ಸಂವಿಧಾನ ತಿದ್ದುಪಡಿ ಕುರಿತ ನನ್ನಹೇಳಿಕೆ ತಿರುಚಲಾಗಿದೆ: ಸಂಸದ ಹೆಗಡೆ

| Published : Mar 12 2024, 02:00 AM IST / Updated: Mar 12 2024, 02:01 AM IST

ಸಂವಿಧಾನ ತಿದ್ದುಪಡಿ ಕುರಿತ ನನ್ನಹೇಳಿಕೆ ತಿರುಚಲಾಗಿದೆ: ಸಂಸದ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನ ತಿದ್ದುಪಡಿ ಕುರಿತ ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ಎಂದು ಕೆನರಾ ಸಂಸದ ಅನಂತ ಕುಮಾರ ಹೆಗಡೆ ಆರೋಪಿಸಿದ್ದಾರೆ.

- ಸಿದ್ದರಾಮುಲ್ಲಾ ಖಾನ್ ಸರ್ಕಾರದಲ್ಲಿ ದುಡ್ಡಿಲ್ಲಕನ್ನಡಪ್ರಭ ವಾರ್ತೆ ಅಂಕೋಲಾ

ಸಂವಿಧಾನ ತಿದ್ದುಪಡಿ ಕುರಿತ ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ಎಂದು ಕೆನರಾ ಸಂಸದ ಅನಂತ ಕುಮಾರ ಹೆಗಡೆ ಆರೋಪಿಸಿದ್ದಾರೆ.

ಬಿಜೆಪಿಗೆ 400ಕ್ಕೂ ಹೆಚ್ಚು ಸ್ಥಾನ ಸಿಕ್ಕರೆ ಸಂವಿಧಾನಕ್ಕೆ ತಿದ್ದುಪಡಿ ತಂದು ಕಾಂಗ್ರೆಸ್‌ ಸೇರ್ಪಡೆ ಮಾಡಿರುವ ಬೇಡದ ಅಂಶಗಳನ್ನು ಕಿತ್ತುಹಾಕಬಹುದು ಎಂಬ ತಮ್ಮ ಹೇಳಿಕೆ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಕುರಿತು ತಾಲೂಕಿನ ಹಿಲ್ಲೂರಿನಲ್ಲಿ ನಡೆದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಸೋಮವಾರ ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು, ಪಕ್ಷದ ಕಾರ್ಯಕರ್ತರು ಯಾವುದಕ್ಕೂ ವಿಚಲಿತರಾಗಬಾರದು. ಆನೆ ನಡೆದಿದ್ದೆ ದಾರಿ ಎಂಬಂತೆ ನಡೆಯಬೇಕು ಎಂದರು.

ಸಿದ್ದರಾಮುಲ್ಲಾ ಖಾನ್ ಸರ್ಕಾರದಲ್ಲಿ ದುಡ್ಡಿಲ್ಲ. ಗ್ಯಾರಂಟಿ ಗ್ಯಾರಂಟಿ ಎಂದು ಹೇಳಿ ಒಂದೇ ವರ್ಷದಲ್ಲಿ ರಾಜ್ಯ ದಿವಾಳಿ ಮಾಡಿದ್ದಾರೆ. ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲೂ ಹಿಂದೆ-ಮುಂದೆ ನೋಡುವ ಪರಿಸ್ಥಿತಿ ಈ ಸರ್ಕಾರದ್ದಾಗಿದೆ ಎಂದರು.

ಗ್ರಾಪಂ ಸದಸ್ಯರಿಗೆ ದೊರೆಯುವ ಗೌರವಧನ ಸರಿಯಾಗಿ ತಲುಪುತ್ತಿಲ್ಲ. ಬಿಜೆಪಿ ಸದಸ್ಯರು ಹೋಗಿ ಗಲಾಟೆ ಮಾಡಿದ ನಂತರ ಕೇವಲ ನಾಲ್ಕು ತಿಂಗಳ ಅನುದಾನ ನೀಡಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ಹಣವಿರುತ್ತೆ. ಕಾಂಗ್ರೆಸ್ ಸರ್ಕಾರವಿದ್ದಾಗ ಹಣವಿರುವುದಿಲ್ಲ ಎಂದರು.