ಮಠಗಳು ಸಂಸ್ಕೃತಿ, ಸಂಸ್ಕಾರ ಕಲಿಸುವ ಕೇಂದ್ರಗಳು: ಬಾಬಾಸಾಹೇಬ ಪಾಟೀಲ

| Published : Nov 14 2024, 12:49 AM IST

ಮಠಗಳು ಸಂಸ್ಕೃತಿ, ಸಂಸ್ಕಾರ ಕಲಿಸುವ ಕೇಂದ್ರಗಳು: ಬಾಬಾಸಾಹೇಬ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲೆಯಲ್ಲಿ ಶಿಕ್ಷಕನಿಂದ ಅಕ್ಷರ ಜ್ಞಾನ ಕಲಿತಂತೆ ಮಠಗಳಲ್ಲಿನ ಗುರುವಿನಿಂದ ಸಂಸ್ಕಾರ, ಸಂಸ್ಕೃತಿ ಕಲಿತು ಸಮಾಜದಲ್ಲಿ ಸಭ್ಯರಾಗಿ ಬಾಳಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಶಾಲೆಯಲ್ಲಿ ಶಿಕ್ಷಕನಿಂದ ಅಕ್ಷರ ಜ್ಞಾನ ಕಲಿತಂತೆ ಮಠಗಳಲ್ಲಿನ ಗುರುವಿನಿಂದ ಸಂಸ್ಕಾರ, ಸಂಸ್ಕೃತಿ ಕಲಿತು ಸಮಾಜದಲ್ಲಿ ಸಭ್ಯರಾಗಿ ಬಾಳಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ತಾಲೂಕಿನ ಸಂಪಗಾಂವ ಗ್ರಾಮದಲ್ಲಿ ಮಂಗಳವಾರ ಅರಬಾವಿ ದುರದುಂಡೀಶ್ವರ ಮಠದ ನೂತನ ಶಾಖಾ ಮಠ ಉದ್ಘಾಟನೆ ಮತ್ತು ಕಳಸಾರೋಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಠದ ಮೂಲಕ ಗ್ರಾಮದಲ್ಲಿ ನಿರಂತರ ಅಧ್ಯಾತ್ಮ ಕ್ರಾಂತಿ ಉಂಟಾಗಲಿ. ಯವಕರಿಗೆ ಈ ಶಕ್ತಿ ಕೇಂದ್ರ ಸೂಕ್ತ ಮಾರ್ಗದರ್ಶನ ಮಾಡಲಿ ಎಂದರು.

ಗದಗ-ಡಂಬಳದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಪುರಾತನ ಕಾಲದಿಂದಲೂ ಭಕ್ತರನ್ನು ಉದ್ಧರಿಸುವ ನಿಟ್ಟಿನಲ್ಲಿ ಸಮಾಜದಲ್ಲಿ ಶೈಕ್ಷಣಿಕ, ಅಧ್ಯಾತ್ಮಿಕ, ಧಾರ್ಮಿಕವಾಗಿ ಮಠಗಳು ನಿರಂತರ ಸೇವೆಗೈಯುತ್ತಿದ್ದು ಪ್ರತಿಯೊಬ್ಬರ ಸಹಕಾರ ಅತ್ಯವಶ್ಯವಾಗಿದೆ ಎಂದರು.

ಅರಬಾವಿ ಸಿದ್ಧಸಂಸ್ಥಾನ ಮಠದ ಪೀಠಧೀಶ ಗುರುಬಸವಲಿಂಗ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿದರು.

ಬೆಳಗಾವಿ ಕಾರಂಜಿ ಮಠದ ಗುರುಸಿದ್ದ ಶ್ರೀಗಳು, ಬೈಲಹೊಂಗಲ-ಹುಬ್ಬಳ್ಳಿ ರುದ್ರಾಕ್ಷಿಮಠದ ಬಸವಲಿಂಗ ಶ್ರೀಗಳು, ಸಂಪಗಾಂವ ಕಾಟಾಪೂರಿಮಠದ ಚೆನ್ನವೀರ ಶ್ರೀಗಳು ಮಠದ ಬೆಳವಣಿಗೆ ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ವಿಪ ಸದಸ್ಯ ಮಹಾಂತೇಶ ಕವಟಗಿಮಠ,ಗ್ರಾಪಂ ಅಧ್ಯಕ್ಷ ಶ್ರೀಕಾಂತ ಹಲಕಿ, ಹಿರಿಯರಾದ ಶಂಕರೆಪ್ಪ ಶಿದ್ನಾಳ, ಮುಖ್ಯಶಿಕ್ಷಕ ಶ್ರೀಕಾಂತ ಉಳ್ಳೇಗಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ಡಿ. ಗಂಗಣ್ಣವರ, ಬಸವರಾಜ ಚಿವಟಗುಂಡಿ, ಮಲ್ಲಿಕಾರ್ಜುನ ಚವಲಗಿ, ಸಾತಪ್ಪ ಟೊಣ್ಣಿ, ಬಸವರಾಜ ಉಳ್ಳೇಗಡ್ಡಿ, ಸಂತೋಷ ನಂದೆನ್ನವರ, ಆನಂದ ಟೊಣ್ಣಿ, ಮಂಜುನಾಥ ಉಳವಿ ಹಾಗೂ ಜಾತ್ರಾ ಮಹೋತ್ಸವ ಕಮಿಟಿಯ ಸದಸ್ಯರು, ಗ್ರಾಪಂ ಸದಸ್ಯರು, ಗ್ರಾಮದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಬೆಳಗ್ಗೆ ಸುಮಂಗಲೆಯರಿಂದ ಕುಂಭೋತ್ಸವ ಜರುಗಿತು. ಬೆಳಗ್ಗೆ ದುರದುಂಡೀಶ್ವರ ಮೂರ್ತಿಗೆ ವಿಶೇಷ ಪೂಜೆ, ಪ್ರಾರ್ಥನೆ, ಸಹಸ್ರಮಂತ್ರ ಪಠಣ, ಅಭಿಷೇಕ ನಡೆದವು. ನಿತ್ಯ ಮಕ್ಕಳಿಂದ, ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಜರುಗಿದವು. ವಿವಿಧ ಸ್ಫರ್ಧೆ ಜರುಗಿದವು.