್ಪಿ ವೀರಯ್ಯ ಹಿರೇಮಠ, ಕಿತ್ತೂರ ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್ಐ ಎಫ್.ವೈ.ಮಲ್ಲೂರ ಭೇಟಿ ನೀಡಿ ಪರಿಶೀಲಿಸಿದ್ದಾರೆ.