ಹಂಪಿ ಉತ್ಸವದಲ್ಲಿ ಸಂಗೀತ ಲೋಕ ಸೃಷ್ಟಿ

| Published : Mar 03 2025, 01:50 AM IST

ಸಾರಾಂಶ

ಹಂಪಿ ಉತ್ಸವದಲ್ಲಿ ಸಂಗೀತ ನಿರ್ದೇಶಕ ಅರ್ಜುನ ಜನ್ಯ ನೇತೃತ್ವದ ತಂಡ ಸಂಗೀತ ಲೋಕವನ್ನೇ ಸೃಷ್ಟಿ ಮಾಡಿತು.

ಸಂಗೀತ ನಿರ್ದೇಶಕ ಅರ್ಜುನ ಜನ್ಯ ಹಾಡಿಗೆ ಕುಣಿದು ಕುಪ್ಪಳಿಸಿದ ಪ್ರೇಕ್ಷಕರುಕನ್ನಡಪ್ರಭ ವಾರ್ತೆ ಹಂಪಿ (ಎಂ.ಪಿ. ಪ್ರಕಾಶ ಪ್ರಧಾನ ವೇದಿಕೆ)

ಹಂಪಿ ಉತ್ಸವದಲ್ಲಿ ಸಂಗೀತ ನಿರ್ದೇಶಕ ಅರ್ಜುನ ಜನ್ಯ ನೇತೃತ್ವದ ತಂಡ ಸಂಗೀತ ಲೋಕವನ್ನೇ ಸೃಷ್ಟಿ ಮಾಡಿತು.

ಜೈ ಜೈ ಭಜರಂಗಿ ಹಾಡು ಹಾಡುವ ಮೂಲಕ ಆಂಜನೇಯನ ನೆಲದಲ್ಲಿ ಭಕ್ತಿ ಭಾವ ಮೆರೆದರು. ಚುಟು ಚುಟು ಅಂತೈತೇ, ನನಗ್‌ ಚುಮು ಚುಮು ಆಗ್ತೈತೆ, ಅಧ್ಯಕ್ಷ... ಅಧ್ಯಕ್ಷ... ಹಾಡು ಹಾಡಿದ ಅವರು, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ ಬಳಿ ತೆರಳಿ ರಂಜಿಸಿದರು.

ಓಪನ್‌ ಹೇರೂ ಬಿಟ್ಟ್ಕೊಂಡು, ಕೂದಲು ಹಾರಾಡಸ್ಕೊಂಡು ಏರಿಯಾದಲ್ಲಿ ಓಡ್ಯಾಡ ಬೇಡಿ, ಜೀವ ಝಲ್ಲ ಅಂತದೇ, ಬಾಡಿ ಜುಂ ಅಂತದೇ ಹಾಡು ಹಾಡಿದರು. ಅರ್ಜುನ ಜನ್ಯ ಮತ್ತು ತಂಡದ ಹಾಡುಗಳಿಗೆ ಹೆಜ್ಜೆ ಹಾಕಿದ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು. ಪ್ರೇಕ್ಷಕರೊಬ್ಬರನ್ನು ವೇದಿಕೆ ಮೇಲೆ ಕರೆದು ಅರ್ಜುನ ಜನ್ಯ ಅವರ ಬಳಿ ಹಾಡುಗಳ ಹೆಸರುಗಳನ್ನು ಕೇಳಿದರು. ಈ ನಡುವೆ ಮಾಸ್ಟರ್‌ ಆನಂದ ನಿರೂಪಣೆ ಎಲ್ಲರ ಗಮನ ಸೆಳೆಯಿತು.

ಒಂದು ಮಳೆ ಬಿಲ್ಲೆ, ಒಂದು ಮಳೆ ಮೋಡ, ಹೇಗೋ ಜೊತೆಯಾಗಿ.. ತುಂಬಾ ಸೊಗಸಾಗಿ.. ಏನನೂ ಮಾತಾಡಿ...

