ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಸಂಗೀತ ಮಾನವನ ದೇಹದ ಅಂಗಾಂಗಗಳ ನಡುವೆ ಸಮನ್ವಯತೆಯನ್ನು ಉಂಟುಮಾಡಿ, ಮನಸ್ಸು ಪ್ರಪುಲ್ಲವಾಗಿರುವಂತೆ ನೋಡಿಕೊಳ್ಳತ್ತದೆ ಎಂದು ತುಮಕೂರು ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್ ಅಭಿಪ್ರಾಯ ಪಟ್ಟಿದ್ದಾರೆ ತುಮಕೂರು ವಿವಿಯ 18 ನೇ ಘಟಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಯುವಸೌರಭ ಕಾರ್ಯಕ್ರಮವನ್ನು ಮೃದಂಗ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಒಳ್ಳೆಯ ಸಂಗೀತ ಒಳ್ಳೆಯ ಗೆಳೆಯನಿದ್ದಂತೆ, ನಮ್ಮ ನಡುವಿನ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಎಂದರು.ಕಳೆದ ಎರಡು ವರ್ಷಗಳಿಂದ ತುಮಕೂರು ವಿವಿಯಲ್ಲಿ ಘಟಿಕೋತ್ಸದ ಸಂಜೆ ಸಂಗೀತ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ. ಇದು ವಿವಿಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ತಮ್ಮ ಕುಟುಂಬದೊಂದಿಗೆ ವೀಕ್ಷಿಸಲು ಅವಕಾಶವಿದೆ. ಇದು ವಿವಿ ಮತ್ತು ಸಿಬ್ಬಂದಿಯ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಕಾರಣವಾಗಿದೆ ಎಂದರು.ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಗಾಯಕ ಮಲ್ಲಿಕಾರ್ಜುನ ಕೆಂಕೆರೆ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆಯುತ್ತಿರುವ ಮೊದಲ ಕಾರ್ಯಕ್ರಮ ಇದಾಗಿದೆ. ಎಂದರು.ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಇಂದಿನ ಯುವ ಸೌರಭ ಕಲಾವಿದರು ಮತ್ತು ಕಲಾ ಪೋಷಕರ ನಡುವಿನ ಸಮ್ಮಿಲನವಾಗಿದೆ. ತುಮಕೂರಿನಲ್ಲಿ ಕಲಾವಿಧರಿಗೆ ಕೊರತೆಯಿಲ್ಲ.ಹಾಗಾಗಿಯೇ ಮೈಸೂರಿನ ನಂತರ ಸಾಂಸ್ಕೃತಿಕ ನಗರಿ ಎಂಬ ಹೆಗ್ಗಳಿಕೆ ಪಡೆದಿದೆ ಎಂದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸುರೇಶಕುಮಾರ್, ಯುವಕಲಾವಿದರಿಗೆ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಇಲಾಖೆ ಯುವ ಸೌರಭಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ.ತುಮಕೂರು ವಿವಿಯ ಸಹಯೋಗದಲ್ಲಿ ನಡೆಯುತ್ತಿರುವುದು ವಿಶೇಷ ಎಂದರು.
ವೇದಿಕೆಯಲ್ಲಿ ತುಮಕೂರು ವಿವಿ ಕುಲಸಚಿವರಾದ ಪ್ರೊ.ಎಂ.ಕೋಟ್ರೇಶಿ, ಪರೀಕ್ಷಾಂಗ ಕುಲಸಚಿವರಾದ ಸತೀಶ್‌ಗೌಡ ,ಕಲಾವಿದರಾದ ನಿರ್ಮಲ ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))