ಸಾರಾಂಶ
ಕನ್ನಡ ಪ್ರಭ ವಾರ್ತೆ ಮದ್ದೂರು
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನನ್ನ ಗೆಲುವು ಶತಸಿದ್ಧ ಎಂದು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಸೋಮವಾರ ಹೇಳಿದರು.ಪಟ್ಟಣದ ಮಿನಿ ವಿಧಾನಸೌಧದ ಬಳಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಪರ ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ ಹಾಗೂ ಪಕ್ಷದ ಮುಖಂಡರೊಂದಿಗೆ ಮತಯಾಚನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಪ್ರಭಾವಿತರಾದ ಕ್ಷೇತ್ರದ ಮತದಾರರು ಚುನಾವಣೆಯಲ್ಲಿ ನನ್ನನ್ನು ಸಂಪೂರ್ಣ ಬೆಂಬಲಿಸಿದ್ದಾರೆ. ಹೀಗಾಗಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಜಿಲ್ಲೆಯ ಜನರ ವಿಶ್ವಾಸ ಮತ್ತು ನಂಬಿಕೆಗೆ ಲೋಪವಾಗದಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಗುರಿ ಹೊಂದಿದ್ದೇನೆ ಎಂದರು.
ಜಿಲ್ಲೆಯ ರಸ್ತೆ , ಕುಡಿಯುವ ನೀರು ಹಾಗೂ ಮೂಲ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡುವ ಜೊತೆಗೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಶಾಲಾ ಕಾಲೇಜುಗಳ ಸ್ಥಾಪನೆ, ಮಂಡ್ಯದಲ್ಲಿ ಮುರ್ತುಲ ರಸ್ತೆ ನಿರ್ಮಾಣ ದೊಂದಿಗೆ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಆಶ್ವಾಸನೆ ನೀಡಿದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಭಾರತಿ ನಗರ ಬ್ಲಾಕ್ ಅಧ್ಯಕ್ಷ ಶಿವಲಿಂಗೇಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗೀಗೌಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎ.ಎಸ್.ರಾಮಕೃಷ್ಣ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ನಾಗೇಗೌಡ, ಪುರಸಭೆ ಮಾಜಿ ಅಧ್ಯಕ್ಷ ಎಂ.ಸಿ. ಬಸವರಾಜು, ಸದಸ್ಯ ಸಚಿನ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದರು.
ದಕ್ಷಿಣ ಶಿಕ್ಷಕರ ಕ್ಷೇತ್ರ: ಮಂಡ್ಯ ಜಿಲ್ಲೆಯಲ್ಲಿ ಶೇ.೯೧.೬೦ ಮತದಾನಒಟ್ಟು ಮತದಾರರು ಚಲಾವಣೆಗೊಂಡ ಮತ ಶೇಕಡಾವಾರು ಮತದಾನತಾಲೂಕು ಗಂಡು ಹೆಣ್ಣು ಒಟ್ಟು ಗಂಡು ಹೆಣ್ಣು ಒಟ್ಟು ಗಂಡು ಹೆಣ್ಣು ಒಟ್ಟು
ಕೆ.ಆರ್.ಪೇಟೆ ೩೨೭ ೧೩೭ ೪೬೪ ೩೧೨ ೧೨೭ ೪೩೯ ೯೫.೪೧ ೯೨.೭೦ ೯೪.೬೧ನಾಗಮಂಗಲ ೨೯೬ ೧೪೭ ೪೪೩ ೨೮೩ ೧೪೬ ೪೨೯ ೯೫.೬೧ ೯೯.೩೨ ೯೬.೮೪ಪಾಂಡವಪುರ ೨೬೦ ೧೮೬ ೪೪೬ ೨೫೧ ೧೬೪ ೪೧೫ ೯೬.೫೪ ೮೮.೧೭ ೯೩.೦೫ಮಂಡ್ಯ (ತಾ.ಕಚೇರಿ) ೩೧೧ ೩೧೯ ೬೩೦ ೩೦೬ ೨೮೧ ೫೮೭ ೯೮.೩೯ ೮೮.೦೯ ೯೩.೧೭
ಮಂಡ್ಯ (ತಾ.ಕಚೇರಿ) ೨೬೨ ೨೯೨ ೫೫೪ ೨೩೨ ೨೬೯ ೫೦೧ ೮೮.೫೫ ೯೨.೧೨ ೯೦.೪೩ಮಂಡ್ಯ (ತಾಪಂ) ೪೫೮ ೩೪೩ ೮೦೧ ೪೧೮ ೩೦೨ ೭೨೦ ೯೧.೨೭ ೮೮.೦೫ ೮೯.೮೯ಮದ್ದೂರು ೫೫೪ ೪೧೩ ೯೬೭ ೫೩೨ ೩೭೦ ೯೦೨ ೯೬.೦೩ ೮೯.೫೯ ೯೩.೨೮ಶ್ರೀರಂಗಪಟ್ಟಣ ೨೦೭ ೨೨೪ ೪೩೧ ೧೭೯ ೧೭೬ ೩೫೫ ೮೬.೪೭ ೭೮.೫೭ ೮೨.೩೭
ಮಳವಳ್ಳಿ ೪೫೨ ೨೧೫ ೬೬೭ ೪೧೨ ೧೮೯ ೬೦೧ ೯೧.೧೫ ೮೭.೮೧ ೯೦.೧೦ಒಟ್ಟು ೩೧೨೭ ೨೨೭೬ ೫೪೦೩ ೨೯೨೫ ೨೦೨೪ ೪೯೪೯ ೯೩.೫೪ ೮೮.೯೩ ೯೧.೬೦