ಎನ್.ಆರ್.ಪುರ ಜ್ವಾಲಾಮಾಲಿನಿ ಜೇಸಿ ಸಂಸ್ಥೆ ವಲಯ 14 ರಲ್ಲೇ ಅತ್ಯುತ್ತಮ ತರಬೇತಿ ನೀಡುತ್ತಿದ್ದು ಉತ್ತಮ ಸ್ಥಾನ ಪಡೆದ ಘಟಕ ಎಂದು ಜೇಸಿ ಸಂಸ್ಥೆ ವಲಯ 14 ರ ಅಧ್ಯಕ್ಷ ಪ್ರಜ್ವಲ್ ಜೈನ್ ಶ್ಲಾಘನೆ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಎನ್.ಆರ್.ಪುರ ಜ್ವಾಲಾಮಾಲಿನಿ ಜೇಸಿ ಸಂಸ್ಥೆ ವಲಯ 14 ರಲ್ಲೇ ಅತ್ಯುತ್ತಮ ತರಬೇತಿ ನೀಡುತ್ತಿದ್ದು ಉತ್ತಮ ಸ್ಥಾನ ಪಡೆದ ಘಟಕ ಎಂದು ಜೇಸಿ ಸಂಸ್ಥೆ ವಲಯ 14 ರ ಅಧ್ಯಕ್ಷ ಪ್ರಜ್ವಲ್ ಜೈನ್ ಶ್ಲಾಘನೆ ವ್ಯಕ್ತಪಡಿಸಿದರು.ಜ್ವಾಲಾಮಾಲಿನ ಜೇಸಿ ಸಂಸ್ಥೆಗೆ ಜೇಸಿ ವಲಯ 14ರ ಅಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ. ತೀರ್ಥಹಳ್ಳಿಯಲ್ಲಿ 8 ಶಾಲಾ ಕಾಲೇಜುಗಳಲ್ಲಿ 3 ಜೇಸಿ ವಲಯ ಗಳ 3 ಘಟಕದ ಅಧ್ಯಕ್ಷರು ಸೇರಿ ಒಂದೇ ದಿನ 40 ತರಬೇತಿದಾರರ ತಂಡದೊಂದಿಗೆ 117 ತರಬೇತಿ ನೀಡಿದ್ದು 2500 ಮಕ್ಕಳು ತರಬೇತಿ ಪ್ರಯೋಜನ ಪಡೆದರು. ಇದೊಂದು ಜೇಸಿ ಇತಿಹಾಸದಲ್ಲಿ ಹೊಸ ದಾಖಲೆ. ಜೆಸಿಐ ಬ್ರಾಂಡ್ ಹೆಸರಿನಲ್ಲಿ ಶ್ರೀನಿಧಿ ಗ್ರಾಫಿಕ್ಸ್ ನಾಮಫಲಕ ಉದ್ಘಾಟಿಸಿದ್ದು ಸಂತೋಷ ತಂದಿದೆ. ವಲಯ 14 ರ ಬ್ಯುಸಿನೆಸ್ ಬೋರ್ಡು ಸಹ ಇದೇ ಪ್ರಥಮ. ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಹಾಗೂ ತಂಡ ಉತ್ಸಾಹದಿಂದ ಸಮಾಜ ಮುಖಿ ಕೆಲಸ ಮಾಡುತ್ತಿದ್ದಾರೆ. ಜೇಸಿ ಸದಸ್ಯರು ಕಟ್ಟುವ ಶುಲ್ಕಕ್ಕೆ ಜೆಸಿಐ ಭಾರತ ಸಹ ವೆಲ್ಫೇರ್ ನಿಧಿ ಕೊಡುತ್ತದೆ ಎಂದರು.
ಸಭೆ ಅಧ್ಯಕ್ಷತೆ ವಹಿಸಿದ್ದ ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಆದರ್ಶ ಬಿ ಗೌಡ ಮಾತನಾಡಿ ವಲಯ 14 ರ ಅಧ್ಯಕ್ಷರ ಅಧಿಕೃತ ಭೇಟಿ ದಿನದಂದೇ ಸದಸ್ಯರಿಗೆ ತರಬೇತಿ ನೀಡುತ್ತಿದ್ದೇವೆ. ಸೆ.6 ರಂದು ಮಡಕೇರಿ ಶುಂಠಿಕೊಪ್ಪದಲ್ಲಿ ನಡೆವ ಸಮ್ಮೇಳನದಲ್ಲಿ ಎಲ್ಲಾ ಸದಸ್ಯರು ಭಾಗವಹಿಸಬೇಕು ಎಂದು ಮನವಿ ಮಾಡಿದರು.ಜೆಸಿಐ ಕೊಪ್ಪ ಅಧ್ಯಕ್ಷೆ ಸುನೀತ ನೆಲಗದ್ದೆ ,ಎಸ್.ಎಸ್. ಸುಶಾಂತ್ ವರ್ಕ್ ಲೈಪ್ ಬ್ಯಾಲೆನ್ಸ್ ಎಂಬ ವಿಷಯದ ಬಗ್ಗೆ ತರಬೇತಿ ನೀಡಿದರು. ಸ್ವಾತಂತ್ರ್ಯ ದಿನಾಚರಣೆಯಲ್ಲಿ 220 ಅಡಿ ಎತ್ತರದ ಟವರ್ ಮೇಲೆ ಬಾವುಟ ಹಾರಿಸಿದ ಜೇಸಿ ಸದಸ್ಯ ಜೋಯಿ ಬ್ರೋ ಅವರನ್ನು ಸನ್ಮಾನಿಸಲಾಯಿತು.
ಬಿಳಾಲುಕೊಪ್ಪ ಜೇಸಿ ಅಧ್ಯಕ್ಷ ವೈಶಾಖ ಶ್ರೇಣಿಕ್, ವಲಯ ಅಧ್ಯಕ್ಷ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಾಂತ್, ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಕಾರ್ಯದರ್ಶಿ ರಜಿತ್ ವಗ್ಗಡೆ ಹಾಗೂ ಜೇಸಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಇದ್ದರು.