ಕಾಂಗ್ರೆಸ್‌ನಿಂದ ಮುಸ್ಲಿಂ ಓಲೈಕೆ ರಾಜಕಾರಣ: ತೆಲಂಗಾಣ ಶಾಸಕ ರಾಜಾಸಿಂಗ್‌

| Published : May 05 2024, 02:03 AM IST

ಕಾಂಗ್ರೆಸ್‌ನಿಂದ ಮುಸ್ಲಿಂ ಓಲೈಕೆ ರಾಜಕಾರಣ: ತೆಲಂಗಾಣ ಶಾಸಕ ರಾಜಾಸಿಂಗ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಪಕ್ಷ ಮುಸ್ಲಿಂ ಓಲೈಕೆ ರಾಜಕಾರಣ ಮಾಡುತ್ತಿದ್ದು, ಭಾರತಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಬೇಕೆಂದು ಪಾಕಿಸ್ತಾನ ಬಯಸುತ್ತಿದೆ. ಹೀಗಾಗಿ ಮತದಾರರು ಜಾಗೃತರಾಗಬೇಕು ಎಂದು ತೆಲಂಗಾಣದ ಗೋಶಾಮಲ್‌ ಶಾಸಕ ರಾಜಾಸಿಂಗ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಗುರುಮಠಕಲ್‌

ಕಾಂಗ್ರೆಸ್‌ ಪಕ್ಷ ಮುಸ್ಲಿಂ ಓಲೈಕೆ ರಾಜಕಾರಣ ಮಾಡುತ್ತಿದ್ದು, ಭಾರತಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಬೇಕೆಂದು ಪಾಕಿಸ್ತಾನ ಬಯಸುತ್ತಿದೆ. ಹೀಗಾಗಿ ಮತದಾರರು ಜಾಗೃತರಾಗಬೇಕು ಎಂದು ತೆಲಂಗಾಣದ ಗೋಶಾಮಲ್‌ ಶಾಸಕ ರಾಜಾಸಿಂಗ್‌ ಹೇಳಿದರು.

ಕಲಬುರಗಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ್ ಪರವಾಗಿ ಪಕ್ಷದ ವತಿಯಿಂದ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮತಯಾಚಿಸಿದ ಅವರು, ನೆರೆಯ ದೇಶ ಪಾಕಿಸ್ತಾನ ಭಾರತದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಹಾಗೂ ರಾಹುಲ್ ಗಾಂಧಿ ಪ್ರಧಾನ ಮಂತ್ರಿ ಆಗಬೇಕು ಎಂದು ಬಯಸುತ್ತಿದೆ. ರಾಹುಲ್ ಮತ್ತು ಸೋನಿಯಾಗೆ ಪಾಕಿಸ್ತಾನ ನಂಟಿದೆ ಎಂದು ಗಂಭೀರವಾಗಿ ಆರೋಪಿಸಿದ ರಾಜಾಸಿಂಗ್‌, ಭಾರತೀಯರಾದ ನಾವು ಕಾಂಗ್ರೆಸ್ ಪಕ್ಷದಿಂದ ಎಚ್ಚರವಾಗಿರಬೇಕು ಎಂದು ರಾಜಾಸಿಂಗ್‌ ಎಚ್ಚರಿಸಿದರು.

ನಮ್ಮ ಶತೃ ದೇಶಗಳಿಂದ ಉಳಿದುಕೊಳ್ಳಲು ಮೋದಿ ಅವರಂತಹ ಎದೆಗಾರಿಕೆ ನಮಗೆ ಬೇಕಾಗಿದೆ, ಇದಕ್ಕಾಗಿ ಹೆಚ್ಚಿನ ಜನರು ಮತ ಬಿಜೆಪಿಗೆ ನೀಡಿ ಎಂದು ಅವರು ಕರೆ ನೀಡಿದರು.

ಮುಸ್ಲಿಂರು ಬಿಜೆಪಿಗೆ ಮತ ಹಾಕುವುದಿಲ್ಲ ಹಾಗೂ ಬಿಜೆಪಿ ಗೆಲ್ಲಿಸಲೂ ಬೀಡುವುದಿಲ್ಲ. ಆದರೆ, ಇದೇ ಮೋದಿ ಅವರು ಮುಸ್ಲಿಂ ಸಮುದಾಯಯದ ತಾಯಿ-ತಂಗಿಯರ ಮಾನ ಮಾರ್ಯದೆ ಆತ್ಮಗೌರವದಿಂದ ಇರಲು ತ್ರಿಬಲ್ ತಲಾಖ್‌ ನಿಷೇಧ ಮಾಡಿದ್ದಾರೆ. ಇದೇ ಪ್ರಧಾನಿ ಮೋದಿ ಮುಸ್ಲಿಂ ಹೆಣ್ಣುಮಕ್ಕಳು ಸ್ವತಂತ್ರವಾಗಿ ಬದುಕಲು ಹಾಗೂ ಬಹುಪತ್ನಿತ್ವ ನಿಷೇಧ ಮಾಡುವ ಕಾನೂನು ತಂದು ಮುಸ್ಲಿಂ ಮಹಿಳೆಯರಿಗೆ ಮಾರ್ಯದೆಯಿಂದ ಬದುಕಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು. ಮುಸ್ಲಿಂ ಮತಗಳು ಬಿಜೆಪಿಗೆ ಹಾಕಲಿ, ಬಿಡಲಿ. ಆದರೆ, ಕಾಂಗ್ರೆಸ್ ಗೆ ಮುಸ್ಲಿಮರು ಮತ ನೀಡಿದರೆ ಮತ್ತೆ ತ್ರಿಬಲ್ ತಲಾಖ್‌ ಜಾರಿಗೆ ತರುತ್ತಾರೆ, ನಿಮ್ಮ ಹೆಣ್ಣು ಮಕ್ಕಳ ಸ್ವಾತಂತ್ರ್ಯ ಕಸಿದುಕೊಳ್ಳುತ್ತಾರೆ ಎಂದರು.

ಮಂಗಳಸೂತ್ರದ ಬಗ್ಗೆ ಮಾತನಾಡುವ ಕಾಂಗ್ರೆಸ್‌ನವರಿಗೆ ಅಧಿಕಾರ ಸಿಕ್ಕರೆ ದೇಶದ ಸುಮಂಗಲಿಯರ ಮಂಗಳಸೂತ್ರ ಹರಿಯುವ ಕೆಲಸ ಮಾಡುತ್ತಾರೆ ಎಂದು ಎಚ್ಚರಿಸಿದರು.

ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವ ಮಟ್ಟಿಗೆ ಮುಸ್ಲಿಂ ಓಲೈಕೆಯ ರಾಜಕೀಯ ಮಾಡುತ್ತಿದೆ.

ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್, ಶಾಸಕ ಹರೀಶ ಪೂಂಜ, ಶಾಸಕ ಅವಿನಾಶ ಜಾಧವ್, ರಾಜ್ಯ ಬಿಜೆಪಿ ಕಾರ್ಯದರ್ಶಿ ಲಲಿತಾ ಅನಪೂರ, ನಿತಿನ್ ಗುತ್ತೇದಾರ, ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ್, ದೇವೆಂದ್ರನಾಥ, ಮಲ್ಲಿಕಾರ್ಜುನ ಹೊನಗೇರಾ, ಕೆ. ದೇವದಾಸ್ ಮುಂತಾದವರಿದ್ದರು.