ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಪೂರಕವಾಗಿ ಅಭಿವೃದ್ಧಿಪಡಿಸಿರುವ ಅಶೋಕಪುರಂ ರೈಲ್ವೆ ನಿಲ್ದಾಣದವರೆಗೆ ರೈಲುಗಳ ವಿಸ್ತರಣೆ ಮತ್ತು ಅಶೋಕಪುರಂ ರೈಲ್ವೆ ನಿಲ್ದಾಣದ 2ನೇ ಪ್ರವೇಶ ದ್ವಾರದ ಹೊಸ ಟಿಕೆಟ್ ಬುಕ್ಕಿಂಗ್ ಕೇಂದ್ರವನ್ನು ಶನಿವಾರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಉದ್ಘಾಟಿಸಿದರು.ಅಶೋಕಪುರಂ ರೈಲ್ವೆ ನಿಲ್ದಾಾಣದಲ್ಲಿ ಮೈಸೂರು ಬೆಂಗಳೂರು ಮೆಮೊ ರೈಲುಗಾಡಿಗೆ ಹಸಿರು ನಿಶಾನೆ ತೋರಿದರು. ಎರಡು ಜೋಡಿ ಮೆಮು ರೈಲುಗಳು ಭಾನುವಾರದಿಂದ ಸೇವೆ ಆರಂಭಿಸಲಿದೆ. ಬೆಂಗಳೂರಿನ ದೈನಂದಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಅಶೋಕಪುರಂ ರೈಲು ನಿಲ್ದಾಣದಲ್ಲಿ ಆರು ಪ್ಲಾಟ್ ಫಾರಂ, ಬುಕ್ಕಿಂಗ್ ಕಚೇರಿಯೊಂದಿಗೆ ಹೊಸ ನಿಲ್ದಾಣದ ಕಟ್ಟಡ, ಪ್ರವೇಶ 1, ಪ್ರವೇಶ 2ರ ಪ್ಲಾಟ್ ಫಾರ್ಮ್ ಗಳಿಗೆ ಪಾದಚಾರಿ ಮೇಲ್ಸುತುವೆ ನಿರ್ಮಿಸಿ, ವಿಸ್ತೃತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು.ನವೀಕೃತ ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿ 11 ಪ್ಲಾಟ್ ಫಾರ್ಮ್ ಇರುವುದರಿಂದ ಮೈಸೂರಿನ ಕೇಂದ್ರ ರೈಲ್ವೆ ನಿಲ್ದಾಣದ ಒತ್ತಡ ಕಡಿಮೆ ಆಗಲಿದೆ. ಪ್ರಯಾಣಿಕರ ದಟ್ಟಣೆ ನಿವಾರಿಸುವ ಪರ್ಯಾಯ ನಿಲ್ದಾಣವಾಗಿ ಮಾರ್ಪಟ್ಟಾಗಿದೆ. ಬೆಂಗಳೂರಿನಿಂದ ಬರುವ ರೈಲುಗಳ ಸೇವೆ ವಿಸ್ತರಣೆ ಆಗಲಿದ್ದು, 4, 5, 6ನೇ ಪ್ಲಾಟ್ ಫಾರ್ಮ್ ಪೂರ್ಣ ಪ್ರಮಾಣದ ಮೇಲ್ಛಾವಣಿಯೊಂದಿಗೆ ಪ್ರಯಾಣಿಕರಿಗೆ ಸುರಕ್ಷತೆ ನೀಡುತ್ತದೆ.
