ಹಾಲು ಉತ್ಪಾದಕರ ಅಭಿವೃದ್ಧಿಯೇ ನನ್ನ ಧ್ಯೇಯ

| Published : Feb 01 2025, 12:04 AM IST

ಸಾರಾಂಶ

ಮುಂದಿನ ಐದು ವರ್ಷ ಅವಧಿಯಲ್ಲಿ ಶಿರಾ ತಾಲೂಕಿನಲ್ಲಿ ಹೈನುಗಾರಿಕೆಯನ್ನು ಮತ್ತಷ್ಟು ಪ್ರೋತ್ಸಾಹಿಸಿ ಕ್ಷೀರ ಕ್ರಾಂತಿಯೇ ಮಾಡಬೇಕೆಂಬ ನನ್ನ ಸಂಕಲ್ಪಕ್ಕೆ ಎಲ್ಲರೂ ಶಕ್ತಿ ತುಂಬುವ ಕೆಲಸ ಮಾಡಬೇಕು. ಹಾಲು ಉತ್ಪಾದಕರ ಅಭಿವೃದ್ಧಿಯೇ ನನ್ನ ಧ್ಯೇಯ ಮತ್ತು ಗುರಿ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಮುಂದಿನ ಐದು ವರ್ಷ ಅವಧಿಯಲ್ಲಿ ಶಿರಾ ತಾಲೂಕಿನಲ್ಲಿ ಹೈನುಗಾರಿಕೆಯನ್ನು ಮತ್ತಷ್ಟು ಪ್ರೋತ್ಸಾಹಿಸಿ ಕ್ಷೀರ ಕ್ರಾಂತಿಯೇ ಮಾಡಬೇಕೆಂಬ ನನ್ನ ಸಂಕಲ್ಪಕ್ಕೆ ಎಲ್ಲರೂ ಶಕ್ತಿ ತುಂಬುವ ಕೆಲಸ ಮಾಡಬೇಕು. ಹಾಲು ಉತ್ಪಾದಕರ ಅಭಿವೃದ್ಧಿಯೇ ನನ್ನ ಧ್ಯೇಯ ಮತ್ತು ಗುರಿ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಹೇಳಿದರು.ಅವರು ಶುಕ್ರವಾರ ತಾಲೂಕಿನ ಮೇಲ್ಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮನಹಳ್ಳಿ ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿದರು. ನಂದಿನಿ ಹಾಲು ದೇಶದಲ್ಲಿಯೇ ಗುಣಮಟ್ಟದ ಹಾಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಹಾಲಿನ ಉತ್ಪಾದನೆ ಹೆಚ್ಚಾದಂತೆ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಅವಶ್ಯಕತೆ ಇದೆ. ನಂದಿನಿ ಹಾಲಿನ ಉತ್ಪಾದನೆಯಿಂದ ಸಾವಿರಾರು ರೈತ ಕುಟುಂಬಗಳ ಜೀವನಾಡಿಯಾಗಿದೆ. ಹಸುಗಳ ಸಾಕಾಣಿಕೆ ಮಾಡಿ ಪ್ರತಿದಿನ 150 ಲೀಟರ್ ಹಾಲು ಸಂಗ್ರಹಣೆ ಮಾಡುವ ಸಾಮರ್ಥ್ಯ ಹೊಂದುವ ಶಿರಾ ತಾಲೂಕಿನ ಪ್ರತಿಯೊಂದು ಹಳ್ಳಿಯಲ್ಲೂ ಹಾಲು ಉತ್ಪಾದಕರ ಸಂಘ ಸ್ಥಾಪನೆ ಮಾಡಿ, ಹೈನುಗಾರಿಕೆಯನ್ನು ಪ್ರೋತ್ಸಾಹಿಸಿ ಬಡ ರೈತ ಕುಟುಂಬಗಳ ಆರ್ಥಿಕ ಪ್ರಗತಿಗೆ ಆದ್ಯತೆ ನೀಡುವುದೇ ನನ್ನ ಗುರಿ ಎಂದರು.