ನನ್ನ ನಗರ ನನ್ನ ಜವಾಬ್ದಾರಿ-ಸಕ್ರಿಯ ನಾಗರಿಕತ್ವದ ಕೈಪಿಡಿ ಬಿಡುಗಡೆ

| Published : Feb 25 2024, 01:45 AM IST

ನನ್ನ ನಗರ ನನ್ನ ಜವಾಬ್ದಾರಿ-ಸಕ್ರಿಯ ನಾಗರಿಕತ್ವದ ಕೈಪಿಡಿ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ನನ್ನ ನಗರ ನನ್ನ ಜವಾಬ್ದಾರಿ - ಸಕ್ರಿಯ ನಾಗರಿಕತ್ವದ ಕೈಪಿಡಿಯು ನಗರದ ನಿರಾಸಕ್ತ ನಾಗರೀಕ ಹೇಗೆ ಸಮುದಾಯ ನಾಯಕನಾಗಬಹುದು ಎಂಬುದನ್ನು ತಿಳಿಸುವ ಕೈಪಿಡಿಯಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಜನಾಗ್ರಹ ಸಿಟಿಜನ್‌ಶಿಪ್ ಆ್ಯಂಡ್‌ ಡೆಮಾಕ್ರಸಿ ಸಿದ್ಧಪಡಿಸಿರುವ ''ನನ್ನ ನಗರ ನನ್ನ ಜವಾಬ್ದಾರಿ'' ಸಕ್ರಿಯ ನಾಗರಿಕತ್ವದ ಕೈಪಿಡಿಯ ಕರ್ನಾಟಕ ಆವೃತ್ತಿಯನ್ನು ಮಿಸ್ಬಾ ನಗರ ಚೌಕ್ ಮಿರ್ಚಿ ಗೊಡನ್, ಐಕಾನ್ ಕಾಂಪ್ಲೆಕ್ಸ್ ಮೊದಲನೇ ಮಹಡಿಯಲ್ಲಿ ಜನಪ್ರತಿನಿದಿಗಳು, ನಾಗರಿಕ ಮುಖಂಡರು, ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ಮತ್ತು ನಾಗರಿಕರ ಸಾಮೂಹಿಕ ಮುಖಂಡರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.

ಹಜರತ್‌ ಸೈಯದ್ ಅಲಿ ಅಕ್ಬರ್ ಹುಸೇನಿ ಅಲ್ಲಮಾರುಫ್ ಸಾಭಿರ್ ಹುಸೇನಿ ಸಾಯೆಬ್, ಕಿಬ್ಲಾ ಮುತ್ವಲ್ಲಿ ದರ್ಗಾ ಕುಂಜಾ ಮಾ ಸಾಯೆಬಾ ಖಾಜಾ ಖಮೃದ್ದಿನ್ ಮೀರಾ ಕಪ್ನುರಾ ಕಲಬುರ್ಗಿ ಇವರು ಸಾನ್ನಿಧ್ಯವಸಿದ್ದರು.

ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ನನ್ನ ನಗರ ನನ್ನ ಜವಾಬ್ದಾರಿ - ಸಕ್ರಿಯ ನಾಗರಿಕತ್ವದ ಕೈಪಿಡಿಯು ನಗರದ ನಿರಾಸಕ್ತ ನಾಗರೀಕ ಹೇಗೆ ಸಮುದಾಯ ನಾಯಕನಾಗಬಹುದು ಎಂಬುದನ್ನು ತಿಳಿಸುವ ಕೈಪಿಡಿಯಾಗಿದ್ದು. ಇದು ಜನಾಗ್ರಹ ಸಂಸ್ಥೆಯ ೨೦ ವರ್ಷದ ಅನುಭವಗಳನ್ನು ಒಳಗೊಂಡು ಸುಂದರವಾಗಿ ಮೂಡಿಬಂದಿದೆ ಮತ್ತು ವಾರ್ಡ್ ಸಮಿತಿ ಮಾಡುವುದರಿಂದ ಸ್ಥಳೀಯ ಮಟ್ಟದಲ್ಲಿ ಜನರ ಭಾಗವಹಿಸುವಿಕೆ ಹೆಚ್ಚಾಗಿ ಉತ್ತಮ ಅಭಿವೃದ್ಧಿ ಕೆಲಸಗಳಾಗುತ್ತವೆ ಮತ್ತು ವಾರ್ಡ್ ಸಮಿತಿಗೆ ನನ್ನ ಬೆಂಬಲವಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಾರ್ಡ್ ಸಮಿತಿ ಬಳಗ ಸಂಚಾಲಕ ಮೋದಿನ ಪಟೇಲ್ ಅಣಬಿ, ಹಿರಿಯ ಸಂಯೋಜಕ ಮಂಜುನಾಥ ಮೊಕಾಶಿ, ಉದ್ಯಮಿ ನೀಲಕಂಠರಾವ ಮೂಲಗೆ, ಉರ್ದು ಹಿರಿಯ ಪತ್ರಕರ್ತ ಅಜೀಜ್ ಉಲ್ಲಾ ಸರ್ಮಸ್ತ, ಮಾಜಿ ಮೇಯರ್ ಸಜ್ಜಾದ ಅಲಿ ಇನಾಮದಾರ, ಮಾಜಿ ಪಾಲಿಕೆ ಸದಸ್ಯ ಹುಲಿಗೆಪ್ಪ ಕನಕಗಿರಿ, ಸರಕಾರಿ ನೌಕರರ ಸಂಘದ ನಿವೃತ್ತ ಅಧ್ಯಕ್ಷ ನಜಿರೋದ್ದಿನ್ ಮೂತವಲ್ಲಿ, ಡಾ ಗೌಸಿದ್ದೀನ್, ಅಸ್ಲಾಂ ಬಾಜೆ, ಸಂಜೀವ ಕುಮಾರ ಡೊಂಗರಗಾವ್, ಡಾ ರಾಜಶೇಖರ ಕಟ್ಟಿಮನಿ, ಖಾಜಾ ಗೇಸುದರಜ್, ಸಹಾರ ಭಾನು, ಅಕ್ರಮ ಸಕ್ರಮ ಭಾಗರ್ ಉಕ್ಕುಂ ಸಾಗುವಳಿ, ಶೈಖ್ ಸಮ್ರಿನ್, ರಾಜಶೇಖರ್ ಮಾಗ, ರಾಜಶೇಖರ್ ಬಿರಾದರ, ಸತೀಶ ಮಾಲಗಿತ್ತಿ, ನಾಗರಾಜ್ ಮುಲಗಿ, ಬಸವರಾಜ ಗಂಜಿ ಸೇರಿದಂತೆ ಇತರರು ಇದ್ದರು.