ಸಾರಾಂಶ
ಸಹಕಾರಿ ಕ್ಷೇತ್ರ ಗದಗ ಜಿಲ್ಲೆಯಲ್ಲಿ ಜನ್ಮ ತಾಳಿದ್ದು ನಮಗೆಲ್ಲ ಖುಷಿ ಕೊಡುವ ಸಂಗತಿ. ಸಹಕಾರಿ ರಂಗ ಬೆಳೆಯುವಲ್ಲಿ ಸಂಘದ ಎಲ್ಲ ಸದಸ್ಯರ ಸಹಕಾರ ಅಗತ್ಯ
ಲಕ್ಷ್ಮೇಶ್ವರ: ಸಹಕಾರಿ ರಂಗದಲ್ಲಿ ಪರಸ್ಪರ ನಂಬಿಕೆ, ವಿಶ್ವಾಸ ಮುಖ್ಯ. ಸಹಕಾರಿ ಸಂಘಗಳು ಸದೃಢವಾದಲ್ಲಿ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಕೆಸಿಸಿ ಬ್ಯಾಂಕಿನ ನಿರ್ದೇಶಕ ಗೋವಿಂದಗೌಡ ಪಾಟೀಲ ಹೇಳಿದರು. ಸಮೀಪದ ರಾಮಗೇರಿ ಗ್ರಾಮದ ಸಮುದಾಯ ಭವನದಲ್ಲಿ ಮಂಗಳವಾರ ಜರುಗಿದ ೭೧ನೇ ಸಹಕಾರಿ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಕ್ಷೇತ್ರ ಗದಗ ಜಿಲ್ಲೆಯಲ್ಲಿ ಜನ್ಮ ತಾಳಿದ್ದು ನಮಗೆಲ್ಲ ಖುಷಿ ಕೊಡುವ ಸಂಗತಿ. ಸಹಕಾರಿ ರಂಗ ಬೆಳೆಯುವಲ್ಲಿ ಸಂಘದ ಎಲ್ಲ ಸದಸ್ಯರ ಸಹಕಾರ ಅಗತ್ಯ. ಸಹಕಾರದಿಂದ ನಮ್ಮೆಲ್ಲರ ಅಭಿವೃದ್ಧಿ ಸಾಧ್ಯ. ಸಹಕಾರಿ ಸಂಘಗಳಲ್ಲಿ ಪಾರದರ್ಶಕತೆ ಇರಬೇಕು ಎಂದು ಹೇಳಿದರು.ಕೆಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕ ಸುನೀಲ ಮಹಾಂತಶೆಟ್ಟರ್ ಮಾತನಾಡಿ, ಸಹಕಾರಿ ಸಂಘಗಳು ಸದೃಢವಾದಲ್ಲಿ ಗ್ರಾಮದ ಬೆಳವಣಿಗೆಗೆ ಸಾಧ್ಯ.ಸಹಕಾರಿ ಸಪ್ತಾಹ ಆಚರಣೆಗೆ ಮಾತ್ರ ಸೀಮಿತವಾಗಬಾರದು ಆಚಚರಣೆಗೆ ಬರಬೇಕು. ಜಿಲ್ಲೆಯಲ್ಲಿ ಸಹಕಾರ ಇನ್ನಷ್ಟು ಬಲಾಢ್ಯ ಆಗಬೇಕಾಗಿದೆ ಎಂದರು.
ಲಕ್ಷ್ಮೇಶ್ವರ ಎಪಿಎಂಸಿ ಮಾಜಿ ಅಧ್ಯಕ್ಷ ಬಸಣ್ಣ ಬೆಟಗೇರಿ ಮಾತನಾಡಿ, ಆರಂಭದಲ್ಲಿ ಉತ್ತಮ ರೀತಿಯಿಂದ ನಡೆಯುತ್ತಿದ್ದ ಸಹಕಾರ ಸಂಘಗಳು ಇತ್ತಿಚಿನ ದಿನಗಳಲ್ಲಿ ಸರಿಯಾಗಿ ನಡೆಯುತ್ತಿಲ್ಲ. ಸಹಕಾರಿ ಕ್ಷೇತ್ರ ಜಿಲ್ಲೆಯಲ್ಲಿ ಜನ್ಮ ತಾಳಿದ್ದರೂ ಕೂಡ ಹತ್ತು ಹಲವು ಕಾರಣಗಳಿಂದ ಮಹಿಳೆಯರು ಈ ಕ್ಷೇತ್ರಕ್ಕೆ ಬಂದಿರಲಿಲ್ಲ. ಆದರೆ ೧೯೮೪ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಅಸ್ತಿತ್ವಕ್ಕೆ ಬಂದ ನಂತರ ಮಹಿಳೆಯರು ಸಹಕಾರಿ ಕ್ಷೇತ್ರಕ್ಕೆ ಬರುವಂತಾಯಿತು. ಇದೀಗ ಸಹಕಾರಿ ಕ್ಷೇತ್ರ ವಿಸ್ತಿರಿಸಿದ್ದು ಅನೇಕ ಮಹಿಳಾ ಸಹಕಾರಿ ಸಂಘಗಳು ಚೆನ್ನಾಗಿ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಹೇಂದ್ರ ಬೆಟಗೇರಿ ಅಧ್ಯಕ್ಷತೆ ವಹಿಸಿದ್ದರು.
ವಿ.ಜಿ.ಕುಲಕರ್ಣಿ, ಗ್ರಾಪಂ ಅಧ್ಯಕ್ಷೆ ಅಡಿವೆಕ್ಕ ಬೆಟಗೇರಿ, ಸುಷ್ಮಾ ಕಡಿವಾಣ, ಎಚ್.ಎ. ಬಂಡೆಣ್ಣವರ, ಚನ್ನಬಸಪ್ಪ ಲಿಂಗಶೆಟ್ಟಿ, ಶೇಖಣ್ಣ ಕಾಳೆ, ಕೆ.ಸಿ. ಕೂಸನೂರಮಠ, ಬಿ.ಆರ್. ನಿಡಗುಂದಿಮಠ, ವಿ.ವಿ. ಪಡಸಲಗಿ, ವಿಶ್ವನಾಥ ಲಮಾಣಿ, ಪುನೀತ್ ಓಲೆಕಾರ, ರವೀಂದ್ರ ಗೊಜಗೊಜಿ, ಮೌನೇಶ ಶಿರಹಟ್ಟಿ, ಶಿವಾನಂದ ರಾಮಗೇರಿ, ಪರಸಪ್ಪ ಗೊಂದಿ, ಫಕ್ಕೀರಪ್ಪ ಕಾಳೆ, ಪರಶುರಾಮ ಲಕ್ಕಣ್ಣವರ, ಶಿವಾನಂದ ಕಳ್ಳಿಮಠ, ಅಶೋಕ ಹುಣಿಸಿಮರದ, ಶಿವಾನಂದ ಕಡೆಮನಿ, ಕಲ್ಲವ್ವ ಬಾಲಣ್ಣವರ, ಲಕ್ಷ್ಮೀ ಬೆಟಗೇರಿ ಇದ್ದರು. ಶಿಕ್ಷಕಿ ಮೈತ್ರಾದೇವಿ ಹಿರೇಮಠ ಉಪನ್ಯಾಸ ನೀಡಿದರು.ಚಂದ್ರಶೇಖರ ಕರಿಯಪ್ಪನವರು ಸ್ವಾಗತಿಸಿ, ನಿರೂಪಿಸಿದರು.