ದೊಡ್ಡಬಳ್ಳಾಪುರ: ಇಲ್ಲಿನ ಶಾಂತಿನಗರದಲ್ಲಿರುವ ನಗರ ದೇವತೆ ಶ್ರೀ ಮುತ್ಯಾಲಮ್ಮ ದೇವಿ ಜಾತ್ರಾ ಮಹೋತ್ಸವವು ಮಂಗಳವಾರ ಸಂಭ್ರಮದಿಂದ ನಡೆಯಿತು. ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ನಡೆದ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ಭಕ್ತಿಭಾವ ಮೆರೆದರು
ದೊಡ್ಡಬಳ್ಳಾಪುರ: ಇಲ್ಲಿನ ಶಾಂತಿನಗರದಲ್ಲಿರುವ ನಗರ ದೇವತೆ ಶ್ರೀ ಮುತ್ಯಾಲಮ್ಮ ದೇವಿ ಜಾತ್ರಾ ಮಹೋತ್ಸವವು ಮಂಗಳವಾರ ಸಂಭ್ರಮದಿಂದ ನಡೆಯಿತು. ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ನಡೆದ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ಭಕ್ತಿಭಾವ ಮೆರೆದರು.
ಆರತಿ ಉತ್ಸವದ ಭಾಗವಾಗಿ ದೊಡ್ಡಬಳ್ಳಾಪುರ ನಗರ, ಶಾಂತಿನಗರ, ದರ್ಗಾಜೋಗಿಹಳ್ಳಿ, ನಾಗಸಂದ್ರ, ಕೊಡಿಗೇಹಳ್ಳಿ, ಕುರುಬರಹಳ್ಳಿ ಮತ್ತು ರೋಜಿಪುರ, ಗಂಗಾಧರಪುರ ಸೇರಿದಂತೆ ಏಳು ಗ್ರಾಮಗಳಿಂದ ನೂರಾರು ಮಹಿಳೆಯರು ಹೊಂಬಾಳೆ ಹಾಗೂ ತಂಬಿಟ್ಟಿನ ಆರತಿಗಳನ್ನು ಮೆರವಣಿಗೆ ಯಲ್ಲಿ ತಂದು ಶ್ರೀಮಾತೆಗೆ ಅರ್ಪಿಸಿದರು. ಗ್ರಾಮಗಳಿಂದ ಆಗಮಿಸಿದ್ದ ಅಲಂಕೃತ ಕುರ್ಜುಗಳು ರಥೋತ್ಸವದ ಆಕರ್ಷಣೆಯಾಗಿದ್ದವು.ಮುತ್ಯಾಲಮ್ಮ ಸೇವಾ ದತ್ತಿ ನೇತೃತ್ವದಲ್ಲಿ ಆಯೋಜನೆಗೊಂಡಿರುವ ಜಾತ್ರಾ ಮಹೋತ್ಸವದ ಭಾಗವಾಗಿ ಮಂಗಳವಾರ ಬೆಳಗ್ಗೆ 10.30ಕ್ಕೆ ದೇವಾಲಯದಿಂದ ರಥೋತ್ಸವ ಆರಂಭವಾಯಿತು. ಶಾಂತಿನಗರ ಮುಖ್ಯ ರಸ್ತೆ ಮೂಲಕ ಮುಗುವಾಳಪ್ಪವೃತ್ತದವರೆಗೆ ಸಂಚರಿಸಿ ಬಳಿಕ ದೇವಾಲಯಕ್ಕೆ ಹಿಂತಿರುಗಿತು. ವಿವಿಧೆಡೆ ಅರವಂಟಿಕೆಗಳು ಆಯೋಜನೆಗೊಂಡಿದ್ದವು. ಸಹಸ್ರಾರು ಜನರು ಪಾಲ್ಗೊಂಡು ಮುತ್ಯಾಲಮ್ಮ ದೇವಿ ಹಾಗೂ ದೊಡ್ಡಮ್ಮ ದೇವಿಗೆ ಪೂಜೆ ಸಲ್ಲಿಸಿ, ಆರತಿಗಳನ್ನು ಅರ್ಪಿಸಿದರು.
ರಥೋತ್ಸವ ವೇಳೆ ಸಾಂಸ್ಕೃತಿಕ ಕಲಾ ತಂಡಗಳು ಭಾಗಿಯಾಗಿದ್ದವು. ಶಿವತಾಂಡವ ನೃತ್ಯ, ವೀರಗಾಸೆ, ಭದ್ರಕಾಳಿ, ಚಂಡೆ ವಾದನ, ಡ್ರಮ್ಸ್ ವಾದನ, ಗಾರುಡಿ ಗೊಂಬೆಗಳು, ಮರಗಾಲು ಮನುಷ್ಯ, ವೀರಭದ್ರನ ಕುಣಿತ, ಪೂಜಾ ಕುಣಿತ, ತಮಟೆ ಸೇರಿದಂತೆ ಹಲವು ಜನಪದ ತಂಡಗಳು ಪಾಲ್ಗೊಂಡಿದ್ದವು.ವಿವಿಧೆಡೆ ಅರವಂಟಿಗೆ:
ಇಲ್ಲಿನ ಶಾಂತಿನಗರ 7ನೇ ಕ್ರಾಸ್ ಶ್ರೀ ಮುತ್ಯಾ ಲಮ್ಮ ಸೇವಾ ಸಮಿತಿಯ ನೇತೃತ್ವದಲ್ಲಿ ಜಾತ್ರೆ ಮಹೋತ್ಸವ ಅಂಗವಾಗಿ 3ನೇ ವರ್ಷದ ಅರವಂಟಿಗೆ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ಮಾಡಲಾಯಿತು.28ಕೆಡಿಬಿಪಿ1-
ದೊಡ್ಡಬಳ್ಳಾಪುರ ನಗರದೇವತೆ ಶ್ರೀಮುತ್ಯಾಲಮ್ಮ ಜಾತ್ರಾ ಮಹೋತ್ಸವ ಮಂಗಳವಾರ ಸಂಭ್ರಮದಿಂದ ನಡೆಯಿತು.