ಬಸವ ತತ್ತ್ವ, ಶರಣ ಸಂಸ್ಕೃತಿ ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಎಂ. ಚಂದ್ರಶೇಖರ್ ಅವರು ಸಲ್ಲಿಸಿರುವ ಮಹತ್ವದ ಸೇವೆಯನ್ನು ಪರಿಗಣಿಸಿ ಅವರಿಗೆ ಈ ಜವಾಬ್ದಾರಿ
ಕನ್ನಡಪ್ರಭ ವಾರ್ತೆ ಮೈಸೂರುಬಸವ ಬಳಗಗಳ ಒಕ್ಕೂಟದ ವತಿಯಿಂದ 2026ನೇ ಸಾಲಿನ ಬಸವ ಜಯಂತಿ ಆಚರಣೆಯ ಅಧ್ಯಕ್ಷರಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಎಂ. ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲಾಗಿದೆ.ಸುತ್ತೂರು ಮಠದಲ್ಲಿ ನಡೆದ ಸಭೆಯಲ್ಲಿ ಮೈಸೂರು ಜಿಲ್ಲಾ ವೀರಶೈವ–ಶೈವ–ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳು ಹಾಗೂ ಸಮನ್ವಯ ಸಮಿತಿಯ ಸದಸ್ಯರು ಸರ್ವಾನುಮತದಿಂದ ಈ ನಿರ್ಣಯ ಕೈಗೊಂಡರು.ಬಸವ ತತ್ತ್ವ, ಶರಣ ಸಂಸ್ಕೃತಿ ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಎಂ. ಚಂದ್ರಶೇಖರ್ ಅವರು ಸಲ್ಲಿಸಿರುವ ಮಹತ್ವದ ಸೇವೆಯನ್ನು ಪರಿಗಣಿಸಿ ಅವರಿಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ.ವೀರಶೈವ ಲಿಂಗಾಯತ ಮಹಾಸಭಾ ಅದ್ಯಕ್ಷ ಎಚ್.ವಿ. ಬಸವರಾಜು, ನಿಕಟ ಪೂರ್ವ ಅದ್ಯಕ್ಷ ಬಿ.ಕೆ. ನಾಗರಾಜು, ಮಾಜಿ ಅದ್ಯಕ್ಷರಾದ ಕೆ.ಎನ್. ಪುಟ್ಟಬುದ್ದಿ. ಕಾನ್ಯ ಶಿವಮೂರ್ತಿ, ದಕ್ಷಿಣಾ ಮೂರ್ತಿ, ಜಯಣ್ಣ, ಮೂಗೂರು ನಂಜಂಡಸ್ವಾಮಿ, ಕೆ.ಕೆ. ಖಂಡೇಶ್, ಟಿ. ಲಿಂಗರಾಜು, ಪ್ರದೀಪ್ ಕುಮಾರ್, ಸಿ. ಗುರುಸ್ವಾಮಿ, ದೂರ ಶಿವಕುಮಾರ್ ಪ್ರಸಾದ್ ಬಾಬು, ಜಿಲ್ಲಾ ನಿರ್ದೇಶಕ ದಾರಿಪುರ ಡಿ. ಚಂದ್ರಶೇಖರ್, ರೇಚಣ್ಣ, ದನ್ಯ ಸತ್ಯೇಂದ್ರ ಮೂರ್ತಿ, ಶಿವಸ್ವಾಮಿ, ಸಂಘಟನೆಯ ಪದಾಧಿಕಾರಿಗಳು ಇದ್ದರು.
ಸಭೆಯಲ್ಲಿ ಮುಖಂಡರು ಮಾತನಾಡಿ, 2026ರ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ, ಸಮನ್ವಯ ಹಾಗೂ ಸಮಾಜಮುಖಿ ಚಿಂತನೆಯೊಂದಿಗೆ ಆಚರಿಸಲು ಎಲ್ಲ ಬಸವ ಬಳಗಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಎಂ. ಚಂದ್ರಶೇಖರ್ ಅವರ ನೇತೃತ್ವದಲ್ಲಿ ಬಸವ ಜಯಂತಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.