ಚೆನ್ನೈ-ಮೈಸೂರು ಕಾವೇರಿ ಎಕ್ಸ್ ಪ್ರೆಸ್, ಮೈಸೂರು- ಬೆಂಗಳೂರು ಮಾಲ್ಗುಡಿ ಎಕ್ಸ ಪ್ರೆಸ್, ಕಾಚಿಗುಡ- ಮೈಸೂರು ಎಕ್ಸಪ್ರೆಸ್, ಚೆನ್ನೈ ಸೆಂಟ್ರಲ್ ಮೈಸೂರು ಎಕ್ಸಪ್ರೆಸ್, ಬೆಂಗಳೂರು ಮೈಸೂರು ನಾಲ್ಕು ಮೆಮು ರೈಲುಗಾಡಿಗಳು ಭಾನುವಾರದಿಂದ ತಮ್ಮ ಸೇವೆಯನ್ನು ಅಶೋಕಪುರಂ ರೈಲ್ವೆ ನಿಲ್ದಾಣದಿಂದ ಆರಂಭಿಸಲಿವೆ.ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, 2025-26ನೇ ಸಾಲಿನ ಕೇಂದ್ರ ಆಯವ್ಯಯವು ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಜನರಿಗೆ ಅನುಕೂಲ ಕಲ್ಪಿಸಿದೆ. ರೈಲ್ವೆ ಸೇವೆ ವಿಸ್ತರಣೆ, ಪ್ರಾಚೀನ ಗ್ರಂಥಗಳ ಡಿಜಿಟಲೀಕರಣ, ಮೈಸೂರು- ಕುಶಾಲನಗರ ಚತುಷ್ಪಥ ಕಾಮಗಾರಿ, ಉಡಾನ್ ಯೋಜನೆಯಡಿ ವಿಮಾನ ಸೇವೆ, ಆಟಿಕೆ ತಯಾರಿಸುವ ಬೃಹತ್ ಕಂಪನಿ ಸ್ಥಾಪನೆ, ಹೋಂ ಸ್ಟೇಗೆ ಮುದ್ರಾ ಸಾಲ ಸೌಲಭ್ಯ, 50 ಪ್ರವಾಸಿ ತಾಣಗಳ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಅಶೋಕಪುರಂನಿಂದ ಹೆಚ್ಚಿನ ರೈಲ್ವೆ ಸೇವೆ ದೊರಕಬೇಕು ಎಂಬ ಪ್ರಯಾಣಿಕರ ಬಹುದಿನಗಳ ಬೇಡಿಕೆ ಈಡೇರಿದೆ. ಮೈಸೂರು ಕೇಂದ್ರದ ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಆಗಲಿದೆ. ರೈಲುಗಳ ವೇಳಾಪಟ್ಟಿ ಅನುಸಾರ ಬಸ್ ಸೌಲಭ್ಯ ಕಲ್ಪಿಸುವುದಾಗಿ ಅವರು ನುಡಿದರು.ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ಕೆ. ವಿವೇಕಾನಂದ, ಮೈಸೂರು ರೈಲ್ವೆಯ ವಿಭಾಗೀಯ ವ್ಯವಸ್ಥಾಪಕ ನಿರ್ದೇಶಕಿ ಶಿಲ್ಪಿ ಅಗರ್ವಾಲ್ ಇದ್ದರು.
ರೈಲ್ವೆ ಅಪಘಾತ ತಪ್ಪಿಸಲು ಕವಚ್ ಟೆಕ್ನಾಲಜಿಕನ್ನಡಪ್ರಭ ವಾರ್ತೆ ಮೈಸೂರು
ರೈಲ್ವೆ ಅಪಘಾತ ತಪ್ಪಿಸಲು ಕವಚ್ ತಂತ್ರಜ್ಞಾನವನ್ನು ರಾಜ್ಯದಲ್ಲಿ ತರಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.ರಾಜ್ಯದ 1,632 ಕಿ.ಮೀ.ಗಳಲ್ಲಿ 1,048 ಕೋಟಿ ರೂ. ವೆಚ್ಚದಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ವಂದೇ ಭಾರತ್ ರೈಲ್ವೆ ಸೇವೆ ವಿಸ್ತರಣೆ ಆಗುತ್ತಿದೆ. 10 ಸಾವಿರ ಸಾಮಾನ್ಯ ಬೋಗಿಗಳ ಅಳವಡಿಕೆ ಮಾಡಲಾಗುವುದು. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ರೈಲ್ವೆ ಸೇವೆ ನೀಡುತ್ತೇವೆ ಎಂದರು.
10 ಸಾವಿರ ಸಾಮಾನ್ಯ ಬೋಗಿಗಳ ಅಳವಡಿಕೆ ಮಾಡಲಾಗುವುದು. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ರೈಲ್ವೆ ಸೇವೆ ನೀಡುತ್ತೇವೆ. 45 ಕೋಟಿ ರು. ವೆಚ್ಚದಲ್ಲಿ ಅಶೋಕಪುರಂ ರೈಲ್ವೆ ನಿಲ್ದಾಣವನ್ನು ಉನ್ನತೀಕರಿಸಲಾಗಿದೆ ಎಂದು ಅವರು ವಿವರಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಗಳಿಗೆ ಉತ್ತರ ಕೊಡುತ್ತೇನೆ. ಅವರು ಅಂಕಿ ಸಂಖ್ಯೆಯನ್ನು ಸರಿಯಾಗಿ ಗಮನಿಸಬೇಕು. ದೂರದೃಷ್ಟಿಯಿಂದ ಬಜೆಟ್ ಅಧ್ಯಯನ ಮಾಡಬೇಕು. ಜಲಜೀವನ್ ಮಿಷನ್ ಅನುದಾನದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲು ಸಿದ್ಧನಿದ್ದೇನೆ. 16ನೇ ಬಜೆಟ್ ಮಂಡಿಸಲಿರುವ ಅವರ ಬಾಯಿಯಿಂದ ಸುಳ್ಳು ಬರುವುದು ಒಳ್ಳೇಯದಲ್ಲ ಎಂದು ಪ್ರತಿಕ್ರಿಯಿಸಿದರು.