ಸಂಗೀತಕ್ಕಿದೆ ಜಡತ್ವ ಕಳೆಯುವ ಶಕ್ತಿ

| Published : Dec 15 2023, 01:30 AM IST

ಸಾರಾಂಶ

ಕೊಟ್ಟೂರುಅಮರತ್ವ ಇರುವುದು ಸಂಗೀತಕ್ಕೆ ಮಾತ್ರ. ಸಾವಿಲ್ಲದ, ಕೇಡಿಲ್ಲದ ಸಂಗೀತ ಎಲ್ಲ ಬಗೆಯ ಜಡತ್ವವನ್ನು ಕಳೆದು ನವೋತ್ಸಾಹ ತಂದು ಕೊಡುತ್ತದೆ. ಸಂಗೀತ ಆರಾಧಕರಾಗಿದ್ದ ಡಾ. ಪುಟ್ಟರಾಜ ಗವಾಯಿಗಳವರ ಗಾಯನ ಅಮರವಾಗಿದೆ ಎಂದು ಮುಖಂಡ ಪಿ. ಸುಧಾಕರ ಗೌಡ ತಿಳಿಸಿದರು.ಪಟ್ಟಣದ ಇಂದು ಕಾಲೇಜಿನಲ್ಲಿ ಡಾ. ಪಂ. ಪುಟ್ಟರಾಜ ಗವಾಯಿಗಳ 14ನೇ ವರ್ಷ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊಟ್ಟೂರು: ಅಮರತ್ವ ಇರುವುದು ಸಂಗೀತಕ್ಕೆ ಮಾತ್ರ. ಸಾವಿಲ್ಲದ, ಕೇಡಿಲ್ಲದ ಸಂಗೀತ ಎಲ್ಲ ಬಗೆಯ ಜಡತ್ವವನ್ನು ಕಳೆದು ನವೋತ್ಸಾಹ ತಂದು ಕೊಡುತ್ತದೆ. ಸಂಗೀತ ಆರಾಧಕರಾಗಿದ್ದ ಡಾ. ಪುಟ್ಟರಾಜ ಗವಾಯಿಗಳವರ ಗಾಯನ ಅಮರವಾಗಿದೆ ಎಂದು ಮುಖಂಡ ಪಿ. ಸುಧಾಕರ ಗೌಡ ತಿಳಿಸಿದರು.

ಪಟ್ಟಣದ ಇಂದು ಕಾಲೇಜಿನಲ್ಲಿ ಡಾ. ಪಂ. ಪುಟ್ಟರಾಜ ಗವಾಯಿಗಳ 14ನೇ ವರ್ಷ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲ ಬಗೆಯ ದಾರಿದ್ರ್ಯವನ್ನು ಸಂಗೀತ ಕಳೆಯುತ್ತದೆ. ಸಂಗೀತದ ಪ್ರಕಾರಗಳನ್ನು ಕಲಿತವರಿಂದ ಕೇಳಿಬರುವ ಹಾಡುಗಾರಿಕೆ ಸದಾ ಜೀವಂತಿಕೆಯನ್ನು ಪ್ರತಿಪಾದಿಸುತ್ತದೆ ಎಂದರು.

ಇಂದು ಸಂಸ್ಥೆಯ ಆಡಳಿತ ಅಧಿಕಾರಿ ಎಚ್.ಎನ್. ವೀರಭದ್ರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪಂ. ಪುಟ್ಟರಾಜ ಗವಾಯಿಗಳವರ ಸಂಗೀತ ಕಾರ್ಯಕ್ರಮವನ್ನು ತಮ್ಮ ಮಹಾವಿದ್ಯಾಲಯದಿಂದ ಅವರ ಸ್ಮರಣೋತ್ಸವದ ನಿಮಿತ್ತ ಹಮ್ಮಿಕೊಂಡಿರುವುದು ಧನ್ಯತೆ ಭಾಸವಾಗುತ್ತಿದೆ ಎಂದರು.

ಚಲನಚಿತ್ರದ ಗಾಯಕ ಸಿದ್ಧಾರ್ಥ ಬಿ. ತಮ್ಮ ಸುಶ್ರಾವ್ಯ ಗಾಯನದಿಂದ ನೆರೆದವರನ್ನು ಮಂತ್ರಮುಗ್ಧಗೊಳಿಸಿದರು.

ಸಿದ್ಧಾರ್ಥ ಅವರಿಗೆ ಶ್ರೀಧರ ಮಾಂಡ್ರೆ ತಬಲಾ ವಾದಕರಾಗಿ, ಸತೀಶ್‌ ಭಟ್ಟ ಹೆಗ್ಗಾರ್‌ ಹಾರ್ಮೋನಿಯಂ ನುಡಿಸಿ ಸಾಥ್‌ ನೀಡಿದರು. ಕಿರುಚಿತ್ರ ನಿರ್ದೇಶಕ ವೆಂಕಟೇಶ್‌, ತಾಳವಾದ್ಯ ಸಂತೋಷ ಅಳವಂಡಿ, ಜಿ. ಕಾರ್ತಿಕ್, ಎನ್. ಅಪ್ಪಾಜಿ, ವಿನಯ, ಜನಾರ್ದನ ಶೆಟ್ಟಿ, ಪ್ರಾಚಾರ್ಯ ವಾಗೀಶಯ್ಯ ಮತ್ತಿತರರು ಇದ್ದರು. ವೀರೇಶ್‌ ಸ್ವಾಗತಿಸಿದರು. ತಿಪ್ಪೇಸ್ವಾಮಿ ವಂದಿಸಿದರು. ಮಹೇಶ್ ನಿರೂಪಿಸಿದರು.