ವಕೀಲ ವೃತ್ತಿಯಲ್ಲಿ ಬದ್ಧತೆ ತೋರಲು ಕೌಶಲ ಹೆಚ್ಚಿಸಿಕೊಳ್ಳಿ:ನ್ಯಾ.ಬಿ.ಎಸ್. ಪಾಟೀಲ್

| Published : Mar 25 2024, 12:52 AM IST

ವಕೀಲ ವೃತ್ತಿಯಲ್ಲಿ ಬದ್ಧತೆ ತೋರಲು ಕೌಶಲ ಹೆಚ್ಚಿಸಿಕೊಳ್ಳಿ:ನ್ಯಾ.ಬಿ.ಎಸ್. ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಸುಪ್ರೀಂಕೋರ್ಟ್ನೀಡುವ ತೀರ್ಪುಗಳನ್ನು ಪಾಶ್ಚಾತ್ಯ ದೇಶಗಳೂ ಪಾಲಿಸುತ್ತವೆ. ಹಲವು ಜ್ಞಾನವಂತ ವಕೀಲರು, ನ್ಯಾಯಾಧೀಶರು ಬದ್ಧತೆಗೆ ಹೆಸರಾಗಿದ್ದಾರೆ. ಜ್ಞಾನ, ವಿವೇಕ, ಬದ್ಧತೆ ಹಾಗೂ ವೃತ್ತಿಪರತೆ ಹೊಂದಿರುವ ವಕೀಲರು, ನ್ಯಾಯಾಧೀಶರಿಂದಲೇ ದೇಶದ ವ್ಯವಸ್ಥೆ ಸುಧಾರಣೆ ಸಾಧ್ಯ

ಕನ್ನಡಪ್ರಭ ವಾರ್ತೆ ಮೈಸೂರು

ಕಾನೂನು ವಿದ್ಯಾರ್ಥಿಗಳು ವಕೀಲ ವೃತ್ತಿಯಲ್ಲಿ ಬದ್ಧತೆ ತೋರಬೇಕು. ಸಂಶೋಧನೆ, ವಿಶ್ಲೇಷಣೆ, ವಾದ ಮಂಡನೆಯಲ್ಲಿ ಕೌಶಲಗಳನ್ನು ಹೆಚ್ಚಿಸಿಕೊಳ್ಳಬೇಕು. ಆ ಮೂಲಕ ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಸಲಹೆ ನೀಡಿದರು.

ಮೈಸೂರಿನ ಕುವೆಂಪುನಗರದ ಜೆಎಸ್ಎಸ್ಕಾನೂನು ಕಾಲೇಜಿನಲ್ಲಿ ಸುರಾನಾ ಮತ್ತು ಸುರಾನಾ ಅಂತಾರಾಷ್ಟ್ರೀಯ ಅಟಾರ್ನಿ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಪೊರೇಟ್ ಕಾನೂನು ಕುರಿತು 21ನೇ ರಾಷ್ಟ್ರೀಯ ಸುರಾನಾ ಮತ್ತು ಸುರಾನಾ ಅಣಕು ನ್ಯಾಯಾಲಯ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶದ ಸುಪ್ರೀಂಕೋರ್ಟ್ನೀಡುವ ತೀರ್ಪುಗಳನ್ನು ಪಾಶ್ಚಾತ್ಯ ದೇಶಗಳೂ ಪಾಲಿಸುತ್ತವೆ. ಹಲವು ಜ್ಞಾನವಂತ ವಕೀಲರು, ನ್ಯಾಯಾಧೀಶರು ಬದ್ಧತೆಗೆ ಹೆಸರಾಗಿದ್ದಾರೆ. ಜ್ಞಾನ, ವಿವೇಕ, ಬದ್ಧತೆ ಹಾಗೂ ವೃತ್ತಿಪರತೆ ಹೊಂದಿರುವ ವಕೀಲರು, ನ್ಯಾಯಾಧೀಶರಿಂದಲೇ ದೇಶದ ವ್ಯವಸ್ಥೆ ಸುಧಾರಣೆ ಸಾಧ್ಯ ಎಂದು ಅವರು ತಿಳಿಸಿದರು.

ನ್ಯಾಯಾಲಯದ ಕಾರ್ಯ ವಿಧಾನಗಳನ್ನು ಕರಾರುವಕ್ಕಾಗಿ ಅರಿಯಬೇಕು. ವೃತ್ತಿಪರತೆಯನ್ನು ಬೆಳೆಸಿಕೊಳ್ಳಲು ಅಧ್ಯಯನಶೀಲ ಆಗಿರಬೇಕು. ದೇಶ– ವಿದೇಶದ ಕಾನೂನುಗಳ ಬಗ್ಗೆಯೂ ತಿಳಿದುಕೊಳ್ಳಬೇಕು. ವರ್ತಮಾನದಲ್ಲಿ ರೂಪಿತವಾಗುವ ಕಾನೂನು ಹಾಗೂ ತೀರ್ಪುಗಳು ದೇಶವನ್ನು ಮುನ್ನಡೆಸುವಂತ ಶಕ್ತಿಯನ್ನು ಹೊಂದಿರುತ್ತವೆ ಎಂದು ಅವರು ಹೇಳಿದರು.

ಇದೇ ವೇಳೆ ಕಾರ್ಪೊರೇಟ್ ಕಾನೂನು ಕುರಿತು ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಜೆಎಸ್ಎಸ್ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ಸುರಾನಾ ಮತ್ತು ಸುರಾನಾ ಅಂತಾರಾಷ್ಟ್ರೀಯ ಅಟಾರ್ನಿ ಸಂಸ್ಥೆ ಪ್ರೀತಂ ಸುರಾನಾ, ಜೆಎಸ್ಎಸ್ಕಾನೂನು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಕೆ.ಎಸ್. ಸುರೇಶ್, ಪ್ರಾಂಶುಪಾಲ ಡಾ.ಎಸ್. ನಟರಾಜು, ಹಿರಿಯ ವಕೀಲ ಜಿ. ಶಿವದಾಸ್, ಎಸ್.ವಿ. ಗೌರಮ್ಮ ಇದ್ದರು.