ಎನ್.ಸಿ.ಸಿ. ಆರ್ಮಿ ಕೆಡೆಟ್‌ಗಳಿಗೆ ವಿವಿಧ ಸ್ಪರ್ಧೆ

| Published : Apr 04 2024, 01:05 AM IST

ಸಾರಾಂಶ

ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕಾರ್ಯದರ್ಶಿ ಸಿಎ ಬಿ.ಪಿ. ವರದರಾಯ ಪೈ ಅವರು ಸ್ಪರ್ಧೆ ಉದ್ಘಾಟಿಸಿ, ಎನ್.ಸಿ.ಸಿ.ಯು‌ ಜೀವನದಲ್ಲಿ ಶಿಸ್ತು, ಧೈರ್ಯ ಹಾಗೂ ವೆಕ್ತಿತ್ವವನ್ನು ಬೆಳಸಲು ಸಹಾಯಕವಾಗಿದೆ ಎಂದು ಅಭಿಪ್ರಾಯಪಟ್ಟರು

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಕುಂಜಿಬೆಟ್ಟು ಎಂ.ಜಿ.ಎಂ. ಕಾಲೇಜಿನ ಎನ್.ಸಿ.ಸಿ. ಆರ್ಮಿ ವಿಂಗ್‌ನ ಬೆಳ್ಳಿ ಹಬ್ಬದ ಪ್ರಯುಕ್ತ ಉಡುಪಿ ಜಿಲ್ಲೆಯ ಕಾಲೇಜುಗಳ ಎನ್.ಸಿ.ಸಿ. ಆರ್ಮಿ ಕೆಡೆಟ್‌ಗಳಿಗೆ ವಿವಿಧ ಸ್ಪರ್ಧೆಗಳನ್ನು ಮಾರ್ಚ್ 30ರಂದು ಕಾಲೇಜಿನಲ್ಲಿ ನಡೆಸಲಾಯಿತು.

ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕಾರ್ಯದರ್ಶಿ ಸಿಎ ಬಿ.ಪಿ. ವರದರಾಯ ಪೈ ಅವರು ಸ್ಪರ್ಧೆ ಉದ್ಘಾಟಿಸಿ, ಎನ್.ಸಿ.ಸಿ.ಯು‌ ಜೀವನದಲ್ಲಿ ಶಿಸ್ತು, ಧೈರ್ಯ ಹಾಗೂ ವೆಕ್ತಿತ್ವವನ್ನು ಬೆಳಸಲು ಸಹಾಯಕವಾಗಿದೆ ಎಂದು ಅಭಿಪ್ರಾಯಪಟ್ಟರು. ಉಡುಪಿಯ ವಿವಿಧ ಕಾಲೇಜುಗಳಿಂದ ಬಂದ ಕೆಡೆಟ್ ಗಳಿಗೆ ಅವರು ಶುಭಾಶಯವನ್ನು ಕೋರಿದರು.

ಸುಮಾರು ಎಂಟು ಕಾಲೇಜುಗಳ ಎನ್.ಸಿ.ಸಿ. ಆರ್ಮಿ ಕೆಡೆಟ್‌ಗಳು ಡ್ರಿಲ್, ಸಾಂಸ್ಕೃತಿಕ ಸ್ಪರ್ಧೆ, ಚರ್ಚಾ ಸ್ಪರ್ಧೆ ಹಾಗೂ ಬೆಸ್ಟ್ ಕೆಡೆಟ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಸಮಗ್ರ ಮತ್ತು ಎಂ.ಐ.ಟಿ. ಮಣಿಪಾಲ ರನ್ನರ್ ಆಫ್ ಪ್ರಶಸ್ತಿಗಳನ್ನು ಪಡೆದವು.

ಸ್ಪರ್ಧೆಗಳಲ್ಲಿ ವಿಜೇತರಾದ ಕೆಡೆಟ್‌ಗಳಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನಗಳನ್ನು ನೀಡಲಾಯಿತು. ನಿವೃತ್ತ ಆರ್ಮಿ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಎಂ. ಕೃಷ್ಣ ಶೆಟ್ಟಿ, ಸೈಂಟ್ ಮೇರೀಸ್ ಕಾಲೇಜು ಶಿರ್ವದ ಮಾಜಿ ಅಸೋಸಿಯೇಟ್ ಎನ್‌.ಸಿ.ಸಿ. ಆಫೀಸರ್ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷೀನಾರಾಯಣ ಕಾರಂತ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಕಾಲೇಜಿನ ಎನ್. ಸಿ.ಸಿ. ಆರ್ಮಿ ಅಧಿಕಾರಿ ಕ್ಯಾಪ್ಟನ್ ನವ್ಯಾ, ಕೆಡೆಟ್, ಮಾಜಿ ಕೆಡೆಟ್‌ಗಳು, ಉಪನ್ಯಾಸಕರು, ವಿವಿಧ ಕಾಲೇಜಿನ ಎನ್. ಸಿ. ಸಿ. ಅಧಿಕಾರಿಗಳು ಹಾಜರಿದ್ದರು.