ಕನ್ನಡಪ್ರಭ ವಾರ್ತೆ ನಾಪೋಕ್ಲು

ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಶೋಷಿಯೇಷನ್ ವತಿಯಿಂದ ಸಮೀಪದ ಎಮ್ಮೆಮಾಡುವಿನಲ್ಲಿ ಆಯೋಜಿಸಲಾಗಿದ್ದ ವಾಲಿಬಾಲ್ ಪಂದ್ಯಾಟದ ಅಂತಿಮ ಪಂದ್ಯದ ಡಿಸೈಡ್ ಸೆಟ್ ನಲ್ಲಿ 13-15ರಲ್ಲಿ ಕುವೆಲರ ತಂಡವನ್ನು ಮಣಿಸಿ ಜಮ್ಮ ಕಪ್ ಅನ್ನು ಚಕ್ಕೇರ ಕುಟುಂಬವು ತನ್ನದಾಗಿಸಿಕೊಂಡಿತು.

ಮೂರು ದಿನಗಳ ಕಾಲ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ 48 ತಂಡಗಳು ಭಾಗವಹಿಸಿದ್ದು ಚೆಮ್ಬಾರಂಡ, ಕೂರುಳಿಕಾರಂಡ, ಕುವೆಲರ ಮತ್ತು ಚಕ್ಕೇರ, ಚೆಮ್ಬಾರಂಡ, ಕೂರುಳಿಕಾರಂಡ, ಕುವೆಲರ ಮತ್ತು ಚಕ್ಕೇರ ತಂಡಗಳು ಸೆಮಿ ಫೈನಲ್ ಪ್ರವೇಶಿಸಿದ್ದವು. ಸೆಮಿಫೈನಲ್ ನಲ್ಲಿ ಕುವೆಲರ ತಂಡವು ಕೂರುಳಿಕಾರಂಡ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಚಕ್ಕೇರ ತಂಡವು ಚೆಮ್ಬಾರಂಡ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಫೈನಲ್ ನಲ್ಲಿ 21ರ ಸೆಟ್ ನಲ್ಲಿ 17- 21ರಲ್ಲಿ ಮೊದಲ ಸೆಟ್ ಕುವೆಲರ ಗೆಲುವು ಸಾಧಿಸಿತು. ಎರಡನೇ ಸೆಟ್ 15-21ರಲ್ಲಿ ಚಕ್ಕೇರ ಗೆಲುವು ಸಾಧಿಸಿತು. ತೀವ್ರ ಪೈಪೋಟಿಯಲ್ಲಿ ನಡೆದ ಡಿಸೈಡ್ ಸೆಟ್ ನಲ್ಲಿ 13-15ರಲ್ಲಿ ಕುವೆಲರವನ್ನು ಮಣಿಸಿ ಜಮ್ಮ ಕಪ್ ನ್ನು ಚಕ್ಕೇರ ಕುಟುಂಬವು ತನ್ನದಾಗಿಸಿಕೊಂಡಿತು. ಪಂದ್ಯಾಟದಲ್ಲಿ 48 ತಂಡಗಳು ಭಾಗವಹಿಸಿದ್ದವು, ಬೆಸ್ಟ್ ಅಟಾಕರ್ ಆಗಿ ಗನಿ ಕುವೆಲರ ಚಿಟ್ಟಡೆ, ಬೆಸ್ಟ್ ಬ್ಲಾಕರ್ ಆಗಿ ಚಕ್ಕೇರ ಇಶಾಕ್, ಬೆಸ್ಟ್ ಅಲ್ ರೌಂಡರ್ ಆಗಿ ನಿಯಾಜ್ ಕೂರುಳಿಕಾರಂಡ, ಬೆಸ್ಟ್ ಸೆಟ್ಟರ್ ಆಗಿ ಸೈಫು ಚೆಮ್ಬಾರಂಡ, ಬೆಸ್ಟ್ ಡಿಫೆಂಡರ್ ಆಗಿ ರೌಫ್ ಚಕ್ಕೇರ ಆಯ್ಕೆಯಾದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಶೋಷಿಯೇಷನ್ ಸ್ಥಾಪಕ ಅಧ್ಯಕ್ಷ ಅನೀಸ್ ಕುವೆಲರ, ಉಪಾಧ್ಯಕ್ಷ ಸೈದು ಹಾಜಿ ಬೆಲಿಯತ್ಕಾರಂಡ, ಯುವ ಉದ್ಯಮಿ ಗಫೂರ್ ಜಿಮಾಕ್ , ಅಶ್ರಫ್ ಕೊಪ್ಪಕ್ಕಾರಂಡ ಹಾಗೂ ವಿಶೇಷ ಅತಿಥಿಗಳಾಗಿ ಇಸ್ಮಾಯಿಲ್ ನಾಪೋಕ್ಲು, ಹಂಝ ಹರಿಶ್ಚಂದ್ರ, ಮಚ್ಚುರ ರವಿ, ಮೂವೆರಾ ವಿನು ಪಾಲ್ಗೊಂಡಿದ್ದರು.