ಸಾರಾಂಶ
ಐಗೂರು ಗ್ರಾಮದ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಮುತ್ತಪ್ಪ ದೇವರ ಉತ್ಸವ ವಿಜೃಂಬಣೆಯಿಂದ ನೆರವೇರಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಐಗೂರು ಗ್ರಾಮದ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಮುತ್ತಪ್ಪ ದೇವರ ಉತ್ಸವ ವಿಜೃಂಭಣೆಯಿಂದ ನೆರವೇರಿತು.ಬೆಳಗ್ಗೆ 8 ಗಂಟೆಗೆ ಗಣಪತಿ ಹೋಮ ನಡೆಯಿತು. ಸಂಜೆ 4 ಗಂಟೆಗೆ ಮಲಯರಕಲ್ ಮತ್ತು ಮುತ್ತಪ್ಪನ್ ವೆಳ್ಳಾಟಂ, ಸಂಜೆ 5 ಗಂಟೆಗೆ ಗುಳಿಗಪ್ಪನ ದೇವಾಲಯದಿಂದ ಚಂಡೆ ಮೇಳದೊಂದಿಗೆ ದೈವ ನರ್ತನ ನಡೆಯಿತು. ಸಂಜೆ 6 ಗಂಟೆಗೆ ತಿರುವಪ್ಪನ್ ವೆಳ್ಳಾಟಂ ಮತ್ತು ಕಳಸ ಆಗಮನದ ನಂತರ ರಾತ್ರಿ 8.30 ಗಂಟೆಗೆ ಅನ್ನದಾನದಲ್ಲಿ ನೂರಾರು ಭಕ್ತರು ಪಾಲ್ಗೊಂಡರು.
ಸೋಮವಾರ ಬೆಳಗ್ಗೆ 3 ಗಂಟೆಗೆ ಗುಳಿಗನ ಕೋಲ, 5 ಗಂಟೆಗೆ ಮುತ್ತಪ್ಪ ದೇವರ ಕೋಲ, 6 ಗಂಟೆಗೆ ಕುಟ್ಟಿಚಾತನ್ ಕೋಲ, 9 ಗಂಟೆಗೆ ಪೋದಿ ಕೋಲ, 11.30 ಗಂಟೆಗೆ ಗುರು ಶ್ರೀ ತರ್ಪಣ ನಡೆಯಿತು. ಸುತ್ತಮುತ್ತಲಿನ ಗ್ರಾಮಸ್ಥರು ಮುತ್ತಪ್ಪ ದೇವರ ಉತ್ಸವದಲ್ಲಿ ನೆರೆದಿದ್ದ ಸುತ್ತಮುತ್ತಲಿನ ನೂರಾರು ಭಕ್ತರು ತಮ್ಮ ಹಿಂದಿನ ಹರಕೆಗಳನ್ನು ದೈವಕ್ಕೆ ಅರ್ಪಿಸಿ ತಮ್ಮ ಬೇಡಿಕೆಗಳನ್ನು ದೈವಗಳಲ್ಲಿ ಈಡೇರಿಸುವಂತೆ ಪ್ರಾರ್ಥಿಸಿಕೊಂಡರು. ಈ ಸಂದರ್ಭ ಸಮಿತಿ ಅಧ್ಯಕ್ಷರು ಸದಸ್ಯರು ಹಾಜರಿದ್ದರು.