ದಾಂಡೇಲಿಯಲ್ಲಿ 15 ಹಂದಿಗಳ ನಿಗೂಢ ಸಾವು

| Published : Jan 22 2025, 12:31 AM IST

ಸಾರಾಂಶ

ಹಂದಿಗಳ ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಪಶು ವೈದ್ಯಾಧಿಕಾರಿ ಡಾ. ಅರ್ಚನಾ ಪ್ರಸಾದ ಹಾಗೂ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದಾಂಡೇಲಿ: ನಗರ ಸಮೀಪದ ಕೋಗಿಲಬನ ಗ್ರಾಮದ ಸುತ್ತಮುತ್ತ ಕಳೆದ ಒಂದು ವಾರದ ಅವಧಿಯಲ್ಲಿ ಸುಮಾರು 15 ಹಂದಿಗಳು ನಿಗೂಢವಾಗಿ ಸಾವಿಗೀಡಾಗಿವೆ.ಹಂದಿಗಳ ಸಾವಿಗೆ ಖಚಿತ ಕಾರಣ ತಿಳಿದುಬಂದಿಲ್ಲ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಹಂದಿಗಳ ಸಾವು ವಿಷ ಸೇವನೆಯಿಂದಲೋ, ಸಾಂಕ್ರಾಮಿಕ ರೋಗದಿಂದಲೋ ಅಥವಾ ಬೇರೆ ಕಾರಣದಿಂದಲೋ ಎಂದು ಖಚಿತವಾಗಿಲ್ಲ. ಮರಣೋತ್ತರ ಪರೀಕ್ಷೆಯ ಬಳಿಕವೇ ನಿಖರ ಕಾರಣ ಗೊತ್ತಾಗಲಿದೆ.ಹಂದಿಗಳ ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಪಶು ವೈದ್ಯಾಧಿಕಾರಿ ಡಾ. ಅರ್ಚನಾ ಪ್ರಸಾದ ಹಾಗೂ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಂದಿಗಳ ಸಾವಿನ ಬಗ್ಗೆ ಮರಣೋತ್ತರ ಪರೀಕ್ಷ ಮಾಡಿ ನಿಖರ ಮಾಹಿತಿ ನೀಡುವಂತೆ ವೈದ್ಯರಿಗೆ ಗ್ರಾಮ ಪಂಚಾಯಿತಿ ಸದಸ್ಯ ರಮೇಶ ನಾಯ್ಕ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಫೆ. ೧ರಂದು ಜಿಲ್ಲಾ ಮಟ್ಟದ ಭಜನಾ ಕಾರ್ಯಕ್ರಮ

ಶಿರಸಿ: ಗೌರಿ ಮಹಿಳಾ ಸಮಾಜದ ವತಿಯಿಂದ ಫೆ. ೧ರಂದು ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಭಜನ ಗೀತಾಮೃತ ಜಿಲ್ಲಾ ಮಟ್ಟದ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಗೌರಿ ಮಹಿಳಾ ಸಮಾಜದ ಅಧ್ಯಕ್ಷೆ ನಾಗರತ್ನ ಶೇಟ್ ಹಾಗೂ ಅಂಜನಾ ಹೆಗಡೆ ಅವರು, ಗೌರಿ ಮಹಿಳಾ ಸಮಾಜವು ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಮೂವರಿಂದ ಆರಂಭಗೊಂಡ ಗೌರಿ ಮಹಿಳಾ ಸಮಾಜದಲ್ಲಿ ೬೦೦ಕ್ಕೂ ಅಧಿಕ ಸದಸ್ಯರಿದ್ದಾರೆ. ಫೆ. ೧ರಂದು ಬೆಳಗ್ಗೆ ೧೦ರಿಂದ ೨ ಗಂಟೆಯವರೆಗೆ ಭಜನಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸಂಜೆ ೪ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶಾಸಕ ಭೀಮಣ್ಣ ನಾಯ್ಕ, ಉದ್ಯಮಿ ಆರ್.ಜಿ. ಶೇಟ್ ಕಾನಸೂರು ಸೇರಿ ಹಲವರು ಉಪಸ್ಥಿತರಿರಲಿದ್ದಾರೆ ಎಂದರು.

ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಜನಾ ಮಂಡಳಿಗೆ ₹೨೦೦ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಮೊದಲು ಹೆಸರು ನೋಂದಾಯಿಸಿದ ೨೫ ಭಜನಾ ಮಂಡಳಿಗಳಿಗೆ ಮಾತ್ರ ಅವಕಾಶವಿರುತ್ತದೆ ಎಂದರು.

ಪ್ರಥಮ ಬಹುಮಾನ ₹೩ ಸಾವಿರ, ದ್ವಿತೀಯ ಬಹುಮಾನ ₹೨ ಸಾವಿರ, ತೃತೀಯ ಬಹುಮಾನ ₹೧ ಸಾವಿರ ಹಾಗೂ ಸಮಾಧಾನಕರ ಬಹುಮಾನ ₹೫೦೦ ನಗದು ನೀಡಿ ಗೌರವಿಸಲಾಗುವುದು. ಆಸಕ್ತರು ದಿವ್ಯಾ ೮೧೨೩೬೮೦೮೭೫, ಸೀಮಾ ೬೩೬೦೭೦೩೧೪೭ ಅವರನ್ನು ಸಂಪರ್ಕಿಸಲು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಮಮತಾ ವಿಶಾಲ ಭಟ್ಟ, ಶೈಲಜಾ ಕಿರಣ ಶೇಟ್, ದಿವ್ಯಾ ಹನ್ಮಂತಿಕರ, ಸೀಮಾ ಭಟಕಳ ಮತ್ತಿತರರು ಇದ್ದರು.