ಗುಣಮಟ್ಟದ ತಾಂತ್ರಿಕ ಶಿಕ್ಷಣ ಅಗತ್ಯ. ನಿಪುಣ ಎಂಜಿನಿಯರ್ ರೂಪಿಸುವಲ್ಲಿ ಟ್ರಸ್ಟ್ ನ ಬದ್ಧತೆ ದೊಡ್ಡದು.
ಕನ್ನಡಪ್ರಭ ವಾರ್ತೆ ಮೈಸೂರುಶೇಷಾದ್ರಿಪುರಂ ಎಜುಕೇಶನಲ್ ಟ್ರಸ್ಟ್ ಅಡಿ ಸ್ಥಾಪಿತವಾದ ಮೈಸೂರು ಶೇಷಾದ್ರಿಪುರಂ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನೂತನ ಕಟ್ಟಡವನ್ನು ಸೋಮವಾರ ನಗರದ ಕಡಕೋಳ ಕೈಗಾರಿಕಾ ಪ್ರದೇಶದಲ್ಲಿ ಉದ್ಘಾಟಿಸಲಾಯಿತು.ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಸುತ್ತೂರು ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದಜಿ, ವಿಟಿಯು ಕುಲಪತಿ ಡಾ.ಎಸ್. ವಿದ್ಯಾಶಂಕರ್ ಪಾಲ್ಗೊಂಡಿದ್ದರು.ಎಸ್‌ಇಟಿ ಗೌರವ ಕಾರ್ಯದರ್ಶಿ ನಾಡೋಜ ವೂಡೆ ಪಿ. ಕೃಷ್ಣ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಗುಣಮಟ್ಟದ ತಾಂತ್ರಿಕ ಶಿಕ್ಷಣ ಅಗತ್ಯ. ನಿಪುಣ ಎಂಜಿನಿಯರ್ ರೂಪಿಸುವಲ್ಲಿ ಟ್ರಸ್ಟ್ ನ ಬದ್ಧತೆ ದೊಡ್ಡದು. 1944ರಲ್ಲಿ ಸ್ಥಾಪಿತವಾದ ಟ್ರಸ್ಟ್ ಪ್ರಸ್ತುತ ಕರ್ನಾಟಕದಾದ್ಯಂತ 34 ಸಂಸ್ಥೆಗಳನ್ನು ನಿರ್ವಹಿಸುತ್ತಿದ್ದು, ಸುಮಾರು 1,500 ಅಧ್ಯಾಪಕರು ಹಾಗೂ 26,000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ ಎಂದುತಿಳಿಸಿದರು.ಡಾ. ವಿದ್ಯಾಶಂಕರ್ ಮಾತನಾಡಿ, ರಾಜ್ಯ ಮತ್ತು ವಿಶ್ವವಿದ್ಯಾಲಯದ ಗುಣಮಟ್ಟದ ತಾಂತ್ರಿಕ ಶಿಕ್ಷಣದ ಪಾತ್ರ ಹಿರಿದು, ಇಂಟರ್ನ್ ಶಿಪ್ ಗಳು, ಕೈಗಾರಿಕಾ ಸಹಭಾಗಿತ್ವ ಹಾಗೂ ನವೀನ ಅಧ್ಯಯನ ವಿಧಾನಗಳ ಮಹತ್ವ ವಿವರಿಸಿದರು.ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿನ್ಯಾಸ ಆಲೋಚನೆ ಅಗತ್ಯವಿದೆ. ಎಐ ಎಲ್ಲಾ ಶಾಖೆಗಳಲ್ಲೂ ಅನ್ವಯಿಸಬಹುದು. ವಿದ್ಯಾರ್ಥಿಗಳು ವಿಷಯ ಆಯ್ಕೆಯಲ್ಲಿ ಒತ್ತಡಕ್ಕೆ ಒಳಗಾಗಬಾರದು. ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಮತ್ತು ಸಿವಿಲ್ ಶಾಖೆಗಳ ಭವಿಷ್ಯದ ಕುರಿತು ತಿಳಿಸಿಕೊಟ್ಟರು.ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಎನ್.ಆರ್. ಪಂಡಿತ್ ಆರಾಧ್ಯ ಅವರು ಸ್ವಯಂ ಉದ್ಯೋಗದ ಮಹತ್ವ ಅಗತ್ಯ. ವಿದ್ಯಾರ್ಥಿಗಳು ತಂತ್ರಜ್ಞಾನದ ಜೊತೆಗೆ ಸಂಸ್ಕೃತಿಯನ್ನೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ವಿದ್ಯಾರ್ಥಿಗಳ ಕಲಿಕೆ ಉತ್ತಮಗೊಳಿಸಲು ಹೊಸ ಬೋಧನಾ ವಿಧಾನ ಅನುಸರಿಸುತ್ತಿರುವ ಅಧ್ಯಾಪಕರನ್ನು ಅವರು ಪ್ರಶಂಸಿಸಿದರು.ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದಜಿ ಮಾತನಾಡಿ, ಮೌಲ್ಯಾಧಾರಿತ ಶಿಕ್ಷಣ, ಸೌಹಾರ್ದತೆ ಮತ್ತು ಆರ್ಥಿಕ ಜ್ಞಾನದ ಮಹತ್ವ ತಿಳಿಸಿದರು. ಕಡಿಮೆ ವೆಚ್ಚದಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವ ಟ್ರಸ್ಟ್ ಅನ್ನು ಶ್ಲಾಘಿಸಿ, ತಾಂತ್ರಿಕ ಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳೂ ಅಗತ್ಯ ಎಂದು ಅವರು ಹೇಳಿದರು.ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಸಂಸ್ಥಾಪಕಿ ಆನಂದಮ್ಮ ಮತ್ತು ಸೀತಮ್ಮ ಅವರನ್ನುಸ್ಮರಿಸಬೇಕು. ಅವರ ದೂರದೃಷ್ಟಿ ಪ್ರಶಂಸನೀಯ. ಶಿಕ್ಷಣವು ಬೆಳಕಿನಂತೆ ಹರಡಬೇಕು ಎಂದು ತಿಳಿಸಿದ ಅವರು, ಕಂಪ್ಯೂಟರ್ ಸಂಬಂಧಿತ ಶಾಖೆಗಳತ್ತ ಹೆಚ್ಚುತ್ತಿರುವ ಒಲವು ಸಾಮಾಜಿಕ ಅಸಮತೋಲನಕ್ಕೆ ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಟ್ರಸ್ಟ್ ಸದಸ್ಯರು, ಅಧ್ಯಾಪಕರು, ವಿದ್ಯಾರ್ಥಿಗಳು, ಪೋಷಕರು ಸಾರ್ವಜನಿಕರು ಪಾಲ್ಗೊಂಡಿದ್ದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ. ನಟರಾಜ್ ವಂದಿಸಿದರು. ಬಾಕ್ಸ್....ಹತ್ತು ಎಕರೆ ವ್ಯಾಪ್ತಿಯ ಕ್ಯಾಂಪಸ್10 ಎಕರೆ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಈ ಕ್ಯಾಂಪಸ್, ಗುಣಮಟ್ಟದ ತಾಂತ್ರಿಕ ಶಿಕ್ಷಣಕ್ಕೆ ಸೂಕ್ತ ಆಧುನಿಕ ಹಾಗೂ ಅನುಕೂಲಕರ ವಾತಾವರಣ ಹೊಂದಿದೆ. ಎಸ್.ಐ.ಟಿ ಮೈಸೂರು ತಂತ್ರಜ್ಞಾನಾಧಾರಿತ, ಕೌಶಲ್ಯಾಭಿವೃದ್ಧಿ ಹಾಗೂ ಸಮಗ್ರ ಶಿಕ್ಷಣ ನೀಡುವ ಉದ್ದೇಶ ಹೊಂದಿದೆ. ಸಂಸ್ಥೆಯಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮಷೀನ್ ಲರ್ನಿಂಗ್ (ಎಐ ಮತ್ತು ಎಂ.ಎಲ್), ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ (ಸಿಎಸ್‌ಇ), ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮಷೀನ್ ಲರ್ನಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ (ಇಸಿಇ), ಮೆಕ್ಯಾನಿಕಲ್ ಎಂಜಿನಿಯರಿಂಗ್ (ಎಂಇ) ಕೋರ್ಸ್ ನೀಡಲಾಗುತ್ತಿದೆ.ಕ್ಯಾಂಪಸ್ ನಲ್ಲಿ ಸುಸಜ್ಜಿತ ಕೇಂದ್ರ ಗ್ರಂಥಾಲಯ, ಆಧುನಿಕ ಪ್ರಯೋಗಾಲಯ, 800ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಹೊಂದಿರುವ ಹಾಸ್ಟೆಲ್, ಕ್ರೀಡೆ ಮತ್ತು ಫಿಟ್ನೆಸ್ ಸೌಲಭ್ಯ ಲಭ್ಯವಿದೆ.