ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರಬೇಕು: ಶಾಸಕ ಶ್ರೀನಿವಾಸ್

| Published : Aug 13 2025, 12:30 AM IST

ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರಬೇಕು: ಶಾಸಕ ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗಳಿಸಿರುವುದಕ್ಕೆ ಕಾರಣ ಏನಂತ ಗೊತ್ತಿಲ್ಲ. ಆದರೂ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು ಎಂದು ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗಳಿಸಿರುವುದಕ್ಕೆ ಕಾರಣ ಏನಂತ ಗೊತ್ತಿಲ್ಲ. ಆದರೂ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು ಎಂದು ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದ್ದಾರೆ. ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ನಾವೆಲ್ಲಾ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಪಕ್ಷಕ್ಕೆ ಡ್ಯಾಮೇಜ್ ಆಗುವಂತಹ ನಡವಳಿಕೆ ನಮ್ಮ ಹತ್ತಿರ ಇದ್ದಾಗ ಪಕ್ಷ ಕಟ್ಟೋದು ಕಷ್ಟ ಆಗುತ್ತದೆ. ಅವರು ಏನು ಹೇಳಿಕೆ ಕೊಟ್ಟಿದ್ದಾರೆ ಎಂಬುದನ್ನು ನಾನು ನೋಡಿಲ್ಲ. ಅವರು ಸಿದ್ರಾಮಣ್ಣ ಬಗ್ಗೆ ಮಾತನಾಡಿದ್ದಾರೆ. ನಾವು ಮಾತನಾಡಿಲ್ಲ ಅಷ್ಟೇ. ನಾವು ಪ್ರೀತಿಸುವ, ಇಷ್ಟ ಪಡುವ ನಾಯಕ ಸಿದ್ದರಾಮಯ್ಯ. ನಾನು ಜನತಾದಳದಲ್ಲಿ ಇದ್ದಾಗಿನಿಂದಲೂ ಸಿದ್ದರಾಮಯ್ಯ ಅಭಿಮಾನಿ. ತುಮಕೂರಿನ ಎಲ್ಲಾ ಶಾಸಕರು ಸಿದ್ದರಾಮಯ್ಯನಾ ಇಷ್ಟ ಪಡುತ್ತಾರೆ. ರಾಜಣ್ಣ ರಾಜೀನಾಮೆ ಯಾರ ಗೆಲುವು ಇಲ್ಲ, ಯಾರ ಸೋಲು ಇಲ್ಲ. ಪಕ್ಷದಲ್ಲಿ ಬಣ ಇಲ್ಲವೇ ಇಲ್ಲ, ಮೊನ್ನೆ ಸಿಎಂ ಮಿಟಿಂಗ್ ಕರೆದಾಗ ಎಲ್ಲರೂ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದೇವೆ. ಇಲ್ಲಿ ಬಣ ರಾಜಕೀಯದ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದರು.

ತುಮೂಲ್ ಚುನಾವಣೆ ಸಂದರ್ಭದಲ್ಲಿ ನಮಗೆ ಭಿನ್ನಾಭಿಪ್ರಾಯ ಇತ್ತು, ನಮಗೆ ಒಂದು ಮಾತು ಹೇಳದೆ ತುಮೂಲ್ ಎಲೆಕ್ಷನ್ ದಿನ 9 ಜನರನ್ನು ಅವರ ಮನೆಗೆ ಊಟಕ್ಕೆ ಕರೆದರು. ನಮ್ಮ ಮನೆಯವರನ್ನು ಬಿಟ್ಟರು ಅದಕ್ಕೆ ಪ್ರತಿಕ್ರಿಯಿಸಿದ್ದೆ ಅಷ್ಟೇ. ಅವತ್ತು ನಮ್ಮ ಮನೆಯವರನ್ನು ಕರೆದಿದ್ದರೆ ಮುಗಿದು ಹೋಗುತ್ತಿತ್ತು ಎಂದರು.ಅವರು ಹಿರಿಯ ನಾಯಕರಿದ್ದಾರೆ. ಸಣ್ಣ ತಪ್ಪಿನಿಂದ ಆಗಿರುತ್ತದೆ. ಕಾಂಗ್ರೆಸ್ ಅರಸು , ಬಂಗಾರಪ್ಪರಂತಹ ನಾಯಕರನ್ನು ತೆಗೆದಾಗಲೂ ಕಾಂಗ್ರೆಸ್ ಉಳಿದುಕೊಂಡಿತು. ಅಭಿಮಾನಿಗಳು ತಾತ್ಕಾಲಿಕವಾಗಿ ಆಕ್ರೋಶದ ಮಾತನಾಡುತ್ತಾರೆ. ರಾಜಣ್ಣ ಅವರಿಗೆ ಬೇರೆ ಹುದ್ದೆ ನೀಡಿದರೆ ಸ್ವಾಗತ ಮಾಡುವುದಾಗಿ ತಿಳಿಸಿದರು. ರಾಜೀನಾಮೆಯಿಂದ ಖುಷಿ ಇಲ್ಲ, ಇದು ಸಂತೋಷ ಪಡುವಂತಹ ವಿಚಾರ ಕೂಡ ಅಲ್ಲ. ನಾನು ಯಾರ ಹತ್ತಿರವೂ ಮಾತನಾಡಿಲ್ಲ ಎಂದರು.