ಹಾಡು ಹಾಡಿದ ಅರ್ಜುನ್ಯ ಜನ್ಯ ಕಲಾಪ್ರಿಯರ ಮನಸೂರೆಗೊಂಡರು. "ಜಗವೇ ನೀನು ಗೆಳತಿಯೇ ", ನಮ್ಮೂರ ಕಾಯೋ ದೊರೆಯೇ..., ನಿನ್ನ ನೋಡಿ ಸುಮ್ನ ಹೇಂಗಿರಲಿ ಹಾಡುಗಳನ್ನು ಅರ್ಜುನ್ಯ ತಂಡ ಪ್ರೇಕ್ಷಕರ ಮನ ಗೆದ್ದಿತು.

ವಾಸುಕಿ ವೈಭವ್ ಗಾಯನ:

ಗಾಯಕ ವಾಸುಕಿ ವೈಭವ್ ಅವರ ಗಾಯನ ವೈಭವ ಕಂಡು ಬಂದಿತು. ಸ.ಹಿ.ಪ್ರಾ.ಶಾಲೆ ಕಾಸರಗೋಡು ಚಿತ್ರ ಪ್ರಸಿದ್ಧ ಗೀತೆ ''''''''ಅರೆ ಅರೇ ರೇ ಅವಳ ನಗುವ'''''''' ಹಾಡಿನ ಮೂಲಕ ವಾಸುಕಿ ವೈಭವ್ ತಮ್ಮ ಗಾಯನ ಆರಂಭಿಸಿದರು. ನಂತರ ''''''''ಮೈಸೂರು‌ ರಾಜ್ಯದ ದೊರೆಯೇ'''''''' ಪ್ರಸ್ತುತ ಪಡಿಸಿದರು. ಜನಪದ ಸೊಗಡಿನ ಸಾವಿರದ ಶರಣವ್ವ ಕರಿಮಾಯಿ ತಾಯಿ ಗೀತೆಯನ್ನು ಸಹಚರರೊಂದಿಗೆ ಹಾಡಿ ಜನರಿಂದ ಮೆಚ್ಚುಗೆ ಗಳಿಸಿದರು.

ಬಾಳು ಬೆಳಗುಂದಿ ಮೋಡಿ:

ಉತ್ತರ ಕರ್ನಾಟಕದ ಜಾನಪದ ಗಾಯಕ ಬಾಳು ಬೆಳಗುಂದಿ ಪ್ರಸ್ತುತ ಪಡಿಸಿದ ವಿಕಟ ಗೀತೆಗಳಿಗೆ ನೆರೆದಿದ್ದ ಜನ ಕುಣಿದು ಕುಪ್ಪಳಿಸಿದರು.

ಆರಂಭದಲ್ಲಿ ''''''''ಹುಟ್ಟಿದ ಊರಿಗೆ ಹ್ವಾದರೇ ಕಟ್ಟಿ ಬಡಿತಾರೆ'''''''', ನಂತರ ಲಂಗಾ ದಾವಣಿ ಒಳಗ್‌ ಮಸ್ತ್‌ ಕಾಣ್ತಿ ಲಾವಣ್ಯ, ನಿನ್‌ ಫೋನ್‌ ನಂಬರ್‌ ಕೊಟ್ರ ಬರ್ತೈತಿ ಪುಣ್ಯ, ''''''''ಕುಣಿತಾಳೋ ಕುಣಿತಾಳೋ ಜಿಗಿತಾಳೋ ಜಿಂಕೆ ಜಿಗಿದಾಗೆ ಜಿಗಿತಾಳೋ'''''''' ಗೀತೆಗಳನ್ನು ಹಾಡಿ ಬಾಲು ಬೆಳಗುಂದಿ ರಂಜಿಸಿದರು. ಉತ್ತರ ಕರ್ನಾಟಕ ಗಾಯಕಿ ಮಾಲಾಶ್ರೀ ಬಾಳು ಬೆಳಗುಂದಿಗೆ ಸಾಥ್ ನೀಡಿದರು.