ಭಾರತದ ಪುರಾತನವಾದಂತಹ ಆರೋಗ್ಯ ಕ್ರಮವೇ ಯೋಗ

| Published : Jun 22 2025, 01:19 AM IST

ಭಾರತದ ಪುರಾತನವಾದಂತಹ ಆರೋಗ್ಯ ಕ್ರಮವೇ ಯೋಗ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ನಿತ್ಯ ಮನುಷ್ಯ ಯೋಗ ಮಾಡುವುದರಿಂದ ಉತ್ತಮವಾದ ಆರೋಗ್ಯಕರ ಜೀವನ ನಡೆಸಬಹುದು

ಕನ್ನಡಪ್ರಭ ವಾರ್ತೆ ಮೈಸೂರುಪ್ರಾಚೀನ ಭಾರತದ ಆರೋಗ್ಯವಾದಂತಹ ಹವ್ಯಾಸ ಮತ್ತು ಅಭ್ಯಾಸಗಳಲ್ಲಿ ಯೋಗ ಕೂಡ ಒಂದಾಗಿದ್ದು ಭಾರತದ ಪುರಾತನವಾದ ಆರೋಗ್ಯ ಕ್ರಮವೇ ಯೋಗ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮೈಸೂರು ಆಯುಷ್ ಇಲಾಖೆ ವತಿಯಿಂದ ಮೈಸೂರು ಅರಮನೆ ಆವರಣದಲ್ಲಿ ಆಯೋಜಿಸಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಯೋಗ ಎಂಬುದು ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸಗಳಲ್ಲಿ ಒಂದಾಗಿರುವುದರಿoದ ದೈಹಿಕ ಮತ್ತು ಭಾವನೆಗಳ ಸಮತೋಲನ ನಿಯಂತ್ರಣಗಳ ಬಗ್ಗೆ ಜನ ಜಾಗೃತಿ ಮಾಡಿಕೊಟ್ಟಿದೆ. ಪ್ರತಿ ನಿತ್ಯ ಮನುಷ್ಯ ಯೋಗ ಮಾಡುವುದರಿಂದ ಉತ್ತಮವಾದ ಆರೋಗ್ಯಕರ ಜೀವನ ನಡೆಸಬಹುದು ಎಂದು ಅವರು ತಿಳಿಸಿದರು.ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ 4 ನಿಮಿಷಗಳ ಕಾಲ ಚಲನಕ್ರಿಯೆ, 25 ನಿಮಿಷಗಳ ಕಾಲ ಯೋಗಾಸನ, 14 ನಿಮಿಷಗಳ ಕಾಲ ಪ್ರಾಣಾಯಾಮ, ಧ್ಯಾನ ಮತ್ತು ಸಂಕಲ್ಪ ಮಾಡಲಾಯಿತು. 15 ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು, ವಿದ್ಯಾರ್ಥಿಗಳು ಈ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್. ಶ್ರೀವತ್ಸ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಯುಕೇಶ್ ಕುಮಾರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಎಡಿಸಿ ಡಾ.ಪಿ. ಶಿವರಾಜು, ಆಯುಷ್ ಇಲಾಖೆ ಅಧಿಕಾರಿ ಡಾ. ರೇಣುಕಾ ದೇವಿ ಮೊದಲಾದವರು ಇದ್ದರು.