ನ.15 ರಿಂದ 10 ದಿನಗಳ ಕಾಲ ಪೌರಾಣಿಕ, ಸಾಮಾಜಿಕ ನಾಟಕೋತ್ಸವ: ಶಂಕರೇಗೌಡ

| Published : Nov 09 2024, 01:06 AM IST

ನ.15 ರಿಂದ 10 ದಿನಗಳ ಕಾಲ ಪೌರಾಣಿಕ, ಸಾಮಾಜಿಕ ನಾಟಕೋತ್ಸವ: ಶಂಕರೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ನಾಟಕೋತ್ಸವ ಉದ್ಘಾಟನೆಯಲ್ಲಿ ರಂಗಭೂಮಿ ಕಲಾವಿದ ತೈಲೂರು ಸಿದ್ದರಾಜು ಅವರಿಗೆ ಬಂಗಾರದ ಕಡಗ ಸಮರ್ಪಣೆ, ಕನ್ನಡ ಹಬ್ಬ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು.

ಕನ್ನಡಪ್ರಭ ವಾರ್ತೆ ಭಾರತೀನಗರ

ರಂಗಭೂಮಿ ಚಾರಿಟಬಲ್ ಸೇವಾ ಟ್ರಸ್ಟ್, ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘದ ವಾರ್ಷಿಕೋತ್ಸವದ ಅಂಗವಾಗಿ ನ.15ರಿಂದ 24 ರವರೆಗೆ 10 ದಿನಗಳ ಕಾಲ ನಾಟಕೋತ್ಸವ ನಡೆಯಲಿದೆ ಎಂದು ರಂಗಭೂಮಿ ಕಲಾವಿದರ ಸಂಘದ ಸಿ.ಎ.ಕೆರೆ ಹೋಬಳಿ ಅಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ ತಿಳಿಸಿದರು.

ಭಾರತೀನಗರದಲ್ಲಿ 10 ದಿನಗಳ ಕಾಲ ನಡೆಯುವ ಸಾಮಾಜಿಕ ಹಾಗೂ ಪೌರಾಣಿಕ ನಾಟಕದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಾಟಕೋತ್ಸವ ಉದ್ಘಾಟನೆಯಲ್ಲಿ ರಂಗಭೂಮಿ ಕಲಾವಿದ ತೈಲೂರು ಸಿದ್ದರಾಜು ಅವರಿಗೆ ಬಂಗಾರದ ಕಡಗ ಸಮರ್ಪಣೆ, ಕನ್ನಡ ಹಬ್ಬ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.

ನ.15ರಂದು ಶ್ರೀಕಾಳಿಕಾಂಬ ಕಲಾವಿರದ ಸೇವಾಟ್ರಸ್ಟ್ ನಿಂದ ಹನುಮಂತನಗರದ ನಾಗರಾಜ್ ರಾವ್ ನಿದೇಶನದ ಮಹಿಷಾಸುರ ಮರ್ದಿನಿ ಎಂಬ ಪೌರಾಣಿಕ ನಾಟಕ, ನ.16 ರಂದು ಸಿ.ಎ.ಕೆರೆ ಹೋಬಳಿ ರಂಗಭೂಮಿ ಚಾರಿಟಬಲ್ ಸೇವಾಟ್ರಸ್ಟ್ ನಿಂದ ಕೆ.ಕೆ.ದೊಡ್ಡಿ ಕೃಷ್ಣೋಜಿರಾವ್ ನಿರ್ದೇಶನದ ಶನಿಮಹಾತ್ಮ ಅಥವಾ ರಾಜಾವಿಕ್ರಮ (ಪೌರಾಣಿಕ), ನ.17 ರಂದು ರಂಗಭೂಮಿ ಚಾರಿಟಬಲ್ ಸೇವಾಟ್ರಸ್ಟ್ ಹಾಗೂ ಶ್ರೀಚಾಮುಂಡೇಶ್ವರಿ ಕಲಾ ಬಳಗ ಟಿ.ದಾಸರಹಳ್ಳಿ ಬೆಂಗಳೂರು ವತಿಯಿಂದ ಮಹೇಶ್ ಖರಾಡ್ಯ ನಿರ್ದೇಶನದ ಸಾಮ್ರಾಟ್ ಸುಯೋಧನ (ಪೌರಾಣಿಕ) ನಾಟಕ ಪ್ರದರ್ಶನ ನಡೆಯಲಿದೆ ಎಂದರು.

