ಸಾರಾಂಶ
ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಮ್ಯೂಚುಯಲ್ ಫಂಡ್ ಹೂಡಿಕೆ ಮತ್ತು ಉಳಿತಾಯದ ಕುರಿತಾದ ಮಾಹಿತಿ ಕಾರ್ಯಕ್ರಮ ಇಲ್ಲಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ನೆರವೇರಿತು.
ಕನ್ನಡಪ್ರಭ ವಾರ್ತೆ ಬೈಂದೂರು
ಇಲ್ಲಿನ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಇಂಟೆಗ್ರೇಟೆಡ್ ಎಂಟರ್ಪ್ರೈಸಸ್ ಉಡುಪಿ ಆಶ್ರಯದಲ್ಲಿ ಸರಸ್ವತಿ ವಿದ್ಯಾಲಯದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಮ್ಯೂಚುಯಲ್ ಫಂಡ್ ಹೂಡಿಕೆ ಮತ್ತು ಉಳಿತಾಯದ ಕುರಿತಾದ ಮಾಹಿತಿ ಕಾರ್ಯಕ್ರಮ ಇಲ್ಲಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ನೆರವೇರಿತು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಎಚ್‌ಡಿಎಫ್‌ಸಿ ಮ್ಯೂಚುಯಲ್ ಫಂಡ್ ರಿಲೇಷನ್‌ಶಿಪ್ ಮ್ಯಾನೇಜರ್ ಸುದೀಪ್ ಆರ್. ಮಾತನಾಡಿ, ಗಳಿಕೆಯನ್ನು ಖರ್ಚು ಮಾಡುವ ಮೊದಲು ಸಮರ್ಪಕ ಯೋಜನೆಯನ್ನು ರೂಪಿಸಿಕೊಳ್ಳಬೇಕು ಉಳಿಕೆಯನ್ನು ಜೀವನದ ಒಂದು ಭಾಗವಾಗಿ ರೂಪಿಸಿಕೊಂಡು ಉಳಿಕೆಯ ಮೂಲಕ ಗಳಿಕೆಯನ್ನು ಪಡೆಯುವಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದರು.
ಇಂಟೆಗ್ರೇಟೆಡ್ ಎಂಟರ್ಪ್ರೈಸಸ್ ಮಂಗಳೂರು ವಿಭಾಗದ ಸೀನಿಯರ್ ಮ್ಯಾನೇಜರ್ ಧನ್ಯ ಬಿ. ಇವರು ವಿದ್ಯಾರ್ಥಿಗಳಿಗೆ ಉಳಿಕೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಇಂಟಿಗ್ರೇಟೆಡ್ ಎಂಟರ್ಪ್ರೈಸಸ್ ಜನಾರ್ದನ ಪೂಜಾರಿ ಮತ್ತು ಆದರ್ಶ ಶುಭ ಹಾರೈಸಿದರು.ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ. ಸಿ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಪ್ರಾಸ್ತಾವಿಕ ಮಾತುಗಳಾಡಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸುಗುಣ ಆರ್ ಕೆ ಮತ್ತು ಎನ್ಎಸ್ಎಸ್ ವಿದ್ಯಾರ್ಥಿ ಘಟಕದ ನಾಯಕ ಗಗನ್ ಮೇಸ್ತ ಉಪಸ್ಥಿತರಿದ್ದರು. ವಿದ್ಯಾರ್ಥಿ ರೋಹನ್ ಸ್ವಾಗತಿಸಿದರು. ಸಂಜನಾ, ಭೂಮಿಕ ಮತ್ತು ಮಾನ್ಯ ಪ್ರಾರ್ಥಿಸಿದರು. ಶ್ರೀಶ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಶೈಲೇಶ್ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು. ನಾಗಾರ್ಜುನ ವಂದಿಸಿದರು.