ಸಾರಾಂಶ
ನಗರದಲ್ಲಿ ಮಾದಕ ವಸ್ತು ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, 23 ಪ್ರಕರಣಗಳನ್ನು ದಾಖಲಿಸಿದ್ದು. ಈ ವೇಳೆ 43 ಕೆ.ಜಿ. 308 ಗ್ರಾಂ ತೂಕದ ಗಾಂಜಾ ಮತ್ತು 3 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದರು.
ಕನ್ನಡಪ್ರಭ ವಾರ್ತೆ ಮೈಸೂರು
ನಗರ ಪೊಲೀಸರು 23 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 13.15 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ಮಂಗಳವಾರ ನಾಶಪಡಿಸಿದ್ದಾರೆ.ಮೈಸೂರು ತಾಲೂಕಿನ ಗುಜ್ಜೇಗೌಡನಪುರ ಗ್ರಾಮದಲ್ಲಿನ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಎಂಡಿಎಂಎ ಮತ್ತು ಗಾಂಜಾವನ್ನು ನಾಶಪಡಿಸಲಾಯಿತು.
ನಗರದಲ್ಲಿ ಮಾದಕ ವಸ್ತು ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, 23 ಪ್ರಕರಣಗಳನ್ನು ದಾಖಲಿಸಿದ್ದು. ಈ ವೇಳೆ 43 ಕೆ.ಜಿ. 308 ಗ್ರಾಂ ತೂಕದ ಗಾಂಜಾ ಮತ್ತು 3 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದರು.ಮಾದಕ ವಸ್ತು ವಿಲೇವಾರಿ ಸಮಿತಿಯ ಅಧ್ಯಕ್ಷರಾದ ಡಿಸಿಪಿ ಕೆ.ಎಸ್. ಸುಂದರ್ ರಾಜ್, ಸದಸ್ಯ ಕಾರ್ಯದರ್ಶಿ ಮಹಮ್ಮದ್ ಶರೀಫ್ ರಾವೂತರ್, ಇನ್ಸ್ ಪೆಕ್ಟರ್ ಮುಸ್ತಾಕ್ ಪಾಷ ಹಾಗೂ ಸಿಬ್ಬಂದಿ ಇದ್ದರು.