ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ವಿದ್ಯಾರ್ಥಿಗಳು ಕೇವಲ ಅಕ್ಷರವಂತರಾಗಬಾರದು. ಸಂಸ್ಕಾರವಂತರಾಗಿ ಸಮಾಜದ ಋಣ ತೀರಿಸುವ ಜವಾಬ್ದಾರರಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ವಲಯ ಘಟಕದ ಅಧ್ಯಕ್ಷ ಬಸವರಾಜ ಮೇಟಿ ಹೇಳಿದರು.ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪಪೂ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಉಪನ್ಯಾಸಕ ಶಿವಲಿಂಗ ಸಿದ್ನಾಳ ಪ್ರಾಸ್ತಾವಿಕ ಮಾತನಾಡಿ, ಕಾರ್ಯಕ್ರಮದಲ್ಲಿನ ಸಂಭ್ರಮ ಸಡಗರ ಜೀವನಪೂರ್ತಿ ಇರಬೇಕೆಂದರೆ ಪರೀಕ್ಷೆ ಮುಗಿಯುವವರೆಗೂ ಗಂಭೀರವಾಗಿ ಅಧ್ಯಯನ ಮಾಡಬೇಕು. ಸಾಧಕರಾಗಿ ಉತ್ತಮ ನಾಗರಿಕರಾಗಬೇಕು ಎಂದರು.
ಒಕ್ಕೂಟದ ಅಧ್ಯಕ್ಷ ಬಿ.ಬಿ. ಯಲ್ಲಟ್ಟಿ ವಾರ್ಷಿಕ ವರದಿ ವಾಚನ ಮಾಡಿದರು. ದೈಹಿಕ ಶಿಕ್ಷಣ ನಿರ್ದೇಶಕ ಕ್ರೀಡಾ ಸಾಧಕರ ವರದಿ ವಾಚಿಸಿದರು. ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಪ್ರಸಕ್ತ ವರ್ಷದ ಆದರ್ಶ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಾದ ಧನಂಜಯ ಕುಲಕರ್ಣಿ, ಚಂದ್ರಶೇಖರ ಚೌಧರಿ, ಹಣಮಂತ ಭಜಂತ್ರಿ, ಆನಂದ ಮರನೂರ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಹಾಡು, ನೃತ್ಯ, ಅಭಿನಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಸಂಭ್ರಮಿಸಿದರು.ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಸಂತೋಷ ಹುದ್ದಾರ ಉದ್ಘಾಟಿಸಿದರು. ಪ್ರಾಚಾರ್ಯ ಎಲ್.ಬಿ.ತುಪ್ಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರೌಢಶಾಲೆಯ ಉಪ್ರಾಂಶುಪಾಲ ಬಿ.ಎನ್. ಅರಕೇರಿ, ಎಂ.ಬಿ. ತೇಲ್ಕರ. ಆರ್.ಎನ್. ಪಟ್ಟಣಶೆಟ್ಟಿ, ಜಿ.ಬಿ. ಜತ್ತಿ. ಜಿ.ವೈ. ಕಿತ್ತೂರ, ಎಸ್.ಎಚ್. ಮೆಳವಂಕಿ, ಆರ್.ಎಸ್. ಕಲ್ಲೋಳಿ, ಬಿ.ಬಿ. ಯಲ್ಲಟ್ಟಿ, ಬಿ.ಎಂ. ಸಿದ್ನಾಳ, ಬಿ.ಎನ್. ಹಂದಿಗುಂದ, ವೈ.ಐ. ಕಾಪಶಿ, ಎಲ್.ಎಸ್. ಹಂದಿಗುಂದ, ಮುಂಗರವಾಡಿ, ಆನಂದ ಬಿರಾದಾರಪಾಟೀಲ, ಬಸವರಾಜ, ಗುರು ಮೂಶಪ್ಪಗೋಳ, ಎಸ್.ಎಸ್. ಕಲ್ಲೋಳಿ, ತಿರುಮಲೇಶ ಜಮಾದಾರ, ಸುನಿತಾ ಚೌಗಲಾ ಇದ್ದರು.