ಮಸ್ಕಿ ವಿವಿಧೆಡೆ ಮಳೆಯಿಂದ ಬೆಳೆ ಹಾನಿ, ಪರಿಶೀಲನೆ

| Published : Nov 04 2024, 12:24 AM IST

ಸಾರಾಂಶ

Muski Crop damage due to rain in various places, check

-ಭಾರಿ ಬಿರುಗಾಳಿ, ಮಳೆಗೆ ನೆಲಕ್ಕುರುಳಿದ ಭತ್ತದ ಬೆಳೆ ಪರಿಶೀಲಿಸಿದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್

----

ಕನ್ನಡಪ್ರಭ ವಾರ್ತೆ ಮಸ್ಕಿ

ತಾಲೂಕಿನ ಬಳಗಾನೂರು, ಲಕ್ಷ್ಮಿ ಕ್ಯಾಂಪ್, ಗೌಡನಭಾವಿ, ಬೆಳ್ಳಿಗನೂರು ಸುತ್ತಮುತ್ತ ಶನಿವಾರ ಸಂಜೆ ಭಾರಿ ಬಿರಿಗಾಳಿಯಿಂದ ಸುರಿದ ಮಳೆಗೆ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ಬೆಳೆ ನೆಲ್ಲಕಚ್ಚಿದ್ದು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಂಜೆ 5 ಗಂಟೆಯಿಂದ ಏಕಾಏಕಿ ಭಾರಿ ಪ್ರಮಾಣದಲ್ಲಿ ಬಿರುಗಾಳಿಯಿಂದ ಕೂಡಿದ ಮಳೆ ಶುರುವಾಯಿತು. ಸತತ 1 ಗಂಟೆ ಸುರಿದ ಮಳೆಗೆ ರೈತರು ತತ್ತರಿಸಿದ್ದಾರೆ. ಕೈಗೆ ಬಂದ ಭತ್ತದ ಬೆಳೆ ನೆಲಕ್ಕುರುಳಿದ್ದರಿಂದ ರೈತರು ಕಂಗಲಾಗಿದ್ದಾರೆ.

ಭಾನುವಾರ ಬೆಳಗ್ಗೆ ಮಳೆಯಿಂದ ಬೆಳೆ ಹಾನಿಯಾದ ಗ್ರಾಮಗಳಿಗೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ದೂರವಾಣಿ ಮೂಲಕ ತಹಶೀಲ್ದಾರ್ ಅವರೊಂದಿಗೆ ಮಾತನಾಡಿದ ಅವರು ಕೂಡಲೇ ತಾಲೂಕು ಆಡಳಿತ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರಿಂದ ಭತ್ತ ಹಾಗೂ ಇನ್ನಿತರ ಬೆಳೆಗಳ ನಷ್ಟದ ಸಮೀಕ್ಷೆ ಕೈಗೊಂಡು ಸೂಕ್ತ ಪರಿಹಾರ ಕಲ್ಪಿಸಲು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಮನವಿ ಮಾಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ಶರಣಬಸವ ಸೊಪ್ಪಿಮಠ, ಮುಖಂಡರಾದ ಶೇಖರಪ್ಪ ಮೇಟಿ, ಸಂತೋಷ ಅಂಬ್ಲಿ, ಗೋವಿಂದ ರೆಡ್ಡಿ ಗೌಡನಬಾವಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿಕುಮಾರ ಬೆಳ್ಳಿಗನೂರು, ಅಮರೇಶ ಗೌಡನಬಾವಿ, ಬಸಪ್ಪ, ರಾಘವೇಂದ್ರ ಗುತ್ತೇದಾರ, ಮುದುಕಪ್ಪ ಹಳ್ಳಿ, ಬಿ. ತಿಕ್ಕಯ್ಯ, ರಾಜಶೇಖರ, ವೀರೇಶ ಸ್ವಾಮಿ, ಗಣೇಶ, ಬಸವರಾಜ ನಾಯಕ ಸೇರಿದಂತೆ ಬೆಳೆ ಹಾನಿಗೊಳಗಾದ ಗ್ರಾಮಗಳ ರೈತರು ಇದ್ದರು.

-------

......ಕೋಟ್.....

ಮಳೆಯಿಂದಾಗಿ ಹಾಳಾದ ಭತ್ತದ ಬೆಳೆಯ ಸರ್ವೇ ಮಾಡುವಂತೆ ಕಂದಾಯ ನಿರೀಕ್ಷಕರಿಗೆ ಸೂಚನೆ ನೀಡಲಾಗಿದೆ. ಸೋಮವಾರ ಗ್ರಾಮಗಳಿಗೆ ತೆರಳಿ ಸಮೀಕ್ಷೆ ನಡೆಸಿ ವರದಿ ಕೊಡಲಿದ್ದಾರೆ.

-ಮಲ್ಲಪ್ಪ ಯರಗೋಳ. ತಹಶೀಲ್ದಾರ ಮಸ್ಕಿ

------------------

03-ಎಂ ಎಸ್ ಕೆ -02: ಮಸ್ಕಿ ತಾಲೂಕಿನ ಬಳಗಾನೂರು ಸುತ್ತಮುತ್ತ ಭಾರಿ ಬಿರುಗಾಳಿಯಿಂದ ಕೂಡಿದ ಮಳೆಗೆ ನೆಲಕ್ಕುರುಳಿದ ಭತ್ತದ ಬೆಳೆಯನ್ನು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಪರಿಶೀಲಿಸಿದರು.