ಸಾರಾಂಶ
ಮನೋರಂಜನೆ ಸಂಗೀತ ಮಹಾವಿದ್ಯಾಲಯ ಟ್ರಸ್ಟ್‌ನ ರಜತ ಮಹೋತ್ಸವ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಂಗೀತ, ಸಾಹಿತ್ಯ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು ಅದನ್ನು ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.ನಗರದ ಕುವೆಂಪು ಕಲಾಮಂದಿರದಲ್ಲಿ ಮನೋರಂಜನೆ ಸಂಗೀತ ಮಹಾವಿದ್ಯಾಲಯ ಟ್ರಸ್ಟ್‌ನ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪಾಶ್ಚ್ಯಾತ್ಯ ಸಂಸ್ಕೃತಿಗೆ ಯುವ ಪೀಳಿಗೆ ಮಾರುಹೋಗುತ್ತಿದ್ದು, ಸಂಗೀತ ಪರಂಪರೆ ಉಳಿಸುವಲ್ಲಿ ಯುವಜನತೆಯ ಪಾತ್ರ ಮಹತ್ವವಾಗಿದೆ ಎಂದರು.ಭಾರತೀಯ ಸಂಸ್ಕೃತಿಯ ಅವಿಚ್ಛಿನ್ನ ಭಾಗವಾದ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಮೌಲ್ಯಗಳಿಗೆ ತರ್ಪಣ ಬಿಡುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶೀಯ ಸಂಗೀತ ಕಲೆ ಉಳಿಸುವಲ್ಲಿ ಮತ್ತು ಕರ್ಮ, ಯೋಗ , ಜ್ಞಾನಮಾರ್ಗದಲ್ಲಿ ತೊಡಗಿಸಿ ಕೊಂಡಿರುವ ಮನರಂಜನೆ ಸಂಗೀತ ಮಹಾವಿದ್ಯಾಲಯದ ಕಾರ್ಯ ಶ್ಲಾಘನೀಯ ಎಂದರು.ಶಿವಮೊಗ್ಗದ ಸಂಗೀತ ವಿದ್ವಾನ್ ಗುರು ನಾಗರಾಜ್ ಮಾತನಾಡಿ ಶಾಸ್ತ್ರೀಯ ಸಂಗೀತ ಮನಸ್ಸು, ಬುದ್ಧಿಗಳನ್ನು ಎಚ್ಚರದ ಸ್ಥಿತಿಯ ಲ್ಲಿಡುವ ಮಾಧ್ಯಮ. ಭಾರತದಲ್ಲಿ ಎರಡು ಸಂಗೀತ ಪರಂಪರೆಗಳಿದ್ದರೂ ಸಹ ಆ ಸಂಗೀತವನ್ನು ಆಸ್ವಾದಿಸುವ ವಾತಾವರಣ ಸೃಷ್ಟಿಸುವಲ್ಲಿ ಸಂಗೀತಗಾರರು ಎಂದು ವಿಫಲರಾಗಿದ್ದಾರೆ ಎಂದು ವಿಷಾದಿಸಿದರು.ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ರಿಜಿಸ್ಟರ್ ಸಿ. ಕೆ. ಸುಬ್ಬರಾಯ, ಮನೋರಂಜನಿ ಸಂಗೀತ ಮಹಾ ವಿದ್ಯಾಲಯದ ಮುಖ್ಯಸ್ಥ ಬಿ.ಸಿ ಜಯರಾಮ್ ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದುಷಿ ಅರ್ಪಣಾ ಜಯರಾಮ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾಕ್ಟರ್‌ರಮೇಶ್, ಬಿ ಎಚ್ ನರೇಂದ್ರ ಪೈ ಉಪಸ್ಥಿತರಿದ್ದರು. ಅರ್ಪಿತ ಪ್ರಾರ್ಥಿಸಿ, ಸುಜೇತಾ ಜಯರಾಮ್, ಗೀತಾನಿ ರೂಪಿಸಿದರು.
;Resize=(128,128))
;Resize=(128,128))