ಅಧ್ಯಕ್ಷರಾಗಿ ಎಂ.ವಿ.ರವಿ, ಖಜಾಂಚಿಯಾಗಿ ಕುಮಾರ ನಾಯ್ಕ

| Published : Jul 11 2024, 01:31 AM IST

ಸಾರಾಂಶ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ನೂತನ ಅಧ್ಯಕ್ಷರಾಗಿ ಪಂಚಾಯತ್‌ರಾಜ್ ಇಲಾಖೆಯ ಎಂ.ವಿ. ರವಿ ಮತ್ತು ಖಜಾಂಚಿಯಾಗಿ ಶಿಕ್ಷಣ ಇಲಾಖೆಯ ಕುಮಾರ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

- ಹೊನ್ನಾಳಿ ತಾಲೂಕು ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ನೂತನ ಅಧ್ಯಕ್ಷರಾಗಿ ಪಂಚಾಯತ್‌ರಾಜ್ ಇಲಾಖೆಯ ಎಂ.ವಿ. ರವಿ ಮತ್ತು ಖಜಾಂಚಿಯಾಗಿ ಶಿಕ್ಷಣ ಇಲಾಖೆಯ ಕುಮಾರ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬುಧವಾರ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ರಂಗನಾಥ ಅವರು ಅವಿರೋಧ ಆಯ್ಕೆ ಘೋಷಿಸಿದರು.

ಹಿಂದಿನ ಅಧ್ಯಕ್ಷರಾಗಿದ್ದ ಆರ್.ಎಸ್. ಪಾಟೀಲ್ ಮತ್ತು ಖಜಾಂಚಿಯಾಗಿದ್ದ ಮಹೇಂದ್ರಕುಮಾರ್ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಚುನಾವಣೆ ನಡೆಯಿತು.

ನೂತನ ಅಧ್ಯಕ್ಷ ಎಂ.ವಿ.ರವಿ ಮಾತನಾಡಿ, ಸರ್ಕಾರಿ ನೌಕರರ ಹಿತಕಾಪಾಡುವುದು ಒಂದು ಕಡೆಯಾದರೆ, ಸಾಮಾನ್ಯ ಜನರ ಕೆಲಸಗಳನ್ನು ತ್ವರಿತ ಗತಿಯಲ್ಲಿ ಮಾಡಿಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಸರ್ಕಾರ 7ನೇ ವೇತನ ಆಯೋಗದ ಶಿಫಾರಸುಗಳನ್ನು ಒಪ್ಪಿ ಆದಷ್ಟು ಬೇಗನೆ ಸರ್ಕಾರಿ ನೌಕರರಿಗೆ ಎಲ್ಲ ಸೌಲಭ್ಯಗಳು ದೊರೆಯುವಂತಾಗಲಿ ಎನ್ನುವುದೇ ನನ್ನ ಆಶಯವಾಗಿದೆ ಎಂದರು.

ನೂತನ ಅಧ್ಯಕ್ಷ ಎಂ.ವಿ. ರವಿ ಹಾಗೂ ಕುಮಾರ ನಾಯ್ಕ ಅವರನ್ನು ತಾ.ಪಂ., ಇ.ಒ. ರಾಘವೇಂದ್ರ, ಪ್ರಭಾರ ಬಿಇಒ ತಿಪ್ಪೇಶಪ್ಪ, ಸಂಘದ ನಿರ್ದೇಶಕರಾದ ಚಂದ್ರಶೇಖರ, ಕೋಟೆಪ್ಪ, ರವಿ, ದೀಪಕ್, ಸತೀಶ್‍ಕುಮಾರ್, ಸುರೇಶ್, ಪ್ರಹ್ಲಾದ್, ಪುರುಷೋತ್ತಮ್ ಹಾಗೂ ಇತರರು ಅಭಿನಂದಿಸಿದರು.

- - - -10ಎಚ್.ಎಲ್.ಐ1:

ರಾಜ್ಯ ಸರ್ಕಾರಿ ನೌಕರರ ಸಂಘ ಹೊನ್ನಾಳಿ ತಾಲೂಕು ಘಟಕ ಅಧ್ಯಕ್ಷರಾಗಿ ಎಂ.ವಿ.ರವಿ ಮತ್ತು ಖಜಾಂಚಿಯಾಗಿ ಕುಮಾರ ನಾಯ್ಕ ಆಯ್ಕೆಯಾದರು.