ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಆಕಾಶದಲ್ಲಿ ನಿಗೂಢ ಆಕೃತಿ ಪತ್ತೆಯಾಗಿರುವ ಘಟನೆ ಶುಕ್ರವಾರ ಸಂಜೆ ಸುಮಾರು 5 ಗಂಟೆಯ ವೇಳೆ ನಡೆದಿದ್ದು, ಜನರಲ್ಲಿ ಕುತೂಹಲ ಮೂಡಿಸಿದೆ.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಆಕಾಶದಲ್ಲಿ ನಿಗೂಢ ಆಕೃತಿ ಪತ್ತೆಯಾಗಿರುವ ಘಟನೆ ಶುಕ್ರವಾರ ಸಂಜೆ ಸುಮಾರು 5 ಗಂಟೆಯ ವೇಳೆ ನಡೆದಿದ್ದು, ಜನರಲ್ಲಿ ಕುತೂಹಲ ಮೂಡಿಸಿದೆ. ಗೋಲಾಕಾರದ ಈ ಆಕೃತಿ, ಜನರಲ್ಲಿ ತೀವ್ರ ಕುತೂಹಲ ಹಾಗೂ ಆತಂಕ ಮೂಡಿಸಿತು. ಸಂಜೆ ಸುಮಾರು ಒಂದು ಗಂಟೆ ಕಾಲ ಸತತ ಕಾಣಿಸಿಕೊಂಡ ಈ ನಿಗೂಢ ಆಕೃತಿ ಕಂಡು ಗ್ರಾಮಸ್ಥರ ಕೆಲಕ್ಷಣ ದಂಗಾದರು. ಹಲವರು ತಮ್ಮ ಮೊಬೈಲ್‌ನಲ್ಲಿ ಈ ನಿಗೂಢ ಆಕೃತಿಯನ್ನು ಸೆರೆ ಹಿಡಿದರು. ನಮ್ಮ ಗ್ರಾಮಕ್ಕೆ ಏಲಿಯನ್ಸ್ ಬಂದಿರಬಹುದು ಎಂದು ಜನ ಮಾತಾಡಿಕೊಂಡರು.