ಕಣ್ಣಿನ ಒತ್ತಡ ಕಡಿಮೆ ಮಾಡಲು ಸರಿಯಾದ ಬೆಳಕನ್ನು ಹೊಂದಿರುವ ಪ್ರದೇಶದಲ್ಲಿ ಕೆಲಸ ಮಾಡಬೇಕು ಹಾಗೂ ಪ್ರತಿ 20 ನಿಮಿಷಗಳಿಗೊಮ್ಮೆ 20 ಅಡಿ ದೂರದಲ್ಲಿರುವ ಏನಾದರೂ ವಸ್ತುಗಳನ್ನು ಕನಿಷ್ಠ 20 ಸೆಕೆಂಡುಗಳ ಕಾಲ ನೋಡಬೇಕು, ಇದರಿಂದ ಮಾತ್ರ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವೆಂದು ಸುಂಕಾಪುರ ಇಂಡಸ್ತ್ರೀಸ್ ಮಾಲೀಕ ಬಸವರಾಜ ಸುಂಕಾಪುರ ಅಭಿಪ್ರಾಯ ವ್ಯಕ್ತಪಡಿಸಿದರು.

‍Badagi, camp

Haveri, Badagi suddi, eye camp, rotary club, ಹಾವೇರಿ, ಬ್ಯಾಡಗಿ ಸುದ್ದಿ, ನೇತ್ರ ತಪಾಸಣೆ, ರೋಟರಿ ಕ್ಲಬ್

ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಬಸವರಾಜ ಸುಂಕಾಪುರಕನ್ನಡಪ್ರಭ ವಾರ್ತೆ ಬ್ಯಾಡಗಿ

