ಜನಸಮುದಾಯ ಉತ್ಸಾಹ ಕಳೆದುಕೊಳ್ಳುತ್ತಿದೆ

| Published : Mar 13 2025, 12:47 AM IST

ಸಾರಾಂಶ

ಟಿವಿ, ಮೊಬೈಲ್ ನಿಂದ ಇಂದಿನ ಸಂತತಿ ಹಾಳಾಗುತ್ತಿದೆ. ಯುವಕರು ಸಾಮಾಜಿಕ ಜಾಲತಾಣದಿಂದ ಹೊರ ಬರಬೇಕು.

ಕನ್ನಡಪ್ರಭ ವಾರ್ತೆ ಮೈಸೂರುಇಂದಿನ ಯುವಜನತೆ ಹಾಗೂ ಒಟ್ಟು ಜನಸಮುದಾಯವೇ ನಾನಾ ಕಾರಣಗಳಿಂದ ಉತ್ಸಾಹ ಕಳೆದುಕೊಳ್ಳುತ್ತಿದ್ದೆ ಎಂದು ಕೆ.ಆರ್‌. ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ. ಮೈಸೂರು ಕೃಷ್ಣಮೂರ್ತಿ ಹೇಳಿದರು.ನಗರದ ಪಡುವಾರಹಳ್ಳಿಯ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸಾಂಸ್ಕೃತಿಕ ವೇದಿಕೆ - 2024-25 ಜಾನಪದ ಉತ್ಸವ 2025 ಪ್ರಾದೇಶಿಕ ಮಟ್ಟದ ಜಾನಪದ ನೃತ್ಯ ಹಾಗೂ ಗಾಯನ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.ಟಿವಿ, ಮೊಬೈಲ್ ನಿಂದ ಇಂದಿನ ಸಂತತಿ ಹಾಳಾಗುತ್ತಿದೆ. ಯುವಕರು ಸಾಮಾಜಿಕ ಜಾಲತಾಣದಿಂದ ಹೊರ ಬರಬೇಕು. ಕೇವಲ ಸ್ಪರ್ಧೆ, ಬಹುಮಾನ ಅಲ್ಲದೆ ಸಾಂಸ್ಕೃತಿಕ ಆಯಾಮವೇ ಇದೆ. ನಮ್ಮ ಜನಪದವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಪ್ರಸ್ತುತ ಜಗತ್ತು ಬೆಳಕಿನೆಡೆಗೆ ಹೋಗುತ್ತಿಲ್ಲ. ಕತ್ತಲೆಡೆಗೆ ಹೋಗುತ್ತಿದೆ. ಎಲ್ಲಾ ಪದವಿಗಳಿಗಿಂತ ನಿಮ್ಮ ಹೊಣೆಗಾರಿಕೆ ದುರಂತಮುಂವಾಗುತ್ತಿದ್ದು ಅದನ್ನು ಸರಿಪಡಿಸುವೆಡೆಗೆ ಹೋಗಬೇಕಿದೆ. ಜನಪದ ಕವಿಗಳು, ಗಾಯಕರು ಜೀವನ ಎಂಬ ವಿಶ್ವವಿದ್ಯಾನಿಲಯದಿಂದ ನಾಡಿನ ಜನರಿಗೆ ಉಚಿತವಾಗಿ ನೀಡುತ್ತಿದ್ದಾರೆ ಎಂದರು.