ಸಾರಾಂಶ
ಚೆಲುವೇಗೌಡರು ಪಾಂಡವಪುರ ತಾಲೂಕಿನ ಆಸಕ್ತ ಉಪನ್ಯಾಸಕರಿಗೆ ತಮ್ಮ ಶೈಕ್ಷಣಿಕ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅಚ್ಚುಕಟ್ಟಾಗಿ ಮುನ್ನುಡಿ ಬರೆಯುವ ನೂರಾರು ಸಂಕಲ್ಪದೊಂದಿಗೆ ವಿನೂತನ ತರಬೇತಿ ನೀಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಉಪನ್ಯಾಸಕರ ಹೃದಯದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ವಿಜಯ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಎನ್.ಚಲುವೇಗೌಡರಿಗೆ ವಿಶಿಷ್ಟ ಪೂರ್ಣ ಶೈಕ್ಷಣಿಕ ಸೇವೆ ಗುರುತಿಸಿ ಗುರುಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ತಾಲೂಕಿನ ಕೋಡಹಳ್ಳಿ ಹೊಸೂರು ಗ್ರಾಮದ ಚೆಲುವೇಗೌಡರು ಕ್ರಿಯಾಶೀಲ ಉಪನ್ಯಾಸಕ, ಅತ್ಯುತ್ತಮ ಸಂಘಟನೆ, ಕಲಾವಿದರು ಹಾಗೂ ಸಾಹಿತಿಗಳಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ.
ಚೆಲುವೇಗೌಡರು ತಾಲೂಕಿನ ಆಸಕ್ತ ಉಪನ್ಯಾಸಕರಿಗೆ ತಮ್ಮ ಶೈಕ್ಷಣಿಕ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅಚ್ಚುಕಟ್ಟಾಗಿ ಮುನ್ನುಡಿ ಬರೆಯುವ ನೂರಾರು ಸಂಕಲ್ಪದೊಂದಿಗೆ ವಿನೂತನ ತರಬೇತಿ ನೀಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಉಪನ್ಯಾಸಕರ ಹೃದಯದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.ತಾಲೂಕು ಕಸಾಪ ಅಧ್ಯಕ್ಷರಾಗಿ ಸಾಹಿತ್ಯ, ಸಂಸ್ಕ್ರತಿ ಕ್ಷೇತ್ರದಲ್ಲಿ ಅಪಾರ ಸೇವೆ ಮಾಡಿರುವ ಚೆಲುವೇಗೌಡರಿಗೆ ಸೂರ್ಯ ಫೌಂಡೇಶನ್ ಹಾಗೂ ಸ್ಪಾರ್ಕ್ ಅಕಾಡೆಮಿ ಸಹಯೋಗದಲ್ಲಿ ಅ.16ರಂದು ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಇಂಡೋ ಗ್ಲೋಬ್ ಶಿಕ್ಷಣ ಸಂಸ್ಥೆಯ ಸಮ್ಮೇಳನದ ವೇದಿಕೆಯಲ್ಲಿ ಗುರುಭೂಷಣ ಪ್ರಶಸ್ತಿಯನ್ನು ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ ರಾಜ್ಯಾಧ್ಯಕ್ಷ ಪಿ.ಮಹೇಶ್, ಸೂರ್ಯ ಫೌಂಡೇಶನ್ ಸಂಸ್ಥಾಪಕ ಸೋಮೇಶ ನವೋದಯ, ಸಂತೋಷ್ ಬಂಡೆ, ಚಂದ್ರಶೇಖರ ನಾಯಕ್, ಉಮಾದೇವಿ ಗುಡ್ಡದ ಅವರ ಉಪಸ್ಥಿತಿಯಲ್ಲಿ ನೀಡಿ ಅಭಿನಂದಿಸಲಾಗುವುದು ಎಂದು ತಿಳಿಸಿದ್ದಾರೆ.