ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು/ಕೆ.ಎಂ.ದೊಡ್ಡಿ
ಕಳೆದ ಒಂದು ವಾರದಿಂದ ಮನ್ಮುಲ್ ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಕೇಳಿ ಬಂದಿರೋದು ಆಶ್ಚರ್ಯ ತಂದಿದೆ ಶಾಸಕ ಕೆ.ಎಂ. ಉದಯ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ದೂರು ಕ್ಷೇತ್ರದ ಜನತೆ ಶಾಸಕನನ್ನಾಗಿ ಮಾಡಿ ಜವಾಬ್ದಾರಿ ನೀಡಿದ್ದಾರೆ. ಪ್ರತಿನಿತ್ಯ ನೂರಾರು ಜನರು ಕ್ಷೇತ್ರದ ಸಮಸ್ಯೆ ಹೊತ್ತು ನನ್ನ ಮನೆ ಬಾಗಿಲಿಗೆ ಬರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸ ಬೇಕಾಗಿರುವುದು ಓರ್ವ ಶಾಸಕನ ಕರ್ತವ್ಯವಾಗಿದೆ ಎಂದರು.
ನನಗೆ ಮನ್ಮುಲ್ ಅಧ್ಯಕ್ಷ ಸ್ಥಾನದ ಮೇಲೆ ಆಸಕ್ತಿ ಇಲ್ಲ. ಇದು ಕೇವಲ ಮಾಧ್ಯಮಗಳ ಸೃಷ್ಟಿ. ಅಧ್ಯಕ್ಷ ಸ್ಥಾನದ ಆಯ್ಕೆಗೆ ಇನ್ನೂ ಕಾಲಾವಕಾಶವಿದೆ. ಈ ಬಗ್ಗೆ ಸರ್ಕಾರ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸುತ್ತದೆ. ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಏಕೆ ತರುತಿದ್ದಾರೆ ಎಂಬುವುದು ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.ಮುಂಬರುವ ಬಜೆಟ್‌ನಲ್ಲಿ ಮದ್ದೂರು ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಳಿ ಹೆಚ್ಚಿನ ಅನುದಾನ ಕೇಳಿದ್ದೇನೆ. ಸೂಳೆಕೆರೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಕೊರಿದ್ದೇನೆ. ಇದಕ್ಕೆ ಸಿಎಂ, ಡಿಸಿಎಂ ಸಕಾರಾತ್ಮಕ ಸ್ಪಂದಿಸಿದ್ದಾರೆ ಎಂದರು.
ಮದ್ದೂರು ಭಾಗದ ನಾಲೆಗಳ ಆಧುನೀಕರಣ, ಕಾಲುವೆಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ಪಡೆಯಲಾಗಿದೆ. ಮದ್ದೂರು ಪಟ್ಟಣದ ಪೇಟೆ ಬೀದಿ ರಸ್ತೆಯನ್ನು ನೂರು ಅಡಿ ರಸ್ತೆಯನ್ನಾಗಿ ನಿರ್ಮಾಣ ಮಾಡಿ ಜನರ ಸುಗಮ ಸಂಚಾರಕ್ಕೆ ಅನುವು ಮಾಡಲು ಕಾರ್ಯ ಯೋಜನೆ ರೂಪಿಸಿದ್ದೇನೆ. ಮದ್ದೂರಿನ ನ್ಯಾಯಾಲಯ ಸಂಕೀರ್ಣ ಕಿರಿದಾಗಿದೆ. ಸುಮಾರು 30 ಕೋಟಿ ವೆಚ್ಚದಲ್ಲಿ ಹೊಸ ನ್ಯಾಯಾಲಯ ನಿರ್ಮಾಣ ಮಾಡಲು ಸರ್ಕಾರಕ್ಕೆ ಕೋರಿದ್ದೇನೆ ಎಂದರು.ಪ್ರತಿನಿತ್ಯ ನೂರಾರು ಜನರು ಕ್ಷೇತ್ರದ ಸಮಸ್ಯೆ ಹೊತ್ತು ನನ್ನ ಮನೆ ಬಾಗಿಲಿಗೆ ಬರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸ ಬೇಕಾಗಿರುವುದು ಓರ್ವ ಶಾಸಕನ ಕರ್ತವ್ಯವಾಗಿದೆ ಎಂದರು.
ಮದ್ದೂರು ಕ್ಷೇತ್ರದ ಕಾಮಗಾರಿಗಳಿಗೆ ಸರ್ಕಾರದ ಮಂಜೂರಾತಿ ಪಡೆಯುವುದು ಹಾಗೂ ಅಗತ್ಯ ಅನುದಾನ ದೊರಕಿಸಿ ಕೊಂಡು ಬರಲು ಸಮಯವೇ ಸಾಕಾಗುತ್ತಿಲ್ಲ, ಜೊತೆಗೆ ನನ್ನ ವೈಯಕ್ತಿಕ ವ್ಯಾಪಾರ, ವ್ಯವಹಾರ ಮತ್ತು ಕುಟುಂಬದ ಕಡೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಇಂತಹ ಸಂದರ್ಭದಲ್ಲಿ ನನ್ನಿಂದ ಮನಮುಲ್ ಅಧ್ಯಕ್ಷರ ಸ್ಥಾನನಿರ್ವಹಿಸಲು ಸಾಧ್ಯವಾಗುವುದಿಲ್ಲ, ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎನ್ನುವುದು ಕೆಲವು ಮಾಧ್ಯಮಗಳ ಸೃಷ್ಟಿ ಎಂದು ಸ್ಪಷ್ಟಪಡಿಸಿದರು.ಈ ವೇಳೆ ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಚೆಲುವರಾಜು, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್. ರಾಜೀವ್, ಮನ್ಮುಲ್ ನಿರ್ದೇಶಕ ಹರೀಶ್, ಭಾರತಿನಗರ ಯುವ ಕಾಂಗ್ರೆಸ್ ಭಾರತೀನಗರ ಘಟಕದ ಅಧ್ಯಕ್ಷ ಪ್ರಜಾಪ್ರಿಯ ವೆಂಕಟೇಶ್, ಮುಖಂಡರಾದ ಪೂಜಾರಿ ಮಹೇಶ್, ಕರಡಕೆರೆ ಮನು, ಅಣ್ಣೂರು ರಾಘವೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.