ಮೂರ್ನಾಡು: ನೂತನ ಸುಸಜ್ಜಿತ ಹಿಂದೂ ರುದ್ರಭೂಮಿ ಉದ್ಘಾಟನೆ

| Published : Jul 05 2024, 12:48 AM IST

ಮೂರ್ನಾಡು: ನೂತನ ಸುಸಜ್ಜಿತ ಹಿಂದೂ ರುದ್ರಭೂಮಿ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮೂರ್ನಾಡಿನಲ್ಲಿ ದಾನಿಗಳ ಸಹಕಾರದಿಂದ ಸುಮಾರು 50 ಲಕ್ಷ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸುಸಜ್ಜಿತ ಹಿಂದೂ ರುದ್ರಭೂಮಿ ಗುರುವಾರ ಉದ್ಘಾಟನೆಗೊಂಡಿತು. ಊರಿನ ಹಿರಿಯರಾದ ಕೆರೆಮನೆ ವಿಜಯಲಕ್ಷ್ಮಿ ಪಾಲಾಕ್ಷ ದಾನವಾಗಿ ನೀಡಿದ ಸುಮಾರು 40 ಸೆಂಟ್ ಜಾಗದಲ್ಲಿ ರುದ್ರಭೂಮಿ ನಿರ್ಮಾಣಗೊಂಡಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ದಾನಿಗಳ ಸಹಕಾರದಿಂದ ಮೂರ್ನಾಡಿನಲ್ಲಿ ಸುಮಾರು 50 ಲಕ್ಷ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸುಸಜ್ಜಿತ ಹಿಂದೂ ರುದ್ರಭೂಮಿ ಗುರುವಾರ ಉದ್ಘಾಟನೆಗೊಂಡಿತು.

ಊರಿನ ಹಿರಿಯರಾದ ಕೆರೆಮನೆ ವಿಜಯಲಕ್ಷ್ಮಿ ಪಾಲಾಕ್ಷ ದಾನವಾಗಿ ನೀಡಿದ ಸುಮಾರು 40 ಸೆಂಟ್ ಜಾಗದಲ್ಲಿ ರುದ್ರಭೂಮಿ ನಿರ್ಮಾಣಗೊಂಡಿದೆ. ಕೊಡಗು ಜಿಲ್ಲೆಯಲ್ಲೇ ಮೊದಲು ಎನ್ನಬಹುದಾದ ವಿಶೇಷ ವ್ಯವಸ್ಥೆ ಈ ರುದ್ರಭೂಮಿಯಲ್ಲಿದೆ. ಎರಡು ಸಿಲಿಕಾನ್ ಚೇಂಬರ್, ಹರಿಶ್ಚಂದ್ರ ಗುಡಿ, ಉದ್ಯಾನವನ, ಕಚೇರಿ, ಪ್ರತ್ಯೇಕ ಕೋಣೆ, ಸ್ನಾನದ ಕೋಣೆ, ಸೌದೆ ಶೇಖರಣಾ ಶೆಡ್, ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳು ಇಲ್ಲಿವೆ.ದಾನಿಗಳು, ಸ್ವಯಂಸೇವಕರು, ಸಂಘ ಸಂಸ್ಥೆಗಳು, ಗ್ರಾಮಸ್ಥರು, ಗ್ರಾ.ಪಂ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಸುಸಜ್ಜಿತವಾದ ಈ ಹಿಂದೂ ರುದ್ರಭೂಮಿಯನ್ನು ನಿರ್ಮಿಸಲು ಸಾಧ್ಯವಾಯಿತು ಎಂದು ಮೂರ್ನಾಡು ಹಿಂದೂ ರುದ್ರಭೂಮಿ ಸಮಿತಿಯ ಪ್ರಮುಖರು ತಿಳಿಸಿದರು.

ಮೂರ್ನಾಡು ಗ್ರಾ.ಪಂ ಅಧ್ಯಕ್ಷ ಕುಶನ್ ರೈ, ರುದ್ರಭೂಮಿ ಸಮಿತಿಯ ಅಧ್ಯಕ್ಷ ಅರುಣ್ ಬಾಬ, ಉಪಾಧ್ಯಕ್ಷ ಮೋಹನ್, ಖಜಾಂಚಿ ಜಯರಾಂ, ಕಾರ್ಯದರ್ಶಿ ಹೀರ ಸುಬ್ಬಯ್ಯ, ಆಪ್ತಮಿತ್ರ ಸಂಘದ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ವಸಂತ್, ಕಾಂತೂರು ಮೂರ್ನಾಡು ಗ್ರಾ.ಪಂ ಉಪಾಧ್ಯಕ್ಷರಾದ ರೇಖ, ರುದ್ರಭೂಮಿ ಸ್ಥಳದಾನಿಗಳಾದ ಕೆರೆಮನೆ ವಿಜಯಲಕ್ಷ್ಮಿ, ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕ ಪ್ರತಾಪ್, ಗ್ರಾ.ಪಂ ನಿವೃತ್ತ ಅಭಿವೃದ್ಧಿ ಅಧಿಕಾರಿ ಕೇಶವ ಮತ್ತಿತರ ಪ್ರಮುಖರು ರುದ್ರಭೂಮಿ ಉದ್ಘಾಟನೆಯ ಸಂದರ್ಭ ಇದ್ದರು.