ಸಾರಾಂಶ
13ಎಂವೈಎಸ್ 8- ಮೈಸೂರಿನ ಪುರಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘವು ಪ್ರೊ.ಎಂ.ಡಿ. ನಂಜುಂಡಸ್ವಾಮಿ - 89 ಕಾರ್ಯಕ್ರಮ ಮತ್ತು ಜಿಲ್ಲಾ ರೈತ ಸಮಾವೇಶ ಪಾಲ್ಗೊಂಡಿರುವ ಜನಸ್ತೋಮ.---ಕನ್ನಡಪ್ರಭ ವಾರ್ತೆ ಮೈಸೂರುಕೇಂದ್ರ ಸರ್ಕಾರವು ರೈತ ವಿರೋಧಿ ಕಾಯ್ದೆಯನ್ನು ಮಾರುಕಟ್ಟೆ ನೀತಿಯ ಮೂಲಕ ಜಾರಿಗೊಳಿಸುವ ಹುನ್ನಾರ ನಡೆಸಿದೆ ಎಂದು ರೈತ ಸಂಯುಕ್ತ ಮೋರ್ಚಾದ ರಾಷ್ಟ್ರೀಯ ಸಂಚಾಲಕ ಸುನಿಲಂ ಆರೋಪಿಸಿದರು.ನಗರದ ಪುರಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘವು ಗುರುವಾರ ಏರ್ಪಡಿಸಿದ್ದ ಪ್ರೊ.ಎಂ.ಡಿ. ನಂಜುಂಡಸ್ವಾಮಿ - 89 ಕಾರ್ಯಕ್ರಮ ಮತ್ತು ಜಿಲ್ಲಾ ರೈತ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ಈಗ ಮೂರು ಕೃಷಿ ವಿರೋಧಿ ಕಾಯ್ದೆಗಳು ಪುನರ್ಜನ್ಮ ಪಡೆದಿವೆ. ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಯನ್ನು ಹಿಂದಕ್ಕೆ ಪಡೆದಿದೆ. ಆದರೆ ರೈತ ಮಾರುಕಟ್ಟೆ ನೀತಿಯ ಮೂಲಕ ಜಾರಿಗೊಳಿಸುತ್ತಿದೆ. ಕೃಷಿ ವ್ಯಾಪಾರವನ್ನು ಬಂಡವಾಳಶಾಹಿಗಳಿಗೆ ಒಪ್ಪಿಸುವ ಕೆಲಸ ನಡೆದಿದೆ. ಈಗ ರೈತ ವಿರೋಧಿ ನೀತಿಯನ್ನು ಜಾರಿಗೊಳಿಸದಂತೆ ಒತ್ತಡ ಹೇರಬೇಕಾದ ಸ್ಥಿತಿ ಇದೆ ಎಂದರು.ಕಿಸಾನ್ ಮೋರ್ಚಾ ಎಲ್ಲಾ ರಾಜ್ಯಗಳ ವಿಧಾನಸಭೆ ಎದುರು 20 ದಿನಗಳ ಪ್ರತಿಭಟನೆ ನಡೆಸಲಿದೆ. ಕೇವಲ ವಿಧಾನಸಭೆಯಷ್ಟೇ ಅಲ್ಲ. ಗ್ರಾಪಂ ಮಟ್ಟದಿಂದ ಹೋರಾಟ ನಡೆಸಲಿದೆ. ಈ ಕಾಯ್ದೆಗಳು ರಾಜ್ಯದಲ್ಲಿ ಇನ್ನೂ ಜಾರಿಯಲ್ಲಿದೆ. ಪಂಜಾಬ್ ಹಾಗೂ ಕೇರಳ ಸರ್ಕಾರಗಳು ರೈತ ವಿರೋಧಿ ಕಾನೂನನ್ನು ವಿರೋಧಿಸಿವೆ. ರಾಜ್ಯ ಸರ್ಕಾರವು ಹಿಂದಕ್ಕೆ ಪಡೆಯುವುದು ಯಾವಾಗ ಎಂದು ಅವರು ಪ್ರಶ್ನಿಸಿದರು.ಎಪಿಎಂಸಿಯು ಮಂಡಿ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ನಿರ್ನಾಮ ಮಾಡಲಿದೆ. ಎಂ.ಎಸ್.