ಸಂಗೀತ, ಸಾಹಿತ್ಯ ಮಾತ್ರ ಮನುಷ್ಯ ಉನ್ನತೀಕರಣ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ

| Published : Jul 23 2024, 12:43 AM IST

ಸಂಗೀತ, ಸಾಹಿತ್ಯ ಮಾತ್ರ ಮನುಷ್ಯ ಉನ್ನತೀಕರಣ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಸಹಯೋಗದೊಡನೆ ಆಯೋಜಿಸಿದ್ದ ಗಾಯಕ ಶಂಕರ್ ಶಾನುಭೋಗ ಅವರ ಕಾವ್ಯ ಸಂಗೀತ ಹೆಸರಿನ ಅಭಿಯಾನ ಕಾರ್ಯಕ್ರಮವನ್ನು ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಂಗೀತ ಮತ್ತು ಸಾಹಿತ್ಯ ನಮ್ಮ ಭಾರತೀಯ ಸಂಸ್ಕೃತಿ ಎತ್ತಿಹಿಡಿಯುವ ಒಂದು ಮಾಧ್ಯಮವಾಗಿದೆ, ಮಾತ್ರವಲ್ಲದೆ ಇದು ನಮ್ಮನ್ನು ಉನ್ನತೀಕರಿಸಬಲ್ಲದು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಸಹಯೋಗದೊಡನೆ ನಗರದ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ಗಾಯಕ ಶಂಕರ್ ಶಾನುಭೋಗ ಅವರ ‘ಕಾವ್ಯ ಸಂಗೀತ’ ಹೆಸರಿನ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಂಕರ್ ಶಾನುಭೋಗ್ ಅವರು ನಾಡಿನಾದ್ಯಂತ ನಡೆಸುತ್ತಿರುವ ಈ ಅಭಿಯಾನ ಸ್ವಾಗತಾರ್ಹ ಎಂದರು.

ಸುಗಮ ಸಂಗೀತಗಾರ ಶಂಕರ ಶಾನುಭೋಗ ಮಾತನಾಡಿ, ಸಂಗೀತ ಕೇವಲ ಮನರಂಜನೆಗೆಗಾಗಿ ಕೇಳದೆ ಅದನ್ನು ಅರ್ಥಮಾಡಿಕೊಂಡು ಕೇಳಿದರೆ ಮಾತ್ರ ಸಂಗೀತಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ. ಈ ಹಿನ್ನೆಲೆ ತಮ್ಮ ಉದ್ದೇಶ ಮನರಂಜನೆ ಜೊತೆಗೆ ಸಾಹಿತ್ಯದ ಹಿರಿಮೆ ಎತ್ತಿ ಹಿಡಿಯುವುದೇ ಆಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್. ಸುಂದರ ರಾಜ್ ಮಾತನಾಡಿ, ಕಾವ್ಯ ಸಂಗೀತ ಎಂಬ ಪರಿಕಲ್ಪನೆಯೇ ವಿಶೇಷವಾದುದು. ಉತ್ತಮ ಸಾಹಿತ್ಯ ಮತ್ತು ಒಳ್ಲೆಯ ಸಾಹಿತ್ಯ ಸೇರಿದರೆ ಅದು ಅಧ್ಯಾತ್ಮ ಪ್ರಜ್ಞೆ ಬಡಿದೆಬ್ಬಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.

ಚಿರಂತನ ಯೋಗ ಟ್ರಸ್ಟ್ ಅಧ್ಯಕ್ಷರಾದ ಶಾಂತಾ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನಯ್ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಸಂಘ ಮತ್ತು ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ವತಿಯಿಂದ ಶಂಕರ್ ಶಾನುಭೋಗ್ ಅವರನ್ನು ಆತ್ಮಿಯವಾಗಿ ಸನ್ಮಾನಿಸಲಾಯಿತು. ಶೋಭಾ ಸತೀಶ್, ಉಮಾ ದಿಲೀಪ್, ವಿನಯ್ ಶಿವಮೊಗ್ಗ, ಕಾಂತೇಶ್ ಕೆ.ಇ., ವಿಶ್ವಾಸ್, ರಾಜಲಕ್ಷ್ಮೀ, ತ್ರಿವೇಣಿ, ದೀಪಾ ಕುಬ್ಸದ್, ಜಿ. ವಿಜಯ್ಕುಮಾರ್ ಉಪಸ್ಥಿತರಿದ್ದರು.