ಸಾರಾಂಶ
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳು ನೀಡಿದ ಕೊಡುಗೆ ಅವಿಸ್ಮರಣೀಯ. ಕರ್ನಾಟಕಿ ಸಂಗೀತದ ಪ್ರಭಾವದ ಕಾಲದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ದೊಡ್ಡಮಟ್ಟದಲ್ಲಿ ಬೆಳೆಸಿದರು.
ಧಾರವಾಡ:
ಕರ್ನಾಟಕ ಮಾತ್ರವಲ್ಲದೇ ದೇಶ-ವಿದೇಶದಲ್ಲಿಯೂ ವೀರೇಶ್ವರ ಪುಣ್ಯಾಶ್ರಮದ ಸಂಗೀತ ಪರಂಪರೆ ವಿಸ್ತರಿಸಿಕೊಂಡಿದೆ ಎಂದು ಹಿರಿಯ ಗಾಯಕ ಡಾ. ಶಾಂತಾರಾಮ ಹೆಗಡೆ ಹೇಳಿದರು.ಇಲ್ಲಿಯ ಬೇಂದ್ರೆ ಭವನದಲ್ಲಿ ಕಲಾ ವಿಕಾಸ ಪರಿಷತ್ತು ಹಮ್ಮಿಕೊಂಡಿದ್ದ ಗಾನಯೋಗಿ ಪಂಚಾಕ್ಷರಿ ಗವಾಯಿಗಳವರ 133ನೇ ಜಯಂತ್ಯುತ್ಸವ ಉದ್ಘಾಟಿಸಿದ ಅವರು, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳು ನೀಡಿದ ಕೊಡುಗೆ ಅವಿಸ್ಮರಣೀಯ. ಕರ್ನಾಟಕಿ ಸಂಗೀತದ ಪ್ರಭಾವದ ಕಾಲದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ದೊಡ್ಡಮಟ್ಟದಲ್ಲಿ ಬೆಳೆಸಿದವರು ಅವರು. ಪಂಚಾಕ್ಷರಿ ಗವಾಯಿಗಳ ವರಿಗೆ ಉಭಯ ಸಂಗೀತ ಶಿಕ್ಷಣ ಕೊಡಿಸುವಲ್ಲಿ ಹಾನಗಲ್ ಕುಮಾರ ಶಿವಯೋಗಿಗಳ ಪಾತ್ರ ದೊಡ್ಡದು ಎಂದರು.
ಅಧ್ಯಕ್ಷತೆ ವಹಿಸಿದ್ದ ರಂಗಕರ್ಮಿ ಡಾ. ಶಶಿಧರ ನರೇಂದ್ರ, ನಾವು ಸ್ವರ ಆರಾಧಕರಾಗಬೇಕು. ನಮ್ಮ ಸ್ವರ ಅಮರತ್ವ ಪಡೆಯಬೇಕು ಎಂದು ಹೇಳಿದರು.ಇದೇ ವೇಳೆ ತಬಲಾ ಕ್ಷೇತ್ರದಲ್ಲಿ ಸಾಧನೆಗೈದ ಕಲಬುರಗಿಯ ಪಂ. ಶಾಂತಲಿಂಗಪ್ಪ ಕಲ್ಲೂರ ದೇಸಾಯಿ, ಧಾರವಾಡದ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಮತ್ತು ಶಿರಸಿಯ ಮಹಿಳಾ ಮತ್ತು ಯಕ್ಷ ಕಲಾಸಂಗಮ ಕಲಾ ಶಿಕ್ಷಣ ಸಂಸ್ಥೆಗಳಿಗೆ ಕಲಾ ವಿಕಾಸ ಪರಿಷತ್‌ನ 2023-24ನೇ ಸಾಲಿನ ‘ಗಾನಯೋಗಿ ಪಂಚಾಕ್ಷರಿ ಅನುಗ್ರಹ’ ಪ್ರಶಸ್ತಿ ಪ್ರದಾನಿಸಲಾಯಿತು.
ಮಲ್ಲಿಕಾರ್ಜುನ ಚಿಕ್ಕಮಠ, ಸಿ.ಕೆ.ಎಚ್. ಶಾಸ್ತಿ ಹಾಗೂ ಡಾ. ವೀಣಾ ಬಿರಾದಾರ ಮಾತನಾಡಿದರು. ದೇವಿಕಾ ಜೋಗಿ ಸ್ವಾಗತಿಸಿದರು. ಪಿ.ಆರ್. ನಾಗರಾಳ ನಿರೂಪಪಿಸಿದರು. ಡಾ.ಎ.ಎಲ್.ದೇಸಾಯಿ ವಂದಸಿದರು.