ಕಣ್ಣಿನ ಒತ್ತಡ ಕಡಿಮೆ ಮಾಡಲು ಸರಿಯಾದ ಬೆಳಕನ್ನು ಹೊಂದಿರುವ ಪ್ರದೇಶದಲ್ಲಿ ಕೆಲಸ ಮಾಡಬೇಕು ಹಾಗೂ ಪ್ರತಿ 20 ನಿಮಿಷಗಳಿಗೊಮ್ಮೆ 20 ಅಡಿ ದೂರದಲ್ಲಿರುವ ಏನಾದರೂ ವಸ್ತುಗಳನ್ನು ಕನಿಷ್ಠ 20 ಸೆಕೆಂಡುಗಳ ಕಾಲ ನೋಡಬೇಕು, ಇದರಿಂದ ಮಾತ್ರ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವೆಂದು ಸುಂಕಾಪುರ ಇಂಡಸ್ತ್ರೀಸ್ ಮಾಲೀಕ ಬಸವರಾಜ ಸುಂಕಾಪುರ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಸಮಗ್ರ ಸಮಾಜ ಕಾರ್ಯ ನಿರ್ವಹಣಾ ಕೇಂದ್ರ ಸ್ನೇಹಸದನದಲ್ಲಿ ರೋಟರಿ ಕ್ಲಬ್ ಬ್ಯಾಡಗಿ, ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಯಾವುದೇ ಕಾರಣಕ್ಕೂ ಕಣ್ಣುಗಳನ್ನು ಉಜ್ಜಿಕೊಳ್ಳಬಾರದು, ಕಣ್ಣಿನ ಸುರಕ್ಷತೆಗಾಗಿ ರಾಸಾಯನಿಕಗಳು, ಉಪಕರಣಗಳು,ವೆಲ್ಡಿಂಗ್ ಅಥವಾ ಕ್ರೀಡೆಗಳ ಸಮಯದಲ್ಲಿ ಕೆಲಸ ಮಾಡುವಾಗ ರಕ್ಷಣಾತ್ಮಕ ಸುರಕ್ಷತಾ ಕನ್ನಡಕಗಳನ್ನು ಬಳಸುವಂತೆ ಸಲಹೆ ನೀಡಿದರು.ಬಡವರು ಶಿಬಿರದ ಪ್ರಯೋಜನ ಪಡೆದುಕೊಳ್ಳಲಿ: ಕಳೆದ ಹಲವು ವರ್ಷಗಳಿಂದ ನಾವು ಶಂಕರ ಕಣ್ಣಿನ ಆಸ್ಪತ್ರೆಯವರ ಸಹಕಾರದಿಂದ ತಾಲೂಕಿನಲ್ಲಿ ಶಿಬಿರ ನಡೆಸುತ್ತಾ ಬಂದಿದ್ದು ಸಹಸ್ರಾರು ಬಡ ಸಾರ್ವಜನಿಕರು ಮತ್ತು ಹಿರಿಯ ನಾಗರಿಕರು ಶಿಬಿರದ ಪ್ರಯೋಜನ ಪಡೆದಿದ್ದಾರೆ. ಇದರಲ್ಲಿ ಶಂಕರ ಕಣ್ಣಿನ ಆಸ್ಪತ್ರೆಯ ಸಹಕಾರ ಹಾಗೂ ಸಿಬ್ಬಂದಿಗಳ ಶ್ರಮವನ್ನು ಪ್ರತಿಯೊಬ್ಬರು ಮೆಚ್ಚಿಕೊಳ್ಳುತ್ತಿದ್ದಾರೆ. ಬರುವ ದಿನಗಳಲ್ಲಿ ಕಣ್ಣಿನ ತೊಂದರೆ ಇರುವಂತಹ ಎಲ್ಲ ಸಾರ್ವ ಜನಿಕರು ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಲಿ ಎಂದರು. ರೋಟರಿ ಸಂಸ್ಥೆ ಅಧ್ಯಕ್ಷ ಅನಿಲಕುಮಾರ ಬೊಡ್ಡಪಾಟಿ ಮಾತನಾಡಿ, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಅನು ದಾನದಿಂದ ಸಹಸ್ರಾರು ಶಸ್ತ್ರಚಿಕಿತ್ಸೆಗಳು ನಡೆಯುತ್ತಿವೆ, ತಿಂಗಳಲ್ಲಿ ಒಮ್ಮೆಯಾದರೂ ಇಂತಹ ಶಿಬಿರಗಳನ್ನು ಆಯೋಜಿಸುವಲ್ಲಿ ಬ್ಯಾಡಗಿ ರೋಟರಿ ಕ್ಲಬ್ ಉತ್ಸುಕವಾಗಿದೆ, ಉತ್ತಮ ಸೌಲಭ್ಯವುಳ್ಳ ಹೆಸರಾಂತ ಆಸ್ಪತ್ರೆಯ ಸಿಬ್ಬಂದಿಗಳು ಇದ್ದಲ್ಲಿಗೆ ಬಂದು ತಪಾಸಣೆ ನಡೆಸಿ ಇಲ್ಲಿಯವರೆಗೂ ಜನರ ಕಣ್ಣಿನ ರಕ್ಷಣೆ ಮಾಡಿರುವುದಕ್ಕೆ ಸಂಸ್ಥೆಯ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಸ್ನೇಹ ಸದನದ ನಿರ್ದೇಶಕಿ ಸಿಸ್ಟರ್ ರೂಪ, ರೋಟರಿ ಅಸಿಸ್ಟೆಂಟ್ ಗವರ್ನರ್ ರೋ. ಮಂಜುನಾಥ ಉಪ್ಪಾರ, ಉಪಾಧ್ಯಕ್ಷ ಆನಂದಗೌಡ ಸೊರಟೂರ, ಕಾರ್ಯದರ್ಶಿ ನಿರಂಜನ ಶೆಟ್ಟಿಹಳ್ಳಿ, ಜಂಟಿ ಕಾರ್ಯದರ್ಶಿ ಕಿರಣ ಮಾಳೇನಹಳ್ಳಿ, ಸದಸ್ಯರಾದ ಪವಾಡಪ್ಪ ಆಚನೂರ ಮತ್ತು ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ನೇತ್ರ ಪರೀಕ್ಷಕ ಡಾ.ಸುನೀಲ ಹಾಗೂ ಸಿಬ್ಬಂದಿ ಅರುಣ, ರವಿಕುಮಾರ ಇನ್ನಿತರದ್ದರು.ಫೊಟೋ-13ಬಿವೈಡಿ6ಏ-ಬ್ಯಾಡಗಿ ಪಟ್ಟಣದ ಸಮಗ್ರ ಸಮಾಜ ಕಾರ್ಯ ನಿರ್ವಹಣಾ ಕೇಂದ್ರ ಸ್ನೇಹ ಸದನದಲ್ಲಿ ರೋಟರಿ ಕ್ಲಬ್ ಬ್ಯಾಡಗಿ, ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ ಜರುಗಿತು. ಫೊಟೋ-13ಬಿವೈಡಿ6ಬಿ-ಬ್ಯಾಡಗಿ ಪಟ್ಟಣದ ಸಮಗ್ರ ಸಮಾಜ ಕಾರ್ಯ ನಿರ್ವಹಣಾ ಕೇಂದ್ರ ಸ್ನೇಹ ಸದನದಲ್ಲಿ ರೋಟರಿ ಕ್ಲಬ್ ಬ್ಯಾಡಗಿ, ಶಂಕರಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ ಜರುಗಿತು.