ಸಂಗೀತಕ್ಕೆ ಮೂಲ ಬೇರು ಜನಪದ. ಈ ಕಲೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಗುರುತರ ಜವಾಬ್ದಾರಿ ನಮ್ಮೆ ಮೇಲಿದೆ. ಅವುಗಳ ಉಳಿವು ತಳ ಸಮುದಾಯದವರಿಂದ ಮಾತ್ರ ಸಾಧ್ಯ. ದುರಂಕಾರ ಬಿಟ್ಟು ಜನಪದಕ್ಕೆ ಒಲವು ತೋರಿಸಿದರೆ ಅಪ್ಪಟ ಒಳ್ಳೆಯ ಮನುಷ್ಯನಾಗಿ ಮಾಡುವ ಜೊತೆಗೆ ಋಷಿಸದೃತ್ವ ಮನಸ್ಸು ಮೂಡುತ್ತಾ ಜೀವನ ಸುಗಮವಾಗಿ ಸಿಗುತ್ತದೆ. ನಮ್ಮ ಪೂರ್ವಜರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ಸಾಗಬೇಕಿದೆ ಎಂದರು.ತತ್ತ್ವಪದ, ಸುಗ್ಗಿ ಹಾಡು, ಗೀಗೀ ಪದ ಸೇರಿ ಅನೇಕ ಕಲೆಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿವೆ. ಅವುಗಳನ್ನು ಉಳಿಸಿ ಪ್ರೋತ್ಸಾಹಿಸಬೇಕಿದೆ. ಜನಪದ ಉತ್ಸವದ ವಿವಿಧ ಕಾರ್ಯಕ್ರಮ ನಮ್ಮನ್ನು ನಿಜವಾದ ಅಪ್ಪಟ ಮನುಷ್ಯನನ್ನು ಹುಡುಕಿಕೊಡುತ್ತದೆ. ನಮ್ಮ ಒಳಗೆ ಬುದ್ದ, ಬಸವ, ಅಂಬೇಡ್ಕರ್ ಅವರನ್ನು ರೂಪಿಸಿಕೊಳ್ಳುತ್ತಾ ಜನಪದ ಕಲೆಯ ಕಡೆಗೆ ಹೆಚ್ಚಿನ ಆಸಕ್ತಿ ತೋರಬೇಕಿದೆ ಎಂದು ಅವರು ಹೇಳಿದರು.ವೇದಿಕೆ ಮೇಲೆ ಕಂಸಾಳೆ, ಗೊರವರ ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ, ಗಾರುಡಿ ಗೊಂಬೆ, ವೀರಭದ್ರ ಕುಣಿತ, ಮಾರಿ ಕುಣಿತ, ಕೋಲಾಟ, ಕಂಸಾಳೆ, ಬುಡ ಕಟ್ಟು, ಸೋದೆದಿಮ್ಮಿ ನೃತ್ಯ ಗಳು ವಿಶೇಷ ಗಮನ ಸೆಳೆಯಿತು.ಪ್ರಾಂಶುಪಾಲ ಪ್ರೊ. ಸೋಮಣ್ಣ ಮಾತನಾಡಿ, ಸಂಗೀತವು ಕಾರ್ಯಕ್ಷಮತೆ, ಆರೋಗ್ಯ, ನೆಮ್ಮದಿ, ಯೋಗಕ್ಷೇಮ, ಏಕಾಗ್ರತೆ ಮತ್ತು ಬೌದ್ಧಿಕ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಅಪಾರ ಶಾಂತಿ ನೀಡುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಂಗೀತವನ್ನು ಮೈಗೂಡಿಸಿಕೊಂಡು ಸಂಸ್ಕಾರವಂತರಾಗಬೇಕು ಎಂದು ಸಲಹೆ ನೀಡಿದರು.ಜಾನಪದ ಅಕಾಡೆಮಿ ಸದಸ್ಯ ಆರ್. ದೇವಾನಂದ ಪ್ರಸಾದ್, ಗಾಯಕರಾದ ಮಹೇಂದ್ರ, ಮೈಸೂರು ಮಹಾಲಿಂಗು, ಪುರುಷೋತ್ತಮ್, ಐ.ಸಿ.ಐ.ಸಿ.ಐ ಸಂಚಾಲಕ ಮುತ್ತುರಾಜ್, ರೇಣುಕಾ, ದಿವ್ಯಾ. ಸಚ್ಚಿದಾನಂದ ಇದ್ದರು.