ತುಮಕೂರು ಹಾಲು ಒಕ್ಕೂಟ (ಹಾಲು ಮತ್ತು ಶೇಖರಣೆ) ವ್ಯವಸ್ಥಾಪಕ ಟಿ.ವಿ. ಶ್ರೀನಿವಾಸ್ ಮಾತನಾಡಿ ಶಿರಾ ಭಾಗದಲ್ಲಿ ಹೈನುಗಾರಿಕೆಗೆ ಉತ್ತಮ ವಾತಾವರಣವಿದ್ದು, ಗುಣಮಟ್ಟದ ಹಾಲನ್ನು ಡೈರಿಗೆ ಹಾಕುವ ಮೂಲಕ ಹೆಚ್ಚು ಹೆಚ್ಚು ಲಾಭವನ್ನು ರೈತರು ಪಡೆಯುವಂತಾಗಬೇಕು ಎಂದರು.ಮೇಲ್ಕುಂಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಡಿ. ನರಸಿಂಹಮೂರ್ತಿ ಮಾತನಾಡಿ ಕಳೆದ ಹತ್ತು ವರ್ಷಗಳಿಂದ ಹೈನುಗಾರಿಕೆ ಮಾಡುವ ರೈತರಿಗೆ ಹೆಚ್ಚು ಪ್ರೋತ್ಸಾಹ ನೀಡಿ ಶಕ್ತಿ ತುಂಬಿದ ಕಾರಣ ಶಿರಾ ತಾಲೂಕಿನಲ್ಲಿ ಹೈನುಗಾರಿಕೆ ಹೆಚ್ಚಾಗಲು ಕಾರಣವಾಗಿದೆ. ತಾಲೂಕಿನಲ್ಲಿ 130 ಹಾಲು ಉತ್ಪಾದಕರ ಸಂಘಗಳನ್ನು ಸ್ಥಾಪನೆ ಮಾಡಿ ಕ್ಷೀರ ಕ್ರಾಂತಿಯನ್ನೇ ಮಾಡಿದ ನಿಜವಾದ ಭಗೀರಥ ಎಸ್.ಆರ್. ಗೌಡ ಎಂದರು.ಇದೇ ಸಂದರ್ಭದಲ್ಲಿ ನೂತನ ಸಂಘದ ಕಟ್ಟಡ ನಿರ್ಮಾಣಕ್ಕೆ 2.5 ಲಕ್ಷ ರುಪಾಯಿಯ ಚೆಕ್ ವಿತರಣೆ ಹಾಗೂ ಹಸುಗಳ ಇನ್ಶೂರೆನ್ಸ್ ಬಾಂಡ್ ಗಳನ್ನು ರೈತರಿಗೆ ವಿತರಣೆ ಮಾಡಲಾಯಿತು. ಮೇಲ್ಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣ್, ಸದಸ್ಯೆ ಜ್ಯೋತಿ ನರಸಿಂಹಮೂರ್ತಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಾಮಣ್ಣ, ಮಾಜಿ ಅಧ್ಯಕ್ಷ ಎಚ್.ಬಿ.ಹಿ ಮಂತರಾಜು, ಉಪಾಧ್ಯಕ್ಷ ಕೃಷ್ಣಪ್ಪ, ತುಮುಲು ತಾಲೂಕು ವ್ಯವಸ್ಥಾಪಕ ಬಿ. ಗಿರೀಶ್, ವಿಸ್ತರಣಾಧಿಕಾರಿ ಗಳಾದ ಬಿ. ಆರ್ .ಚೈತ್ರ, ಎನ್. ಕಿರಣ್ ಕುಮಾರ್, ಸಮಾಲೋಚಕ ದಯಾನಂದ, ಮುಖಂಡ ಹುಳಿಗೆರೆ ಪ್ರಸನ್ನ ಧಗ್ರಾಯೋದ ಸದಾಶಿವ ಗೌಡ, ಡಾ. ಶ್ರೀಕಾಂತ್, ಪಿ. ಎಂ. ಬಾಬಾ ಫಕ್ರುದ್ದೀನ್, ಶಿವಲಿಂಗರಾಜು, ಗುರುರಾಜು, ಕುಮಾರಸ್ವಾಮಿ, ಸಂಘದ ನಿರ್ದೇಶಕರಾದ ಬಾಲಕೃಷ್ಣಪ್ಪ, ಲುಂಕಣ್ಣ, ರಾಮಚಂದ್ರಪ್ಪ, ರಂಗಸ್ವಾಮಿ, ರಂಗನಾಥ, ಕಾಂತರಾಜು, ಚೇತನ್, ತ್ರಿವೇಣಿ, ಮುಖ್ಯ ಶಿಕ್ಷಕ ನರಸಿಂಹರಾಜು, ಶಿಕ್ಷಕ ರಾಮಣ್ಣ, ಜಯಮ್ಮ ಸೇರಿದಂತೆ ಹಾಲು ಉತ್ಪಾದಕರು ಹಾಜರಿದ್ದರು.