ವಿಶ್ವ ವಿಖ್ಯಾತ ಮೈಸೂರು ದಸರಾ ಅಡಿಯಲ್ಲಿ ಆಯೋಜಿಸಲಾದ ಯುವ ದಸರಾ ವೇದಿಕೆಯಲ್ಲಿ ಬೀದರಿನ ಖ್ಯಾತ ಗಾಯಕಿ ಹಾಗೂ ಬಿದರಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ರೇಖಾ ಸೌದಿ ಮತ್ತು ಅವರ ತಂಡವು ತಮ್ಮ ಗಾನ ವೈಭವದ ಮೂಲಕ ನೆರೆದಿದ್ದ ಲಕ್ಷಾಂತರ ಸಂಗೀತಾಸಕ್ತರ ಮನಸೂರೆಗೊಂಡಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ವಿಶ್ವ ವಿಖ್ಯಾತ ಮೈಸೂರು ದಸರಾ ಅಡಿಯಲ್ಲಿ ಆಯೋಜಿಸಲಾದ ಯುವ ದಸರಾ ವೇದಿಕೆಯಲ್ಲಿ ಬೀದರಿನ ಖ್ಯಾತ ಗಾಯಕಿ ಹಾಗೂ ಬಿದರಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ರೇಖಾ ಸೌದಿ ಮತ್ತು ಅವರ ತಂಡವು ತಮ್ಮ ಗಾನ ವೈಭವದ ಮೂಲಕ ನೆರೆದಿದ್ದ ಲಕ್ಷಾಂತರ ಸಂಗೀತಾಸಕ್ತರ ಮನಸೂರೆಗೊಂಡಿದೆ.

ಅ.14ರಂದು ಮೈಸೂರಿನ ಉತ್ತನಹಳ್ಳಿ ರಿಂಗ್ ರಸ್ತೆಯಲ್ಲಿನ ಜ್ವಾಲಾಮುಖಿ ತ್ರಿಪುರಸುಂದರಿ ದೇವಸ್ಥಾನದ ಬಳಿ ನಿರ್ಮಿಸಲಾಗಿದ್ದ ಭವ್ಯವಾದ ಯುವ ದಸರಾ ವೇದಿಕೆ ಸಾವಿರಾರು ಯುವ ಪಡೆಯನ್ನು ತನ್ನತ್ತ ಆಕರ್ಷಿಸಿತು. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ದಿಗ್ಗಜ ಕಲಾವಿದರು ಕಾರ್ಯಕ್ರಮ ನಡೆಸಿಕೊಡುವ ಈ ಪ್ರತಿಷ್ಠಿತ ವೇದಿಕೆಯಲ್ಲಿ ಬೀದರಿನ ಕಲಾವಿದರು ತಮ್ಮ ಅದ್ಭುತ ಪ್ರದರ್ಶನದ ಮೂಲಕ ಪ್ರಮುಖ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ''''''''ಈ ಕನ್ನಡ ಮಣ್ಣನು ಮರಿಬೇಡ'''''''' ಹಾಗೂ ''''''''ಬಾಳ ಬಂಗಾರ ನೀನು'''''''' ಎಂಬ ಜನಪ್ರಿಯ ಗೀತೆಗಳನ್ನು ಪ್ರಸ್ತುತಪಡಿಸುತ್ತಿದ್ದಂತೆ ಸಭಾಂಗಣದಲ್ಲಿ ಚಪ್ಪಾಳೆಗಳ ಸುರಿಮಳೆಯಾಯಿತು. ತದನಂತರ ''''''''ಪಿಯಾ ತು ಅಬ್ ತೋ ಆಜಾ'''''''', ''''''''ದುನಿಯಾ ಮೇ ಲೋಗೋಂಕೋ'''''''', ''''''''ದಮ್ ಮಾರೋ ದಮ್'''''''' ಹಾಗೂ ''''''''ಏ ಮೇರಾ ದಿಲ್'''''''' ಮುಂತಾದ ಮಧುರ ಹಿಂದಿ ಹಾಡುಗಳನ್ನು ಹಾಡಿ ಯುವಕರನ್ನು ರಂಜಿಸಿದರು. ಅಂತಿಮವಾಗಿ ''''''''ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು'''''''' ಎಂಬ ಗೀತೆಯೊಂದಿಗೆ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಳಿಸಲಾಯಿತು.

ಈ ಸಂಗೀತ ಪ್ರಯಾಣದಲ್ಲಿ ಗಾಯಕಿಗೆ ವಾದ್ಯ ವೃಂದದ ಮುಖಂಡರಾದ ಕೀಬೋರ್ಡನಲ್ಲಿ ಅಜಯ್ ಹೊಳ್ಳ ಹಾಗೂ ಗುರುರಾಜ, ತಬಲಾದಲ್ಲಿ ರಘುನಾಥ್, ಗಿಟಾರ್‌ನಲ್ಲಿ ಪ್ರದೀಪ್ ಕಿಗ್ಗಲ್, ರಿಥಮ್ ಪ್ಯಾಡ್ನಾಲ್ಲಿ ಗುರುದತ್ತ ಮತ್ತು ಡ್ರಮ್ಸ್‌ನನಲ್ಲಿ ಹನುಮಂತ ಅವರು ಅತ್ಯುತ್ತಮ ಸಾಥ್ ನೀಡಿದರು. ಯುವ ದಸರಾ ಆಯೋಜನಾ ಸಮಿತಿಯ ಪ್ರಮುಖರು ಉಪಸ್ಥಿತರಿದ್ದು, ಕಲಾವಿದರನ್ನು ಅಭಿನಂದಿಸಿದರು.