ಮುಸ್ಲಿಮರ ಅಸಹಿಷ್ಣತೆ ಭಯೋತ್ಪಾದನೆಗೆ ಕಾರಣ: ಸಿ.ಟಿ. ರವಿ

| Published : Dec 15 2024, 02:02 AM IST

ಮುಸ್ಲಿಮರ ಅಸಹಿಷ್ಣತೆ ಭಯೋತ್ಪಾದನೆಗೆ ಕಾರಣ: ಸಿ.ಟಿ. ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಸ್ಲಿಮರಲ್ಲಿನ ಅಸಹಿಷ್ಣತೆಯೇ ಭಯೋತ್ಪಾದನೆಗೆ ಕಾರಣ. ಇಸ್ಲಾಂ ತನ್ನ ಮೂಲ ಸ್ವರೂಪ ಬದಲಿಸಿಕೊಳ್ಳಬೇಕು. 1400 ವರ್ಷಗಳ ಹಿಂದಿನ ಬರ್ಬರತೆಯನ್ನೇ ಇಂದಿಗೂ ಅಳವಡಿಸಿಕೊಳ್ಳುವುದು ಜಗತ್ತಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೂ ಒಳ್ಳೆಯದಲ್ಲ. ಭಯೋತ್ಪಾದಕರು ಎಂದರೆ ಬಹು ದೊಡ್ಡ ಪಾಲು ಮುಸಲ್ಮಾನರು ಎಂಬುದನ್ನು ಆ ಸಮುದಾಯ ಚಿಂತನೆ ಮಾಡಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಹೇಳಿದರು.

ಚಿಕ್ಕಮಗಳೂರು: ಮುಸ್ಲಿಮರಲ್ಲಿನ ಅಸಹಿಷ್ಣತೆಯೇ ಭಯೋತ್ಪಾದನೆಗೆ ಕಾರಣ. ಇಸ್ಲಾಂ ತನ್ನ ಮೂಲ ಸ್ವರೂಪ ಬದಲಿಸಿಕೊಳ್ಳಬೇಕು. 1400 ವರ್ಷಗಳ ಹಿಂದಿನ ಬರ್ಬರತೆಯನ್ನೇ ಇಂದಿಗೂ ಅಳವಡಿಸಿಕೊಳ್ಳುವುದು ಜಗತ್ತಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೂ ಒಳ್ಳೆಯದಲ್ಲ. ಭಯೋತ್ಪಾದಕರು ಎಂದರೆ ಬಹು ದೊಡ್ಡ ಪಾಲು ಮುಸಲ್ಮಾನರು ಎಂಬುದನ್ನು ಆ ಸಮುದಾಯ ಚಿಂತನೆ ಮಾಡಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಹೇಳಿದರು.

ದತ್ತ ಪೀಠದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ 333 ಕೋಟಿ ದೇವತೆಗಳಿವೆ. ನಾವೆಲ್ಲ ದೇವನೊಬ್ಬ ನಾಮ ಹಲವು ಎಂಬ ತತ್ತ್ವದ ಮೇಲೆ ನಂಬಿಕೆ ಇಟ್ಟಿದ್ದೇವೆ. ಹೆಚ್ಚು ಎಂದರೆ ನಮ್ಮಲ್ಲಿ ಜಗಳ ನಡೆಯಬಹುದು. ಅದನ್ನು ಮೀರಿದ ಭಯೋತ್ಪಾದನೆ ನಮ್ಮಲ್ಲಿಲ್ಲ. ಮುಸಲ್ಮಾನರು ಇರುವ ಕಡೆ ಒಬ್ಬನೇ ದೇವರು, ಒಬ್ಬನೇ ಪ್ರವಾದಿ. ಆದರೂ ಒಬ್ಬರನ್ನು ಒಬ್ಬರು ಕೊಲ್ಲುತ್ತಾರೆ. ಏಕೆ ಹೀಗೆ ಎಂದು ಸಮುದಾಯದ ವಿದ್ವಾಂಸರು ಕೂತು ಆಲೋಚಿಸಬೇಕಿದೆ ಎಂದು ಸಲಹೆ ನೀಡಿದರು.

ಇಂದು ಎಲ್ಲಾ ಧರ್ಮ ಗ್ರಂಥಗಳನ್ನು ಚರ್ಚೆಗೆ ಒಳಪಡಿಸಬೇಕಾದ ಅನಿವಾರ್ಯತೆ ಇದೆ. ಭಗವದ್ಗೀತೆ, ವೇದ, ಉಪನಿಷತ್ತು, ವಚನಗಳು, ಕುರಾನ್, ಬೈಬಲ್ ಗಳನ್ನು ಚರ್ಚೆಗೆ ಒಳಪಡಿಸಿ ಮಾನವ ಕುಲಕ್ಕೆ ಹಾಗೂ ಜಗತ್ತಿಗೆ ಹಿತಕಾರಿಯಾದ ಅಂಶಗಳನ್ನು ಅಷ್ಟೇ ಧರ್ಮ ಗ್ರಂಥಗಳಲ್ಲಿ ಉಳಿಸಿಕೊಳ್ಳಬೇಕು. ನೆಮ್ಮದಿ ಹಾಳು ಮಾಡುವ ಅಂಶಗಳನ್ನು ಧರ್ಮ ಗ್ರಂಥಗಳಿಂದ ತೆಗೆದು ಹಾಕಬೇಕು ಎಂದರು.

ಖಾಲಿ ಜಾಗದಲ್ಲಿ ಎಷ್ಟೇ ದೊಡ್ಡದಾದ ಮಸೀದಿಯನ್ನಾದರೂ ಕಟ್ಟಲಿ. ಕೇಳಿದಲ್ಲಿ ಅದಕ್ಕೆ ನಾವೇ ಜಾಗವನ್ನು ದಾನ ಕೊಡುತ್ತೇವೆ. ಆದರೆ ದೇವಸ್ಥಾನಗಳನ್ನು ಹೊಡೆದು ಮಸೀದಿ ಏಕೆ ಕಟ್ಟಬೇಕು ಎಂದು ಪ್ರಶ್ನಿಸಿದ ಅವರು, ದೇವಸ್ಥಾನ ಒಡೆದು ಕಟ್ಟಿರುವ ಮಸೀದಿಗಳನ್ನು ಬಿಡಲೇಬೇಕು ಎಂದು ಒತ್ತಾಯಿಸಿದರು.