ಪಿ ಕೇವಲ ರೈತರಿಗೆ ಮಾತ್ರವಲ್ಲ, ದೇಶದ ಆಹಾರ ಭದ್ರತೆಗೆ ಸಂಬಂಧಿಸಿದೆ. ಸಂಘ ಪರಿವಾರ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ರೈತ ವಿರೋಧಿ ನೀತಿಗಳ ವಿರುದ್ಧ ರೈತರು ಸಂಘಟನಾತ್ಮಕವಾಗಿ ಹೋರಾಟ ನಡೆಸಬೇಕಿದೆ. ಕೃಷಿ ಭೂಮಿ ಆಕ್ರಮಣ ನಡೆದಿದೆ. ಬೃಹತ್ ಬೆಂಗಳೂರು ಯೋಜನೆಗೆ 18 ಸಾವಿರ ಎಕರೆ ಭೂಮಿಯನ್ನು ರೈತರು ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದರು.ಕೃಷಿ ವಿಜ್ಞಾನಿ ಪ್ರಕಾಶ್ ಕಮ್ಮರಡಿ ಮಾತನಾಡಿ, ಕೃಷಿ ಬೆಳೆಗೆ ಬೆಂಬಲ ಬೆಲೆ ನೀಡಬೇಕು. ಅದು ಸರ್ಕಾರಕ್ಕೆ ಅದು ಹೊರೆಯಲ್ಲ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬೇಕು. ಹೀಗಾಗಿ, ರೈತ ಸಂಘಟನೆಗಳು ಚಾಣಕ್ಯ ನಡೆ ಅನುಸರಿಸಬೇಕು. ಒಗ್ಗಟ್ಟಾಗಬೇಕು ಎಂದರು.ಆಂತರಿಕ ಪ್ರಜಾಪ್ರಭುತ್ವ ಹಾಗೂ ಹಣಕಾಸಿನ ಶಿಸ್ತು ರೈತ ಸಂಘದಲ್ಲಿ ಬರಬೇಕು. ಮಹಿಳೆಯರು ಹಾಗೂ ಯುವಕರನ್ನು ಹೆಚ್ಚು ಒಳಗೊಳ್ಳಬೇಕು. ಅಧ್ಯಯನ ಶಿಬಿರವನ್ನು ನಿರಂತರವಾಗಿ ಹಳ್ಳಿ– ಹಳ್ಳಿಗಳಲ್ಲಿ ನಡೆಸಬೇಕು ಎಂದು ಅವರು ಪ್ರತಿಪಾದಿಸಿದರು.ಹೊಸತನದೊಂದಿಗೆ ಹಳ್ಳಿ– ಹಳ್ಳಿಗಳಿಗೆ ರೈತ ಸಂಘ ಕಿರು ಹೊತ್ತಿಗೆಯನ್ನು ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಬಿಡುಗಡೆಗೊಳಿಸಿದರು. ಸಂಘದ ಸಂವಿಧಾನದ ಕೃತಿಯನ್ನು ಎ.ಎಂ. ಮಹೇಶ್ ಪ್ರಭು ಬಿಡುಗಡೆಗೊಳಿಸಿದರು. ಉಪಾಧ್ಯಕ್ಷ ಎ.ಎಲ್. ಕೆಂಪೂಗೌಡ ಸಂಘದ ಹೊಸ ಮಾದರಿ ಬೋರ್ಡ್ ಅನಾವರಣಗೊಳಿಸಿದರು.ಖೋ ಖೋ ವಿಶ್ವಕಪ್ ವಿಜೇತ ಮಹಿಳಾ ತಂಡದ ಆಟಗಾರ್ತಿ ಬಿ. ಚೈತ್ರಾ ಅವರನ್ನು ಸನ್ಮಾನಿಸಲಾಯಿತು.ಸರ್ವೋದಯ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲೀ ಪಾಟೀಲ, ಅಧ್ಯಕ್ಷ ಬಡಗಲಪುರ ನಾಗೇಂದ್ರ, ಉಪಾಧ್ಯಕ್ಷೆ ಮಂಜುಳಾ ಅಕ್ಕಿ, ಪ್ರಧಾನ ಕಾರ್ಯದರ್ಶಿ ಎನ್.ಡಿ. ವಸಂತಕುಮಾರ್, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಮರಂಕಯ್ಯ, ಜಾಗೃತ ಕರ್ನಾಟಕದ ವಾಸು, ವಿವಿಧ ಸಂಘಟನೆಗಳ ಮುಖಂಡರಾದ ಗುರುಪ್ರಸಾದ್ ಕೆರಗೋಡು, ಉಗ್ರ ನರಸಿಂಹೇಗೌಡ, ಬೆಟ್ಟಯ್ಯ ಕೋಟೆ, ಅಹಿಂದ ಜವರಪ್ಪ, ಪುರುಷೋತ್ತಮ್, ನೂರ್ ಶ್ರೀಧರ್, ಯದುಶೈಲ ಸಂಪತ್ ಇದ್ದರು.----------------eom/mys/dnm/