ನ.18ರಂದು ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದದ ಸಂಘದಿಂದ ಬೀರಿಹುಂಡಿ ಗೋವಿಂದರಾಜ್ ನಿರ್ದೇಶಕನ ಭಕ್ತಪ್ರಹ್ಲಾದ (ಪೌರಾಣಿಕ), ನ.19 ರಂದು ಸುಮುಖ ಸೇವಾಟ್ರಸ್ಟ್ ಮದ್ದೂರು ಹಾಗೂ ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘದಿಂದ ಚೌಡಶೆಟ್ಟರು ಹೆಳವರಹುಂಡಿ ನಿರ್ದೇಶಕನ ದಕ್ಷಯಜ್ಞ (ಪೌರಾಣಿಕ), ನ.20 ರಂದು ಗಭೂಮಿ ಚಾರಿಟಬಲ್ ಸೇವಾಟ್ರಸ್ಟ್ ನಿಂದ ತೊರೆಚಾಕನಹಳ್ಳಿ ಶಂಕರೇಗೌಡ ಹಾಗೂ ಕಳ್ಳಿಮೆಳೆದೊಡ್ಡಿ ಸಿದ್ದರಾಜು ನಿರ್ದೇಶನದ ಚಿಗುರಿದ ಕನಸು ಎಂಬ ಸಾಮಾಜಿಕ ನಾಟಕವನ್ನು ಕಲಾವಿದರು ಪ್ರದರ್ಶಿಸಲಿದ್ದಾರೆ ಎಂದು ತಿಳಿಸಿದರು.

ನ.21 ರಂದು ಕನ್ನಡ ಜ್ಯೋತಿ ಯುವಕರ ಸಂಘ ತೈಲೂರು ವತಿಯಿಂದ ಬೆಳಕೆರೆ ಎ.ಎಂ.ಕೆಂಪೇಗೌಡ ಹಾಗೂ ತೊರೆಚಾಕನಹಳ್ಳಿ ಶಂಕರೇಗೌಡ ನಿರ್ದೇಶಕನ ಬಂಗಾರದ ಗುಡಿ (ಸಾಮಾಜಿಕ ನಾಟಕ), ನ.22 ರಂದು ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದ ಸಂಘ ದಿಂದ ತೊರೆಚಾಕನಹಳ್ಳಿ ಶಂಕರೇಗೌಡ ಹಾಗೂ ಕಳ್ಳಿಮೆಳೆದೊಡ್ಡಿ ಸಿದ್ದರಾಜು ಮತ್ತು ಯಡಗನಹಳ್ಳಿ ಬುಲೆಟ್ ಬಸವರಾಜು ನಿರ್ದೇಶನದ ಬಾಳಿನದಾರಿ ಅಥವಾ ಸಂಸಾರನೌಕೆ (ಸಾಮಾಜಿಕ ನಾಟಕ) ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.

ನ.23 ಶ್ರೀಚೌಡೇಶ್ವರಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಕೆ.ಪಿ.ದೊಡ್ಡಿ ದೇವರಾಜ್ ನಿರ್ದೇಶನ ಮಾಂಗಲ್ಯಭಾಗ್ಯ (ಸಾಮಾಜಿಕ ನಾಟಕ), ನ.24 ರಂದು ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದ ಸಂಘದಿಂದ ಬೆಳಕೆರೆ ಎ.ಎಂ.ಕೆಂಪೇಗೌಡ ಹಾಗೂ ಯಡಗನಹಳ್ಳಿ ಬುಲೆಟ್ ಬಸವರಾಜು ನಿರ್ದೇಶನ ಮಾನವಂತರ ಮನೆ ಅಥವಾ ಮರೆಯದ ಮಾಣಿಕ್ಯ ಎಂಬ ಸಾಮಾಜಿಕ ನಾಟಕಗಳನ್ನು ಕಲಾವಿದರು ಪ್ರದರ್ಶಿಸಲಿದ್ದಾರೆ ಎಂದು ತಿಳಿಸಿದರು.

ಈ ವೇಳೆ ಕಲಾವಿದರಾದ ತೈಲೂರು ಸಿದ್ದರಾಜು, ತಿಪ್ಪೂರು ಅಂದಾನಿ, ಶಿವಲಿಂಗಯ್ಯ, ರಘುವೆಂಕಟೇಗೌಡ, ದೇಶಿಗೌಡ, ಚಿಕ್ಕಬೋರೇಗೌಡ, ಪ್ರಕಾಶಚಾರಿ, ಸಿದ್ದರಾಜು, ವೆಂಕಟೇಶ್, ಶಿವಲಿಂಗಯ್ಯ, ಬುಲೆಟ್ ಬಸವರಾಜು, ದೇವರಹಳ್ಳಿ ದೇವರಾಜು, ಡಿ.ಎ.ಕೆರೆ ಗಜೇಂದ್ರ, ಆನಂದಚಾರಿ, ಕುಪ್ಪುಸ್ವಾಮಿ, ನಗರಕೆರೆ ರವಿ, ಜಯರಾಮು, ಚಿಕ್ಕೈದಹೆಗ್ಡೆ, ಸುರೇಶ, ರಮೇಶ, ಬೀರೇಗೌಡ, ಪುಟ್ಟರಾಜು, ಬೀರೇಶ್ ಸೇರಿದಂತೆ ಹಲವರಿದ್ದರು.